ಹೆಲ್ತ್ ಸೈನ್ಸ್ ಪದವಿ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭ

2017-18 ಸಾಲಿನ ಹೆಲ್ತ್ ಸೈನ್ಸ್ ವಿಭಾಗದ ಕೋರ್ಸುಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 30ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಶ್ರೀ ದೇವರಾಜ ಅರಸು ಅಕಾಡೆಮಿ ಆಫ್ ಎಜುಕೇಷನ್ ಅಂಡ್ ರಿಸರ್ಚ್ ನಲ್ಲಿ ವಿವಿಧ ಕೋರ್ಸ್ ಗಳಿಗೆ ದಾಖಲಾತಿ ಪ್ರಾರಂಭವಾಗಿದೆ.

2017-18 ಸಾಲಿನ ಹೆಲ್ತ್ ಸೈನ್ಸ್ ವಿಭಾಗದ ಕೋರ್ಸುಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 30ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೋರ್ಸುಗಳ ವಿವರ

ಬಿ.ಎಸ್ಸಿ ಕೋರ್ಸುಗಳು

  • ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ
  • ಆಪರೇಷನ್ ಥಿಯೇಟರ್ ಟೆಕ್ನಾಲಜಿ
  • ಇಮೇಜಿಂಗ್ ಟೆಕ್ನಾಲಜಿ
  • ಆಪ್ಥಾಲ್ಮಿಕ್ ಟೆಕ್ನಾಲಜಿ
  • ರಿನಲ್ ಡಯಾಲಿಸಿಸ್ ಟೆಕ್ನಾಲಜಿ
  • ರೇಡಿಯೋ ಥೆರಾಪಿ ಟೆಕ್ನಾಲಜಿ
  • ಬ್ಯಾಚಲರ್ ಆಫ್ ಫಿಸ್ಯೋಥೆರಾಪಿ
ಹೆಲ್ತ್ ಸೈನ್ಸ್ ಪದವಿ ಕೋರ್ಸ್ ಪ್ರವೇಶಾತಿ

    ಇಂಟೆಗ್ರೇಟೆಡ್ ಕೋರ್ಸ್

    ಬಿ.ಎಸ್ಸಿ-ಎಂ.ಎಸ್ಸಿ ಇಂಟೆಗ್ರೇಟೆಡ್ ಕೋರ್ಸ್ ಇನ್ ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡೈಯೆಟಿಕ್ಸ್

    ಸರ್ಟಿಫಿಕೆಟ್ ಕೋರ್ಸ್

    • ಫ್ಲೆಬಾಟಮಿ ಟೆಕ್ನಾಲಜಿ
    • ಬ್ಲಡ್ ಬ್ಯಾಂಕಿಂಗ್ ಟೆಕ್ನಾಲಜಿ
    • ಅಪ್ಲಿಕೇಷನ್ ಆಫ್ ಟೆಕ್ನಾಲಜಿ ಇನ್ ಹಾಸ್ಪಿಟಲ್ ಎನ್ವಿರಾನ್ಮೆಂಟ್
    • ಹೋಂ ಕೇರ್ ನರ್ಸಿಂಗ್

    ವಿದ್ಯಾರ್ಹತೆ

    • ಬಿ.ಎಸ್ಸಿ ಕೋರ್ಸ್ ಸೇರ ಬಯಸುವವರು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಅಥವಾ ಹನ್ನೆರಡನೇ ತರಗತಿ ತೇರ್ಗಡೆ ಹೊಂದಿರಬೇಕು ಅಥವಾ ಎಸ್ ಎಸ್ ಎಲ್ ಸಿ ನಂತರ ಸಂಬಂಧಪಟ್ಟ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಪದವಿ ಗಳಿಸಿರಬೇಕು.
    • ಇಮೇಜ್ ಟೆಕ್ನಾಲಜಿ ಸೇರ ಬಯಸುವವರು ಪಿಯುಸಿಯಲ್ಲಿ ಕಡ್ಡಾಯವಾಗಿ ಗಣಿತ ಅಭ್ಯಾಸ ಮಾಡಿರಬೇಕು.
    • ಸರ್ಟಿಫಿಕೆಟ್ ಕೋರ್ಸ್ ಸೇರ ಬಯಸುವವರು ವಿಜ್ಞಾನ ವಿಷಯದಲ್ಲಿ ಪಿಯುಸಿ ಪೂರ್ಣಗೊಳಿಸಿರಬೇಕು
    • ಹೋಂ ಕೇರ್ ಕೋರ್ಸಿಗೆ ಎಸ್ ಎಸ್ ಎಲ್ ಸಿ/ಪಿಯುಸಿ/ಡಿಪ್ಲೊಮಾ ಮುಗಿಸಿರಬೇಕು.

    ಅರ್ಜಿ ಸಲ್ಲಿಕೆ

    ಅರ್ಜಿಗಳು ಸಂಸ್ಥೆಯ ವೆಬ್ಸೈಟ್ ನಲ್ಲಿ ಲಭ್ಯವಿದ್ದು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡು ಇತ್ಥೀಚಿನ ಭಾವಚಿತ್ರ, ಡಿ.ಡಿ ಮತ್ತು ಸೂಕ್ತ ದಾಖಲೆಗಳೊಂದಿಗೆ ಶಿಕ್ಷಣ ಸಂಸ್ಥೆಯ ಕಚೇರಿಗೆ ತಲುಪಿಸತಕ್ಕದ್ದು.

    ಅರ್ಜಿಯ ಲಕೋಟೆ ಮೇಲೆ ಯಾವ ಕೋರ್ಸಿಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ದಪ್ಪಾಕ್ಷರದಲ್ಲಿ ನಮೂದಿಸುವುದು.

    ಅರ್ಜಿ ಶುಲ್ಕ

    ರೂ.300/-ಗಳ ಡಿ.ಡಿಯನ್ನು "The Registrar, Sri Devaraj Urs Academy of Higher Education and Research" ಇವರ ಹೆಸರಿಗೆ ಕೋಲಾರದಲ್ಲಿ ಸಂದಾಯವಾಗುವಂತೆ ತೆಗೆಯುವುದು.

    ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

    ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳ ಅಂಕಪಟ್ಟಿ, ಶಾಲೆ/ಕಾಲೇಜಿನಲ್ಲಿ ನೀಡುವ ನಡತೆ ಪ್ರಮಾಣ ಪತ್ರ, ವರ್ಗಾವಣೆ ಪತ್ರ, ವಲಸೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅರ್ಹತಾ ಪತ್ರ, ನಾಲ್ಕು ಭಾವಚಿತ್ರಗಳು, ಶುಲ್ಕ ಕಟ್ಟಿರುವ ಡಿ.ಡಿ

    ಪ್ರಮುಖ ದಿನಾಂಕಗಳು

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2017
    ಆಯ್ಕೆ ಪಟ್ಟಿ ಪ್ರಕಟಿಸುವ ದಿನಾಂಕ: 05-07-2017
    ದಾಖಲಾತಿ ಶುರುವಾಗುವ ದಿನಾಂಕ: 06-07-2017
    ಕಾಲೇಜು ಪ್ರಾರಂಭವಾಗುವ ದಿನಾಂಕ: 01-08-2017

    ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ www.sduu.ac.in ಗಮನಿಸಿ

    For Quick Alerts
    ALLOW NOTIFICATIONS  
    For Daily Alerts

    English summary
    Applications are invited from eligible candidates in prescribed format for the following courses offered by the university for the academic year 2017-18 under the faculty of allied health sciences.
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X