ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇನ್ಟಿಗ್ರೇಟೆಡ್ ಪಿಜಿ ಕೋರ್ಸ್ ಗೆ ಪ್ರವೇಶಾತಿ

ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಆಸಕ್ತರು ಜೂನ್ 24 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2017-18 ನೇ ಸಾಲಿನ ಐದು ವರ್ಷಗಳ ಇನ್ಟೆಗ್ರೇಟೆಡ್ ಪಿಜಿ ಕೋರ್ಸ್ ಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಆಸಕ್ತರು ಜೂನ್ 24 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೋರ್ಸ್ ವಿವರ

ಕೋರ್ಸ್ ಹೆಸರು: ಇಂಟೆಗ್ರೇಟೆಡ್ ಬಿ.ಎಸ್ಸಿ-ಎಂ.ಎಸ್ಸಿ ಬಯೋಲಾಜಿಕಲ್ ಸೈನ್ಸ್
ಕೂರ್ಸ್ ಅವಧಿ: ಐದು ವರ್ಷ.

ಬಯಾಲಾಜಿಕಲ್ ಸೈನ್ಸ್ ಪ್ರವೇಶಾತಿ

ವಿದ್ಯಾರ್ಹತೆ

ದ್ವಿತೀಯ ಪಿಯುಸಿಯಲ್ಲಿ ಭಾಷಾ ವಿಷಯದಲ್ಲಿ ಸೇರಿದಂತೆ ಸರಾಸರಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಎಸ್.ಸಿ/ಎಸ್.ಟಿ/ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ ಶೇ.5ರಷ್ಟು ವಿನಾಯಿತಿ ಇದೆ.

ಅರ್ಜಿ ಸಲ್ಲಿಕೆ

  • ಅರ್ಜಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜ್ ಕ್ಯಾಂಪಸ್, ಪ್ಯಾಲೇಸ್ ರಸ್ತೆ, ಬೆಂಗಳೂರು-560001 ಇಲ್ಲಿ ವಿತರಿಸಲಾಗುವುದು.
  • ಅರ್ಜಿ ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ಡಿಡಿಯನ್ನು ನೀಡಿ ಅರ್ಜಿ ಪಡೆಯಲು ಸೂಚಿಸಲಾಗಿದೆ.
  • ಆನ್-ಲೈನ್ ಮೂಲಕವೂ ಅರ್ಜಿಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದ್ದು, ಆನ್-ಲೈನ್ ಮೂಲಕ ಅರ್ಜಿಗಳನ್ನು ಪಡೆದ ಅಭ್ಯರ್ಥಿಗಳು ಡಿಡಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಕಳುಹಿಸಬಹುದಾಗಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.400/-
  • ಎಸ್.ಸಿ/ಎಸ್.ಟಿ/ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ ರೂ.200/-
  • ಡಿಡಿಯನ್ನು "Finance officer, Bangalore university, Bangalore" ಇವರ ಹೆಸರಿಗೆ ಸಂದಾಯವಾಗುವಂತೆ ಪಡೆಯತಕ್ಕದ್ದು.

ಸೂಕ್ತ ದಾಖಲೆಗಳ ಪ್ರತಿಯೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಅಂಚೆ ಮೂಲಕ ಅಥವಾ ಸ್ವತಃ ಅಭ್ಯರ್ಥಿಗಳೇ ತಲುಪಿಸಬಹುದಾಗಿದೆ.
ಅರ್ಜಿಯ ಲಕೋಟೆ ಮೇಲೆ ಯಾವ ಕೋರ್ಸಿಗೆ ಅರ್ಜಿ ಎನ್ನುವುದನ್ನು ಸ್ಪಷ್ಟವಾಗಿ ದಪ್ಪಾಕ್ಷರದಲ್ಲಿ ನಮೂದಿಸಲು ಸೂಚಿಸಿದೆ.

ಹೊರವಲಯದ ಅಭ್ಯರ್ಥಿಗಳು ಎ4 ಅಳತೆರ ಸ್ವವಿಳಾಸದ ವಿವರವುಳ್ಳ 50 ರೂಗಳ ಸ್ಟಾಂಪ್ ಇರುವ ಲಕೋಟೆಯ ಮೂಲಕ ಪಡೆಯಬಹುದಾಗಿದೆ.

ಪ್ರಮುಖದ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-06-2017
  • ರೂ.100/-ರ ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-06-2017
  • ಮೆರಿಟ್ ಲಿಸ್ಟ್ ಪ್ರಕಟಿಸುವ ದಿನಾಂಕ: 03-07-2017
  • ಸೀಟು ಹಂಚಿಕೆಗೆ ಕೌನ್ಸಿಲಿಂಗ್ ನಡೆಯುವ ದಿನಾಂಕ: 06-07-2017

ಅರ್ಜಿ ಸಲ್ಲಿಸುವ ವಿಳಾಸ

ಬಯೋಲಾಜಿಕಲ್ ಸೈನ್ಸ್ (ಇನ್ಟಿಗ್ರೇಟೆಡ್ ಎಂ.ಎಸ್ಸಿ)
ಲೈಫ್ ಸೈನ್ಸ್ ವಿಭಾಗ, (ಸೈಕಾಲಜಿ ಬಿಲ್ಡಿಂಡ್)
ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ,
ಬೆಂಗಳೂರು-560056

ಹೆಚ್ಚಿನ ವಿವರಗಳಿಗಾಗಿ: ಬೆಂಗಳೂರು ವಿಶ್ವವಿದ್ಯಾಲಯದ ವೆಬ್ಸೈಟ್ ವಿಳಾಸ bangaloreuniversity.ac.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
Bangalore university invites application from students who have passed PUC or equivalent in the prescribed form for admission to the five year integrated PG course for the year 2017-18
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X