ಬೆಂಗಳೂರು ವಿವಿಯಲ್ಲಿ ವಿದೇಶಿ ಭಾಷೆ ಅಧ್ಯಯನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು ವಿಶ್ವವಿದ್ಯಾಲಯವು ವಿದೇಶಿ ಭಾಷೆಗಳಲ್ಲಿ ಲಭ್ಯವಿರುವ ಸರ್ಟಿಫಿಕೇಟ್, ಡಿಪ್ಲೊಮಾ, ಹೈಯರ್ ಡಿಪ್ಲೊಮಾ, ಅಡ್ವಾನ್ಸ್ ಡಿಪ್ಲೊಮಾ ಕೋರ್ಸುಗಳ ಅಧ್ಯಯನಕ್ಕೆ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯವು ವಿದೇಶಿ ಭಾಷೆಗಳಲ್ಲಿ ಲಭ್ಯವಿರುವ ಸರ್ಟಿಫಿಕೇಟ್, ಡಿಪ್ಲೊಮಾ, ಹೈಯರ್ ಡಿಪ್ಲೊಮಾ, ಅಡ್ವಾನ್ಸ್ ಡಿಪ್ಲೊಮಾ ಕೋರ್ಸುಗಳ ಅಧ್ಯಯನಕ್ಕೆ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರೆಗ್ಯುಲರ್ ಮತ್ತು ವಾರಾಂತ್ಯದ ಕೋರ್ಸುಗಳು ಲಭ್ಯವಿದ್ದು, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಇಟಾಲಿಯನ್, ಪೋರ್ಚುಗೀಸ್,ಜಪಾನಿಸ್,ಚೈನಿಸ್, ಕೊರಿಯನ್,ಫಿನ್ನಿಷ್, ರಷ್ಯನ್ ಮತ್ತು ಅರೇಬಿಕ್ ಭಾಷೆಗಳ ಅಧ್ಯಯನಕ್ಕೆ ಅವಕಾಶವಿದೆ.

ರೆಗ್ಯುಲರ್/ವಾರಾಂತ್ಯದ ಸರ್ಟಿಫಿಕೇಟ್ ಕೋರ್ಸ್

ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಕೋರ್ಸ್ ಪೂರ್ಣಗೊಳಿಸಿರಬೇಕು
ಡಿ.ಡಿ ಮೊತ್ತ: ರೂ.5800/-(ರೆಗ್ಯುಲರ್)
ಡಿ.ಡಿ ಮೊತ್ತ: ರೂ.6800/-(ವಾರಾಂತ್ಯ)
ಸರ್ಟಿಫಿಕೇಟ್ ಕೋರ್ಸಿಗೆ ಲಭ್ಯವಿರುವ ಭಾಷೆಗಳು:ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಇಟಾಲಿಯನ್, ಪೋರ್ಚುಗೀಸ್,ಜಪಾನಿಸ್,ಚೈನಿಸ್, ಕೊರಿಯನ್,ಫಿನ್ನಿಷ್, ರಷ್ಯನ್ ಮತ್ತು ಅರೇಬಿಕ್ ಭಾಷೆಗಳ ಅಧ್ಯಯನಕ್ಕೆ ಅವಕಾಶವಿದೆ.

ವಿದೇಶಿ ಭಾಷೆ ಅಧ್ಯಯನಕ್ಕೆ ಅರ್ಜಿ ಆಹ್ವಾನ

ರೆಗ್ಯುಲರ್ /ವಾರಂತ್ಯದ ಡಿಪ್ಲೊಮಾ ಕೋರ್ಸ್

ವಿದ್ಯಾರ್ಹತೆ: ದ್ವಿತೀಯ ಪಿಯಸಿಯಲ್ಲಿ ಫ್ರೆಂಚ್ ಅಧ್ಯಯನ ಮಾಡಿರಬೇಕು ಆಥವಾ ಸಂಬಂಧ ಪಟ್ಟ ಭಾಷೆಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಮುಗಿಸಿರಬೇಕು.
ಡಿ.ಡಿ ಮೊತ್ತ: ರೂ.6800/-(ರೆಗ್ಯುಲರ್)
ಡಿ.ಡಿ ಮೊತ್ತ: ರೂ.7800/-(ವಾರಾಂತ್ಯ)
ಡಿಪ್ಲೊಮಾ ಕೋರ್ಸಿಗೆ ಲಭ್ಯವಿರುವ ಭಾಷೆಗಳು: ಫ್ರೆಂಚ್,ಜರ್ಮನ್, ಸ್ಪ್ಯಾನಿಷ್,ಇಟಾಲಿಯನ್,ಜಪಾನಿಸ್, ಚೈನಿಸ್ ಮತ್ತು ಕೊರಿಯನ್.

ರೆಗ್ಯುಲರ್/ವಾರಾಂತ್ಯದ ಹೈಯರ್ ಡಿಪ್ಲೊಮಾ ಕೋರ್ಸ್

ವಿದ್ಯಾರ್ಹತೆ: ಆಯಾ ಭಾಷೆಗಳಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ಪದವಿ ಹೊಂದಿರಬೇಕು
ಡಿ.ಡಿ ಮೊತ್ತ: ರೂ.7800/-(ರೆಗ್ಯುಲರ್)
ಡಿ.ಡಿ ಮೊತ್ತ: ರೂ.8800/-(ವಾರಾಂತ್ಯ)
ಹೈಯರ್ ಡಿಪ್ಲೊಮಾ ಕೋರ್ಸಿಗೆ ಲಭ್ಯವಿರುವ ಭಾಷೆಗಳು: ಫ್ರೆಂಚ್,ಜರ್ಮನ್, ಸ್ಪ್ಯಾನಿಷ್,ಇಟಾಲಿಯನ್,ಜಪಾನಿಸ್ ಮತ್ತು ಚೈನಿಸ್ .

ರೆಗ್ಯುಲರ್/ವಾರಾಂತ್ಯದ ಅಡ್ವಾನ್ಸಡ್ ಡಿಪ್ಲೊಮಾ ಕೋರ್ಸ್

ವಿದ್ಯಾರ್ಹತೆ: ಆಯಾ ಭಾಷೆಗಳಲ್ಲಿ ಹೈಯರ್ ಡಿಪ್ಲೊಮಾ ಕೋರ್ಸ್ ಮುಗಿಸಿರಬೇಕು.
ಡಿ.ಡಿ ಮೊತ್ತ: ರೂ.9800/-
ಅಡ್ವಾನ್ಸಡ್ ಡಿಪ್ಲೊಮಾ ಕೋರ್ಸಿಗೆ ಲಭ್ಯವಿರುವ ಭಾಷೆಗಳು: ಫ್ರೆಂಚ್,ಜರ್ಮನ್, ಸ್ಪ್ಯಾನಿಷ್, ಜಪಾನಿಸ್ ಮತ್ತು ಚೈನಿಸ್ .

ಸೂಚನೆ

ಡಿ.ಡಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ಮಾತ್ರ ತೆಗೆಯಲು ಅವಕಾಶವಿದೆ. "FINANCE OFFICER, BANGALORE UNIVERSITY, BANGALORE" ಇವರ ಹೆಸರಿಗೆ ಪಡೆಯತಕ್ಕದ್ದು.

ಅರ್ಜಿ ನಮೂನೆಗಳನ್ನು ರೂ.300/- ಶುಲ್ಕ ಪಾವತಿಸಿ ವಿದೇಶಿ ಅಧ್ಯಯನ ವಿಭಾಗದಿಂದ ಪಡೆಯಬಹುದಾಗಿದೆ.
ವಿಳಾಸ: ವಿದೇಶಿ ಭಾಷೆಗಳ ಅಧ್ಯಯನ ವಿಭಾಗ, ಬೆಂವಿವಿ, ಪಿ.ಕೆ.ಬ್ಲಾಕ್, ಅರಮನೆ ರಸ್ತೆ.

ಪ್ರಮುಖ ದಿನಾಂಕಗಳು

ದಂಡ ರಹಿತ ದಾಖಲಾತಿಗೆ ಕೊನೆಯ ದಿನಾಂಕ: ಜುಲೈ 24,2017

ರೂ.200/- ದಂಡ ಸಹಿತ ದಾಖಲಾತಿಗೆ ಕೊನೆಯ ದಿನಾಂಕ: ಜುಲೈ 29,2017

ದಾಖಲಾತಿ ಸಮಯ:ಸೋಮವಾರದಿಂದ ಶನಿವಾರದವರೆಗೂ ಬೆಳಗ್ಗೆ.11:00 ರಿಂದ ಸಂಜೆ 5:00

ದಾಖಲಾತಿಗೆ ಬೇಕಾದ ದಾಖಲೆಗಳು

  • ದ್ವಿತೀಯ ಪಿಯುಸಿ ಅಂಕಪಟ್ಟಿ (ನಕಲು ಪ್ರತಿ+ ಮೂಲ ಪ್ರತಿ)
  • ಪಾಸ್ ಪೋರ್ಟ್ ಅಳತೆಯ ಎರಡು ಇತ್ತೀಚಿನ ಭಾವಚಿತ್ರ
  • ಎಂಪ್ಲಾಯ್ಮೆಂಟ್ ಸರ್ಟಿಫಿಕೇಟ್ (ವಾರಾಂತ್ಯದ ಕೋರ್ಸ್ ಬಯಸುವವರಿಗೆ)


ಹೆಚ್ಚಿನ ಮಾಹಿತಿಗಾಗಿ:
ದೂರವಾಣಿ ಸಂಖ್ಯೆ 080-22961280 ಸಂಪರ್ಕಿಸಿ.

For Quick Alerts
ALLOW NOTIFICATIONS  
For Daily Alerts

English summary
Bangalore university invites application for admission to the certificate/diploma/higher diploma/advanced diploma courses in foreign languages.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X