ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶ ಪರೀಕ್ಷೆ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸಿಗಳ ಪ್ರವೇಶಕ್ಕಾಗಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ) ನಡೆಸುವ ನೀಟ್ ಪರೀಕ್ಷೆಗೆ ದಿನಾಂಕ ನಿಗಧಿಯಾಗಿದೆ ನೀಟ್ ಪರೀಕ್ಷೆಗೆ ದಿನಾಂಕ ನಿಗಧಿಯಾಗಿದೆ

ಭಾರತೀಯ ವೈದ್ಯಕೀಯ ಪರಿಷತ್ (ಎಂ.ಸಿ.ಐ) ಮತ್ತು ಭಾರತೀಯ ದಂತ ವೈದ್ಯಕೀಯ ಪರಿಷತ್ (ಡಿ.ಸಿ.ಐ) ಅನುಮೋದನೆಯೊಂದಿಗೆ ನಡೆಯುತ್ತಿರುವ ದೇಶದ ಎಲ್ಲಾ ಸರ್ಕಾರಿ, ಖಾಸಗಿ, ಡೀಮ್ಡ್ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶ ಮೇ 07 ರಂದು ಏಕಕಾಲಕ್ಕೆ ದೇಶಾದ್ಯಂತ 80 ನಗರಗಳ ಒಟ್ಟು 150 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ನಡೆಯಲಿದೆ.

ನೀಟ್-2017 ಪ್ರವೇಶ ಪರೀಕ್ಷೆ

ಅರ್ಹತೆಗಳು

ಭಾರತೀಯ, ಅನಿವಾಸಿ ಭಾರತೀಯ, ಸಾಗರೋತ್ತರ ಭಾರತೀಯರು, ಭಾರತೀಯ ಮೂಲವುಳ್ಳ ವಿದೇಶಿ ಪ್ರಜೆಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಬಾರಿ ಅರ್ಜಿ ಸಲ್ಲಿಸಲಿರುವ ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಕಡ್ಡಾಯ (ಜಮ್ಮು-ಕಾಶ್ಮೀರ, ಅಸ್ಸಾಂ, ಮೇಘಾಲಯ ಹೊರತು ಪಡಿಸಿ) ಮಾಡಲಾಗಿದೆ.

ವಯೋಮಿತಿ

ವಿದ್ಯಾರ್ಥಿಗಳು ಪರೀಕ್ಷಾ ದಿನಾಂಕಕ್ಕೆ ಕನಿಷ್ಠ ವಯೋಮಾನ 17 ವರ್ಷ ಮತ್ತು ಗರಿಷ್ಠ ವಯೋಮಾನ 25 ವರ್ಷ ಮೀರಿರಬಾರದು. ಮೀಸಲಾತಿ ಕೋರಬಯಸುವ (ಒ.ಬಿ.ಸಿ/ ಎಸ್.ಸಿ/ ಎಸ್.ಟಿ ಹಾಗು ಇತರೆ) ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ. ವಿದ್ಯಾರ್ಥಿಗಳು ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ/ ಬಯೋಟೆಕ್ನಾಲಜಿ ಮತ್ತು ಇಂಗ್ಲಿಷ್ ವಿಷಯವನ್ನು ಕಡ್ಡಾಯವಾಗಿ ಅಭ್ಯಸಿಸಿರಬೇಕು. ಹಾಗು ಪ್ರತಿ ವಿಷಯಗಳಲ್ಲೂ ಶೇ.50 (ಒ.ಬಿ.ಸಿ/ ಎಸ್.ಸಿ/ ಎಸ್.ಟಿ ಹಾಗು ಅಂಗವಿಕಲ ವಿದ್ಯಾರ್ಥಿಗಳು ಶೇ.40) ಅಂಕಗಳನ್ನು ಪಡೆದಿರಬೇಕು.

ಪರೀಕ್ಷಾ ವಿವರ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಸೇರಿದಂತೆ ದೇಶದ ಒಟ್ಟು 10 ಭಾಷೆಗಳಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿಯು ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯಲಿಚ್ಚಿಸುತ್ತಾನೆ ಎನ್ನುವುದನ್ನು ನೀಟ್ ಆನ್ಲೈನ್ ಅರ್ಜಿ ಸಲ್ಲಿಸುವಾಗ ಅರ್ಜಿಯಲ್ಲಿ ನಮೂದಿಸಬೇಕು. ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು 3 ಬಾರಿ ಅವಕಾಶ ನೀಡಲಾಗಿದ್ದು ಈಗಾಗಲೇ 3 ಬಾರಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ದಿನಾಂಕ 07-05-2017 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ.
ಪ್ರತಿ ಪತ್ರಿಕೆಯು ಒಟ್ಟು 180 ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.

ಪರೀಕ್ಷಾ ವಿಷಯಗಳು

ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ (ಬಾಟನಿ ಮತ್ತು ಜಿಯೋಲಾಜಿ) ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳನ್ನ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಹಿಂದಿ ಮತ್ತು ಕನ್ನಡಲ್ಲಿ ಪ್ರಶ್ನೆ ಪತ್ರಿಕೆ ಇರುತ್ತದೆ.

ವಿದ್ಯಾರ್ಥಿಗಳಿಗೆ ಸೂಚನೆ

ಆಧಾರ್ ಕಾರ್ಡ್ ಹೊಂದಿರಬೇಕು, ಆಧಾರ್ ಕಾರ್ಡ್ ಹೊಂದಿಲ್ಲದೆ ಇದ್ದಲ್ಲಿ ಆಧಾರ್ ಎನ್ರೋಲ್ಮೆನ್ಟ್ ಸಂಖ್ಯೆಯನ್ನು ನಮೂದಿಸಬೇಕು. ವಿದ್ಯಾರ್ಥಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ (ವಿದ್ಯಾರ್ಥಿಯ ಹೆಸರು ಮತ್ತು ಫೋಟೋ ತೆಗೆದ ದಿನಾಂಕವನ್ನು ಭಾವ ಚಿತ್ರದಲ್ಲಿ ನಮೂದಿಸಬೇಕು) ಮತ್ತು ಸಹಿ.
ಚಾಲ್ತಿಯಲ್ಲಿರುವ ಇ-ಮೇಲ್ , ದೂರವಾಣಿ ಸಂಖ್ಯೆ ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ವರ್ಗದ ವಿದ್ಯಾರ್ಥಿಗಳಿಗೆ ರೂ.1400/-

ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.750/-

ಶುಲ್ಕ ಪಾವತಿ ವಿಧಾನ

ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸತಕ್ಕದ್ದು.

ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ಮಂಗಳೂರು.

ಸ್ಟೇಟ್ ಮೆಡಿಕಲ್ ಕೌನ್ಸಿಲ್ ವೆಲ್ಫೇರ್ ಆಫೀಸ್ನ ವಿಳಾಸ

The Executive Director , Karnataka Examinations Authority , 18th cross , Sampige Road , Malleshwaram , Bengaluru -560012 .
Telephone No 080 -2360460 Fax No . 080 -23461576 . website : kea .kar .nic .in

E -mail ID : keauthority -ka @nic.in
ಪರೀಕ್ಷಾ ಕರೆ ಪತ್ರವನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡುವ ದಿನಾಂಕ 15 -04 -2017
ಫಲಿತಾಂಶ ಪ್ರಕಟಗೊಳ್ಳುವ ದಿನಾಂಕ 08 -06 -2017
ಸೂಚನೆ

1. ಪರೀಕ್ಷಾ ಕೊಠಡಿಗೆ ಹಾಜರಾಗುವಾಗ ವಿದ್ಯಾರ್ಥಿಯು ಕರೆಪತ್ರದೊಂದಿಗೆ ಪಾಸ್ಪೋರ್ಟ್ ಅಳತೆಯ ಫೋಟೋ ಮತ್ತು ಸ್ಟ್ಯಾಂಪ್ ಸೈಜಿನ ಫೋಟೋವನ್ನು ಹೊಂದಿರಬೇಕು.
2. ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳನ್ನು ಆಲ್ ಇಂಡಿಯಾ ಕೋಟ (ಎನ್.ಐ. ಆರ್) ಮತ್ತು ರಾಜ್ಯ ಸರ್ಕಾರಿ ಕೋಟಾದಡಿ ಹಂಚಿಕೆ ಮಾಡಲಾಗುತ್ತದೆ.
3. ಖಾಸಗಿ ಕಾಲೇಜುಗಳ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳನ್ನು ಎನ್.ಐ.ಆರ್ ಕೋಟ, ರಾಜ್ಯ ಸರ್ಕಾರಿ ಕೋಟ ಮತ್ತು ಆಡಳಿತ ಮಂಡಳಿ ಕೋಟ ಸೀಟುಗಳಾಗಿ ವರ್ಗಿಕರಣ ಮಾಡಲಾಗಿದೆ.
4. ಒಟ್ಟಾರೆ ಎಲ್ಲ ಸೀಟುಗಳನ್ನು ನೀಟ್ ರ್ಯಾಂಕಿಂಗ್ ಆಧಾರದಲ್ಲಿಯೇ ಭರ್ತಿ ಮಾಡಲಾಗುತ್ತದೆ. ಆಲ್ ಇಂಡಿಯಾ ರ್ಯಾನ್ಕ್ ನ ಮೆರಿಟ್ ಪಟ್ಟಿ ಆಧರಿಸಿ ತಮ್ಮ ಕೋಟ ಸೀಟುಗಳ ಭರ್ತಿಗೆ ಸಂಬಂಧಿಸಿದ ದಾಖಲಾತಿ ಸಂಸ್ಥೆಗಳು ಕೌನ್ಸೆಲಿಂಗ್ ನಡೆಸುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01 -03 -2017
ಹೆಚ್ಚಿನ ಮಾಹಿತಿಗಾಗಿ http://:cbseneet.nic.in

For Quick Alerts
ALLOW NOTIFICATIONS  
For Daily Alerts

English summary
National level medical entrance test regulated by the CBSE Board NEET-2017
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X