ಲ್ಯಾಟರೆಲ್ ಎಂಟ್ರಿ ಇಂಜಿನಿಯರಿಂಗ್ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ

ಡಿಪ್ಲೊಮಾದಾರಕರಿಗೆ ಲ್ಯಾಟರಲ್ ಪ್ರವೇಶ ಯೋಜನೆಯಡಿಯಲ್ಲಿ ಹಗಲು ಮತ್ತು ಸಂಜೆ ಇಂಜಿನಿಯರಿಂಗ್ ಕಾಲೇಜುಗಳಿಗೆ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳು ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ.

ಇಂಜಿನಿಯರಿಂಗ್ ಸೇರಬಯಸುವ ಡಿಪ್ಲೊಮಾದಾಕರಿಗೆ ನಡೆಸುವ ಪ್ರವೇಶ ಪರೀಕ್ಷೆ (ಡಿಸಿಇಟಿ) ಯ ಪ್ರವೇಶ ಪತ್ರಗಳನ್ನು ಶಿಕ್ಷಣ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಡಿಪ್ಲೊಮಾದಾರಕರಿಗೆ ಲ್ಯಾಟರಲ್ ಪ್ರವೇಶ ಯೋಜನೆಯಡಿಯಲ್ಲಿ ಹಗಲು ಮತ್ತು ಸಂಜೆ ಇಂಜಿನಿಯರಿಂಗ್ ಕಾಲೇಜುಗಳಿಗೆ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳು ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ.

ಡಿಪ್ಲೊಮಾ ಪ್ರವೇಶಕ್ಕೆ ಜುಲೈ 2 ರಂದು ಹಾಗೂ ಎಂ.ಬಿ.ಎ, ಎಂ.ಸಿ.ಎ, ಎಂ.ಇ, ಎಂ.ಟೆಕ್ ಕೋರ್ಸ್ ಪ್ರವೇಶಕ್ಕೆ ಜುಲೈ 1 ಮತ್ತು 2 ರಂದು ಪ್ರವೇಶ ಪರೀಕ್ಷೆ ನಡೆಯಲಿವೆ.

ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ಮೂಲಕ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಡಿಸಿಇಟಿ ಪ್ರವೇಶ ಪತ್ರ ಪ್ರಕಟ

ಪ್ರವೇಶ ಪತ್ರ ಪಡೆಯುವ ವಿಧಾನ

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರ 'ಕೆಇಎ' ವೆಬ್ಸೈಟ್ ಗೆ ಭೇಟಿ ನೀಡಿ
  • ಬಲಭಾಗದಲ್ಲಿ ಕಾಣುವ ಡಿಸಿಇಟಿ 2017 ಕ್ಲಿಕ್ ಮಾಡಿ
  • 'Download Hall Ticket' ಕ್ಲಿಕ್ ಮಾಡಿ
  • ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ
  • ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ

ಪ್ರವೇಶ ಪತ್ರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಪರೀಕ್ಷೆ ವಿವರ

ಒಟ್ಟು 180 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು ಮೂರು ಪತ್ರಿಕೆಗಳನ್ನು ಒಳಗೊಂಡಿದ್ದು ಉತ್ತರಿಸಲು ಮೂರು ಗಂಟೆಯ ಕಾಲಾವಕಾಶ ನೀಡಲಾಗಿರುತ್ತದೆ.
40 ಅಂಕಗಳ ಅಪ್ಲೈಡ್ ಸೈನ್ಸ್ ಮತ್ತು 40 ಅಂಕಗಳ ಅಪ್ಲೈಡ್ ಮ್ಯಾಥಮೆಟಿಕ್ಸ್ ಪತ್ರಿಕೆಗಳು ಇಂಜಿನಿಯರಿಂಗ್ ನ ಎಲ್ಲಾ ವಿಭಾಗಕ್ಕೂ ಅನ್ವಯವಾಗಲಿದ್ದು, ಮೂರನೇ ಪತ್ರಿಕೆಯು ವಿಷಯಾಧರಿತವಾಗಿರುತ್ತದೆ. ಮೂರನೇ ಪತ್ರಿಕೆಯು ಒಟ್ಟು 100 ಅಂಕಗಳನ್ನು ಒಳಗೊಂಡಿರುತ್ತದೆ.

ಮೂರು ಪತ್ರಿಕೆಗಳಿಗೂ ಬಹುಆಯ್ಕೆಯ ಆಬ್ಜೆಕ್ಟಿವ್ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುವುದು.

ಸೂಚನೆ

  • ಅಭ್ಯರ್ಥಿಗಳು ಪರೀಕ್ಷೆಗೆ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಕೊಂಡೊಯ್ಯುವುದು.
  • ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಇವುಗಳಲ್ಲಿ ಯಾವುದಾದರು ಒಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗುವುದು.
  • ಕ್ಯಾಲುಕ್ಲೇಟರ್, ಮೊಬೈಲ್, ಲ್ಯಾಪ್ ಟಾಪ್, ಬ್ಲೂಟೂತ್ ಸೇರಿದಂತೆ ಇತರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೊಠಡಿ ಒಳಗೆ ಕೊಂಡೊಯ್ಯುವಂತಿಲ್ಲ.
  • ಪರೀಕ್ಷೆಯನ್ನು ನೀಲಿ ಅಥವಾ ಕಪ್ಪು ಬಾಲ್ ಪೆನ್ ನಲ್ಲಿ ಮಾತ್ರ ಬರೆಯಲು ಅವಕಾಶ, ಎರಡಕ್ಕಿಂತ ಹೆಚ್ಚು ಪೆನ್ ಒಯ್ಯುವಂತಿಲ್ಲ.
For Quick Alerts
ALLOW NOTIFICATIONS  
For Daily Alerts

English summary
Karnataka examination authority has released the admission tickets of DCET-2017. candidates can download from website by providing register number and date of birth.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X