ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಪ್ರವೇಶಾತಿ

2017-18 ನೇ ಸಾಲಿನ ಪ್ರವೇಶಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸುಗಳ ಅಧ್ಯಯನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

2017-18 ನೇ ಸಾಲಿನ ಪ್ರವೇಶಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸುಗಳ ಅಧ್ಯಯನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಧ್ಯಯನದ ಕೋರ್ಸುಗಳ ವಿಷಯಗಳು

  • ಹಿಂದುಸ್ತಾನಿ ಸಂಗೀತ: ಡಿಪ್ಲೊಮಾ. ಬಿ.ಎ, ಎಂ,ಎ-ಗಾಯನ, ತಬಲಾ, ಸಿತಾರ್
  • ಕರ್ನಾಟಕ ಸಂಗೀತ: ಡಿಪ್ಲೊಮಾ, ಬಿ.ಎ, ಎಂ,ಎ-ಗಾಯನ, ವೀಣೆ, ಪಿಟೀಲು, ಮೃದಂಗ
  • ಭರತನಾಟ್ಯ, ನಾಟಕ: ಡಿಪ್ಲೊಮಾ, ಬಿ.ಎ., ಮತ್ತು ಎಂ.ಎ
  • ಯಕ್ಷಗಾನ: ಡಿಪ್ಲೊಮಾ (ಕನಿಷ್ಠ ೧೦ ವಿದ್ಯಾರ್ಥಿಗಳಿದ್ದರೆ ಮಾತ್ರ)
  • ಸರ್ಟಿಫಿಕೇಟ್ ಕೋರ್ಸುಗಳು: ಭಕ್ತಿ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ಗಮಕವಾಚನ, ಹಾರ್ಮೋನಿಯಂ, ತಬಲಾ, ಕೊಳಲು, ಪಿಟೀಲು, ಯಕ್ಷಗಾನ, ರಂಗ ಸಂಗೀತ, ಯೋಗ, ನಾಟಕ (6 ತಿಂಗಳ ಅವಧಿಗೆ)
ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಪ್ರವೇಶಾತಿ

ಸೂಚನೆ: 16 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ ಮೈಸೂರು, ಮಂಡ್ಯ ಹಾಗೂ ಹುಣಸೂರು ಅಧ್ಯಯನ ಕೇಂದ್ರಗಳಲ್ಲಿ ಮಾತ್ರ

ಪ್ರವೇಶಾತಿ ಹೊಂದಲು ಪಡೆದಿರಬೇಕಾದ ವಿದ್ಯಾರ್ಹತೆ

  • ಡಿಪ್ಲೊಮಾ ಕೋರ್ಸ್: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
  • ಬಿ.ಎ ಪದವಿ: ಯಾವುದೇ ವಿಷಯದಲ್ಲಿ ಪಿಯುಸಿ ಪಾಸಾಗಿರಬೇಕು ಮತ್ತು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಇಲ್ಲವೇ ತತ್ಸಮಾನ ಪರೀಕ್ಷೆಯ ಕಲಾ ಗುಣಮಟ್ಟ ಹೊಂದಿರಬೇಕು.
  • ಎಂ.ಎ ಸ್ನಾತಕೋತ್ತರ ಪದವಿ: ಯಾವುದೇ ವಿಷಯದಲ್ಲಿ ಪಿಯುಸಿ ಪಾಸಾಗಿರಬೇಕು ಮತ್ತು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಇಲ್ಲವೇ ತತ್ಸಮಾನ ಪರೀಕ್ಷೆಯ ಕಲಾ ಗುಣಮಟ್ಟ ಹೊಂದಿರಬೇಕು.
  • ಅರ್ಹತಾ ಪ್ರತಿಶತ: ಸಾಮಾನ್ಯ ಅಭ್ಯರ್ಥಿ 55%. ಪ.ಜಾ.,ಪ.ಪಂ ಅಭ್ಯರ್ಥಿ 50%.

ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ನೇರವಾಗಿ ಅಥವಾ ಅಂಚೆಯ ಮೂಲಕ ವಿಶ್ವವಿದ್ಯಾಲಯದ ಕಛೇರಿಯಿಂದ ಪಡೆದುಕೊಳ್ಳಬಹುದು.

ಅರ್ಜಿ ಶುಲ್ಕ

ಎಲ್ಲಾ ಕೋರ್ಸುಗಳ ವಿವರಣಾ ಪುಸ್ತಕ ಮತ್ತು ಅರ್ಜಿ ಶುಲ್ಕ 200.00 ರೂ. ಪ.ಜಾ/ಪ.ಪಂ ವಿದ್ಯಾರ್ಥಿಗಳಿಗೆ 100.00 ನಿಗದಿತ ಮೊತ್ತವನ್ನು ಪಾವತಿಸಲು ವಿಶ್ವವಿದ್ಯಾಲಯದಲ್ಲಿ ಚಲನ್ ಪಡೆದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಕೃಷ್ಣಮೂರ್ತಿಪುರಂ ಈ ಶಾಖೆಗೆ ಸಂದಾಯ ಮಾಡಿದ ಚಲನ್ ನೀಡಿ ಅರ್ಜಿ ಪಡೆದುಕೊಳ್ಳಬಹುದಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಪಡೆಯುವ ದಿನಾಂಕ: 22-05-2017
  • ಎಂ.ಎ ಪದವಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2017
  • ಇತರೆ ಕೋರ್ಸುಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-06-2017
  • ದಂಡ ಶುಲ್ಕದೊಂದಿಗೆ: 15-06-2017

ವಿಶೇಷ ಸೂಚನೆ

1. 2017-18 ಸಾಲಿನಿಂದ ಸ್ನಾತಕೋತ್ತರ ಪದವಿಗಳಿಗೆ ಪ್ರದರ್ಶಕ ಕಲೆಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಿರ್ವಹಣೆ ಎಂಬ ಹೊಸ ವಿಷಯವನ್ನು ಅಳವಡಿಸಲಾಗುತ್ತಿದೆ.
2. ವಿಶ್ವವಿದ್ಯಾಲಯದ ಆಯ್ಕೆ ಸಮಿತಿಯು ಮೇಲ್ಕಂಡ ಪದವಿಗಳಿಗೆ ಅಭ್ಯರ್ಥಿಗಳ ಗುಣಮಟ್ಟದ ಆಯ್ಕೆಯನ್ನು ಪ್ರಾಯೋಗಿಕದ ಮೂಲಕ ನಿರ್ಧರಿಸುತ್ತದೆ. ಈ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.
3. ಅಭ್ಯರ್ಥಿಯ ಆಯ್ಕೆಯನ್ನು ಅವರ ವಿದ್ಯಾರ್ಹತೆ ಮತ್ತು ಪ್ರಾಯೋಗಿಕದ ಅಂಕಗಳ ಆಧಾರದ ಮೇಲೆ ನಿರ್ಧರಿಸಲಾಗುವುದು.
4. ಕಾಲೇಜಿನಿಂದ ಯಾವುದೇ ಹಾಸ್ಟೆಲ್ ವ್ಯವಸ್ಥೆ ಇರುವುದಿಲ್ಲ. ಸರ್ಕಾರಿ ಇಲಾಖೆಗಳ ಹಾಸ್ಟೆಲ್ಗಳ ಪ್ರವೇಶಕ್ಕೆ ಒತ್ತಾಸೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಜೆ.ಎಲ್.ಬಿ ರಸ್ತೆ, ಲಕ್ಷ್ಮೀಪುರಂ, ಮೈಸೂರು-570004, ದೂರವಾಣಿ ಸಂಖ್ಯೆ: 0821-2419443.2402141.
ಮೊಬೈಲ್ ಸಂಖ್ಯೆ: 9964177554, 8880890297, 9972924642

ವೆಬ್ಸೈಟ್ ವಿಳಾಸ: musicuniversity.ac.in

For Quick Alerts
ALLOW NOTIFICATIONS  
For Daily Alerts

English summary
Admissions open at Karnataka State Dr. Gangubai Hangal Music and Performing Arts University for 2017-18 academic year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X