ವಸ್ತ್ರವಿನ್ಯಾಸವನ್ನೇ ವೃತ್ತಿಯಾಗಿ ಸ್ವೀಕರಿಸುವವರಿಗೆ ಸ್ಟಾಫರ್ಡ್ಶೈರ್ ವಿಶ್ವವಿದ್ಯಾಲಯದಲ್ಲಿ ಅವಕಾಶ

ವಸ್ತ್ರವಿನ್ಯಾಸವನ್ನೇ ವೃತ್ತಿಯಾಗಿ ಸ್ವೀಕರಿಸುವವರಿಗೆ ಸ್ಟಾಫರ್ಡ್ಶೈರ್ ವಿಶ್ವವಿದ್ಯಾಲಯದಲ್ಲಿ ಫ್ಯಾಷನ್ ಡಿಸೈನ್ ಕೋರ್ಸ್

ಇಂದಿನ ಗ್ಲಾಮರ್ ಕ್ಷೇತ್ರದಲ್ಲಿ ಫ್ಯಾಷನ್ ಡಿಸೈನ್ ಅಥವಾ ವಸ್ತ್ರವಿನ್ಯಾಸ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇಂತಹ ಕಲಾತ್ಮಕ ಮತ್ತು ಕ್ರಿಯಾತ್ಮಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರ ಬೇಡಿಕೆಯು ಹೆಚ್ಚುತ್ತಿದೆ. ನೀವು ವಸ್ತ್ರವಿನ್ಯಾಸವನ್ನೇ ವೃತ್ತಿಯಾಗಿ ಸ್ವೀಕರಿಸುವುದಾದರೆ ನಿಮಗಾಗಿ ಯು ಕೆ ಮೂಲದ ಸ್ಟಾಫರ್ಡ್ಶೈರ್ ವಿಶ್ವವಿದ್ಯಾಲಯವು ನಿಮ್ಮನ್ನು ಸ್ವಾಗತಿಸಲು ಸಿದ್ಧವಾಗಿದೆ.

ಫ್ಯಾಷನ್ ಡಿಸೈನ್ ಕೋರ್ಸ್

ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆಯನ್ನು ಗುರುತಿಸಿ ಅವರಲ್ಲಿರುವ ಕಲೆಯನ್ನು ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಿರುವ ಈ ವಿವಿಯು ವಸ್ತ್ರವಿನ್ಯಾಸ ಮತ್ತು ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ವೃತ್ತಿಪರರನ್ನು ತರುಲು ಸೂಕ್ತ ವೇದಿಕೆ ನಿರ್ಮಾಣ ಮಾಡುವ ಸಂಸ್ಥೆಯಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ವಿನ್ಯಾಸದ ಶಿಕ್ಷಣ ನೀಡುತ್ತಿರುವ ಈ ವಿವಿಯು ಪ್ರಾಯೋಗಿಕ ಮತ್ತು ತಾಂತ್ರಿಕ ಶಿಕ್ಷಣವನ್ನು ಅಚ್ಚುಕಟ್ಟಾಗಿ ನೀಡುತ್ತಿದೆ. ವಿದ್ಯಾರ್ಥಿಗಳ ಕಲಿಕೆಯನ್ನು ಕೇವಲ ವಿನ್ಯಾಸಕ್ಕೆ ಸೀಮಿತಗೊಳಿಸದೆ ಕ್ರಿಯಾತ್ಮಕ ಕ್ಷೇತ್ರಗಳಾದ ಛಾಯಾಗ್ರಹಣ ಮತ್ತು ಫಿಲಂ ಕೋರ್ಸ್ ಗಳ ಸಂಯೋಜನೆಯನ್ನು ಪಠ್ಯದಲ್ಲಿ ಸೇರಿಸಲಾಗಿದೆ.

ಸ್ಟಾಫರ್ಡ್ಶೈರ್ ವಿಶ್ವವಿದ್ಯಾಲಯವು ಬೋಧಕ ವರ್ಗ ಕೂಡ ಉನ್ನತ ಮಟ್ಟದಾಗಿದ್ದು, ವಿನ್ಯಾಸ ಕ್ಷೇತ್ರದಲ್ಲಿ ಪ್ರಾವಿಣ್ಯತೆ ಪಡೆದಿರುವ ನುರಿತ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರಿಂದ ವಿಶೇಷ ತರಗತಿಗಳನ್ನು ನೀಡಲಾಗುತ್ತದೆ. ಪದವಿ ಶಿಕ್ಷಣದ ಕ್ಯಾಂಪಸ್ ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ಎಲ್ಲ ರೀತಿಯ ಮೂಲ ಸೌಲಭ್ಯ ಹೊಂದಿದ್ದು, ಸ್ಥಳೀಯ ಕಲಾಮಂದಿರಗಳ ಜೊತೆಗೆ ಉತ್ತಮ ಒಡನಾಟ ಹೊಂದಿದೆ. ಇದರಿಂದಾಗಿ ಇಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೇರವಾಗಿ ಪ್ರಾಯೋಗಿಕ ಶಿಕ್ಷಣ ದೊರೆಯುವುದರ ಜೊತೆಗೆ ಪ್ರೊಫೈಲ್ ಉತ್ತಮಗೊಳಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಖ್ಯಾತ ವಿನ್ಯಾಸಕರು ಮತ್ತು ಉದ್ಯಮಿಗಳ ಸಂಪರ್ಕ ಕೂಡ ದೊರೆಯಲಿದೆ. ಖ್ಯಾತ ವಿನ್ಯಾಸಕರರ ವಿನ್ಯಾಸದ ದೊಡ್ಡ ಸಂಗ್ರಹವನ್ನೇ ವಿದ್ಯಾರ್ಥಿಗಳಿಗೆ ಒದಗಿಸಲಾಗಿದ್ದು ವಿನ್ಯಾಸಕ ಬೆಟ್ಟಿ ಸ್ಮಿತೇರ್ಸ್ ತನ್ನ ವಿನ್ಯಾಸದ ಉಡುಪುಗಳು ಮತ್ತು ತಯಾರಿಸುವ ವಿಧಾನ ಎಲ್ಲವನ್ನು ವಿದ್ಯಾರ್ಥಿಗಳಿಗೆ ಕಲಿಯಲು ಸಹಾಯವಾಗುವಂತೆ ವಿಶ್ವವಿದ್ಯಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾನೆ.

ಕೋರ್ಸ್ ಅವಧಿ : ೩ ವರ್ಷ (ಫುಲ್ ಟೈಮ್)
ದಾಖಲಾತಿ ಆರಂಭ : ಸೆಪ್ಟೆಂಬರ್ 2017
ಅರ್ಜಿ ಸಲ್ಲಿಸಲು ಕೊನೆಯ ದಿನ : ಫೆಬ್ರವರಿ 15 ,2017
ಕೋರ್ಸ್ ಶುಲ್ಕ : £10,900 ಪ್ರತಿ ವರ್ಷಕ್ಕೆ

ಅರ್ಹತೆ

ಅಭ್ಯರ್ಥಿಯು ಹನ್ನೆರಡನೇ ತರಗತಿಯಲ್ಲಿ ಶೇ.70 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು
ಇಂಗ್ಲಿಷ್ ಭಾಷೆಗೆ ಬೇಕಾದ ಐ ಇ ಎಲ್ ಟಿ ಎಸ್ ನಲ್ಲಿ 6.0 ಪಡೆದಿರಬೇಕು (ಐ ಸಿ ಎಸ್ ಇ, ಸಿ ಬಿ ಎಸ್ ಇ ಪಠ್ಯದ ಇಂಗ್ಲಿಷ್ ಭಾಷೆಯಲ್ಲಿ ಶೇ.70 ಹೆಚ್ಚು ಅಂಕ ಗಳಿಸಿದ್ದರು ಪ್ರವೇಶ ಪಡೆಯಬಹುದು)
ಪ್ರತಿ ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕವೇ ಆಯ್ಕೆ ಮಾಡಿಕೊಳ್ಳಲಾಗುವುದು.

ಉದ್ಯೋಗಾವಕಾಶಗಳು

ಪದವಿ ಪಡೆದ ವಿದ್ಯಾರ್ಥಿಗಳು ಫ್ಯಾಷನ್ ಉದ್ಯಮದಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ವಿನ್ಯಾಸಕರಾಗಿ ಅವಕಾಶ ಪಡೆಯಬಹುದು,

ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ

ಸೆಪ್ಟೆಂಬರ್ನಲ್ಲಿ ಸೇರುವ ಭಾರತೀಯ ವಿದ್ಯಾರ್ಥಿಗಳಿಗೆ ನ್ಯೂ ಮೆರಿಟ್ ಸ್ಕಾಲರ್ಷಿಪ್ ಅಡಿಯಲ್ಲಿ £1,000 ಕಲ್ಪಿಸಲಾಗಿದೆ.
£2,000 ರವೆರೆಗಿನ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆ ಗುರುತಿಸಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ : http://www.staffs.ac.uk/course/SSTK-10716.jsp

For Quick Alerts
ALLOW NOTIFICATIONS  
For Daily Alerts

English summary
Staffordshire University invites application for its BA (Hons) Fashion designing programme
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X