ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು ಇಲ್ಲಿದೆ ಅವಕಾಶ

Posted By:

ವಿಶೇಷ ಶಿಕ್ಷಣದಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿಯ ಧ್ಯೇಯದೊಂದಿಗೆ 2000-01ರಿಂದ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರಗಳು ಪ್ರಾರಂಭವಾದವು. ಇವುಗಳು ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ವತಿಯಿಂದ ವಿಕಲಚೇತನರ ಕ್ಷೇತ್ರದಲ್ಲಿ ನಡೆಸುತ್ತಿರುವ ಏಕೈಕ ತರಬೇತಿ ಸಂಸ್ಥೆಯಾಗಿವೆ.

ತರಬೇತಿ ಕೇಂದ್ರದಲ್ಲಿ 2 ತರಬೇತಿ ಕಾರ್ಯಕ್ರಮಗಳು ಲಭ್ಯವಿದ್ದು, ಅಂಧ ಮಕ್ಕಳಿಗೆ ಶಿಕ್ಷಕರಾಗಲು D.Ed.Spl.Ed.(VI) ಹಾಗೂ ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು D.Ed.Spl.Edu.(HI ತರಬೇತಿಗಳನ್ನು ಭಾರತೀಯ ಪುನರ್ವಸತಿ ಮಂಡಳಿ (RCI) ನವದೆಹಲಿಯವರ ಮಾನ್ಯತೆಯೊಂದಿಗೆ ನಡೆಸಲಾಗುತ್ತಿದೆ.

ತರಬೇತಿ ಕೇಂದ್ರವು ನುರಿತ ಬೋಧನಾ ವರ್ಗವನ್ನು ಹೊಂದಿರುವುದರ ಜೊತೆಗೆ, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ ಹಾಗೂ ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ಲ್ಯಾಬ್‍ಗಳಂತಹ ಸೌಲಭ್ಯವನ್ನು ಹೊಂದಿದೆ. ಪ್ರಶಿಕ್ಷಣಾರ್ಥಿಗಳಿಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುತ್ತಿರುವ ವಸತಿ ನಿಲಯಗಳಲ್ಲಿ ವಸತಿ ಲಭ್ಯವಿರುತ್ತದೆ.

ವಿಕಲಚೇತನ ಮಕ್ಕಳ ಶಿಕ್ಷಕರ ತರಬೇತಿಗೆ ಅರ್ಜಿ ಆಹ್ವಾನ

 ಉದ್ಯೋಗಾವಕಾಶಗಳು

ತರಬೇತಿ ಕೇಂದ್ರದಲ್ಲಿ ವಿಶೇಷ ಡಿ.ಇಡಿ.ಯನ್ನು ಪೂರೈಸಿದ ಅಭ್ಯರ್ಥಿಗಳು-

  1. ವಿಶೇಷ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ ಸೇವೆ ಸಲ್ಲಿಸಬಹುದು.
  2. ಶಿಕ್ಷಣ ಇಲಾಖೆಯು ನಡೆಸುವ TET ಪರೀಕ್ಷೆ ಮತ್ತು ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಅರ್ಹರಾಗಿರುತ್ತಾರೆ ಹಾಗೂ ನೇಮಕಗೊಂಡಿರುತ್ತಾರೆ.
  3. ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ತಜ್ಞರಾಗಿ ಕಾರ್ಯನಿರ್ವಹಿಸಬಹುದು.
  4. ಜಿಲ್ಲಾ ಪುನರ್ವಸತಿ ಕೇಂದ್ರಗಳಲ್ಲಿ ವಿಶೇಷ ತಜ್ಞರಾಗಿ ಸೇವೆಸಲ್ಲಿಸಬಹುದು.
  5. ಸರ್ವ ಶಿಕ್ಷಣ ಅಭಿಯಾನದಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು.
  6. ಸಾಮಾನ್ಯ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು

ಅರ್ಜಿಗಳ ಲಭ್ಯತೆ

ಅರ್ಜಿಗಳು ಮೈಸೂರು ಜಿಲ್ಲಾ ಅಂತರ್ಜಾಲದಲ್ಲಿ ಲಭ್ಯವಿರುತ್ತದೆ ಅಥವಾ ಆಯಾ ಜಿಲ್ಲೆಗಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿಗಳಲ್ಲಿ ಲಭ್ಯವಿರುತ್ತದೆ ಅಥವಾ ಮೈಸೂರಿನ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರವನ್ನು ಸಂಪರ್ಕಿಸುವುದು.

ತರಬೇತಿಗಳು

ವಿಶೇಷ ಶಿಕ್ಷಣದಲ್ಲಿ ಡಿಪ್ಲೊಮ (ದೃಷ್ಠಿದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು)

ತರಬೇತಿಯ ಹೆಸರು : D.Ed.Spl.Ed.(VI): D.Ed Special Education-Visual Impairment
ಅವಧಿ: 2 ವರ್ಷಗಳು ( 4 ಸೆಮಿಸ್ಟರ್‍ಗಳು)
ಅರ್ಹತೆ: PUCಯಲ್ಲಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು(ಎಸ್.ಸಿ/ಎಸ್.ಟಿ/ ವಿಕಲಚೇತನರು- ಶೇ.45)
ಗರಿಷ್ಠ ದಾಖಲಾತಿ: 25
ಬೋಧನಾ ಮಾಧ್ಯಮ: ಕನ್ನಡ
ನಿಗದಿತ ಶುಲ್ಕ: ಪ್ರತಿ ಶೈಕ್ಷಣಿಕ ವರ್ಷಕ್ಕೆ ರೂ. 10,500/- ಬೋಧನಾ ಶುಲ್ಕ (ಎಸ್.ಸಿ/ಎಸ್.ಟಿ/ಅಂಧ/ಅಲ್ಪದೃಷ್ಠಿ/ದೈಹಿಕ ವಿಕಲಚೇತನರಿಗೆ ಸರ್ಕಾರದಿಂದ ಶುಲ್ಕ ಮರುಪಾವತಿ ಸೌಲಭ್ಯ ಇರುತ್ತದೆ)
ಭದ್ರತಾ ಠೇವಣಿ ರೂ. 2000/-

ವಿಶೇಷ ಶಿಕ್ಷಣದಲ್ಲಿ ಡಿಪ್ಲೊಮ (ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು)

ತರಬೇತಿಯ ಹೆಸರು : D.Ed.Spl.Edu.(HI) : D.Ed Special Education- Hearing Impairment
ಅವಧಿ : 2 ವರ್ಷಗಳು ( 4 ಸೆಮಿಸ್ಟರ್‍ಗಳು)
ಅರ್ಹತೆ: PUಅಯಲ್ಲಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.(ಎಸ್.ಸಿ/ಎಸ್.ಟಿ/ ವಿಕಲಚೇತನರು- ಶೇ.45)
ಗರಿಷ್ಠ ದಾಖಲಾತಿ : 25
ಬೋಧನಾ ಮಾಧ್ಯಮ : ಕನ್ನಡ
ನಿಗದಿತ ಶುಲ್ಕ : ಯಾವುದೇ ಬೋಧನಾ ಶುಲ್ಕ ಇರುವುದಿಲ್ಲ (ಉಚಿತ)
ಭದ್ರತಾ ಠೇವಣಿ ರೂ. 2000/-

ಸೂಚನೆ

  • ದೈಹಿಕ ನ್ಯೂನತೆವುಳ್ಳವರು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ಪ್ರವೇಶವಿರುತ್ತದೆ.
  • ಈ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
  • ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ ಭದ್ರತಾ ಠೇವಣಿಯನ್ನು ಮರುಪಾವತಿಸಲಾಗುತ್ತದೆ.

ಪ್ರವೇಶಾತಿಯ ವಿಧಾನ

ಪ್ರವೇಶಾತಿಗಾಗಿ ಅಭ್ಯರ್ಥಿಯು ದಾಖಲಾತಿ ಪ್ರಾಧಿಕಾರವಾದ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರವು ನಡೆಸುವ ಸಂದರ್ಶನಕ್ಕೆ ಕಡ್ಡಾಯವಾಗಿ ಮೂಲ ದಾಖಲಾತಿಗಳೊಂದಿಗೆ ಹಾಜರಾಗತಕ್ಕದ್ದು. ಸಂದರ್ಶನ ಹಾಗೂ ದಾಖಲಾತಿಗಳ ಪರಿಶೀಲನೆ ನಂತರ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 10-07-2017

ಸಂದರ್ಶನ ದಿನಾಂಕ

  • ವಿ.ಐ ವಿಭಾಗಕ್ಕೆ 12-07-2017, ಸಮಯ ಬೆಳಿಗ್ಗೆ 10.30
  • ಹೆಚ್.ಐ ವಿಭಾಗಕ್ಕೆ 13-07-2017, ಸಮಯ ಬೆಳಿಗ್ಗೆ 10.30

ಸ್ಥಳ 

ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ
ಸರ್ಕಾರಿ ಅಂಧ ಮಕ್ಕಳ ಪಾಠ ಶಾಲೆಯ ಆವರಣ,
ಪುಲಕೇಶಿ ರಸ್ತೆ, ತಿಲಕ್‍ನಗರ, ಮೈಸೂರು-570001
ದಿನಾಂಕ : 15-07-2017 ರಂದು ಅಂತಿಮ ಪಟ್ಟಿಯನ್ನು ಸಂಜೆ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು

ಹೆಚ್ಚಿನ ಮಾಹಿತಿಗಾಗಿh www.mysore.nic.in ಗಮನಿಸಿ

English summary
Applications are invited from Department for Empowerment of Differently abled & Senior citizen for the D.Ed.Special Education.
Please Wait while comments are loading...