ಯು ಪಿ ಎಸ್ ಸಿ ಸಿಎಪಿಎಫ್ ಪರೀಕ್ಷೆಗಳ ಪ್ರವೇಶ ಪತ್ರ ಪ್ರಕಟ

ಜುಲೈ 23ರಂದು ದೇಶಾದ್ಯಂತ ಯುಪಿಎಸ್‌ಸಿ ಸಿಎಪಿಎಫ್ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಒಂದೇ ದಿನ ಪರೀಕ್ಷೆ ನಡೆಸಲಾಗುತ್ತದೆ.

ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯಲ್ಲಿನ ಅಸಿಸ್ಟೆಂಟ್‌ ಕಮಾಂಡೆಂಟ್‌ ಹುದ್ದೆಗಳ ನೇಮಕಕ್ಕಾಗಿ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ 'ಸೆಂಟ್ರಲ್‌ ಆರ್ಮ್‌ಡ್‌ ಪೊಲೀಸ್‌ ಪೋರ್ಸ್‌ (ಅಸಿಸ್ಟೆಂಟ್‌ ಕಮಾಂಡೆಂಟ್‌ ) ಎಗ್ಸಾಮ್‌ನ ಇ-ಅಡ್ಮಿಟ್‌ ಕಾರ್ಡ್‌ ಅನ್ನು ಯುಪಿಎಸ್‌ಸಿಯ ವೆಬ್‌ನಲ್ಲಿ ಪ್ರಕಟಿಸಲಾಗಿದೆ.

ಸಿಎಪಿಎಫ್ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆಯೋಗದ ವೆಬ್ಸೈಟ್ ಮೂಲಕ ಡೌನ್‌ ಲೋಡ್‌ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಯು ಪಿ ಎಸ್ ಸಿ ಸಿಎಪಿಎಫ್ ಪರೀಕ್ಷೆ

ಜುಲೈ 23ರಂದು ದೇಶಾದ್ಯಂತ ಯುಪಿಎಸ್ಸಿ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಒಂದೇ ದಿನ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಪತ್ರಿಕೆಯು ಜನರಲ್‌ ಎಬಿಲಿಟಿ ಮತ್ತು ಇಂಟೆಲಿಜೆನ್ಸಿ ವಿಷಯಗಳನ್ನೊಳಗೊಂಡಿದ್ದರೆ, ಎರಡನೇ ಪತ್ರಿಕೆಯು ಜನರಲ್‌ ಸ್ಟಡೀಸ್‌, ಎಸ್ಸೇ ಮತ್ತು ಕಾಂಪ್ರೆಹೆನ್ಷನ್‌ ವಿಷಯಗಳನ್ನು ಹೊಂದಿರುತ್ತದೆ.

ಅಬ್ಜೆಕ್ಟೀವ್‌ ಮಾದರಿಯ ಪರೀಕ್ಷೆಯೂ ನಡೆಯುವುದರಿಂದ ಅಭ್ಯರ್ಥಿಗಳು ಬ್ಲಾಕ್‌ ಬಾಲ್‌ ಪಾಯಿಂಟ್‌ ಪೆನ್ನನ್ನು ತೆಗೆದುಕೊಂಡು ಹೋಗಬೇಕು.
ಪರೀಕ್ಷಾ ಕೇಂದ್ರಕ್ಕೆ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ, ಗುರುತಿನ ಚೀಟಿ ಕಡ್ಡಾಯವಾಗಿ ತೆಗೆದುಕೊಂಡು ಹೋಗುವುದು.

ಪ್ರವೇಶ ಪತ್ರ ಪಡೆಯುವ ವಿಧಾನ

  • ಕೇಂದ್ರ ಲೋಕ ಸೇವಾ ಆಯೋಗದ ವೆಬ್ಸೈಟ್ ಗೆ ಲಾಗಿನ್ ಆಗಿ
  • ಸಿಎಪಿಎಫ್ ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನೀಡಿರುವ ಸೂಚನೆಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ
  • ನಿಮ್ಮ ನೋಂದಣಿ ಸಂಖ್ಯೆ ಅಥವಾ ರೋಲ್ ನಂಬರ್ ನಮೂದಿಸಿ
  • ಪ್ರವೇಶ ಪತ್ರ ಪ್ರಿಂಟ್ ತೆಗೆದುಕೊಳ್ಳಿ

ಹೆಚ್ಚಿನ ಮಾಹಿತಿಗೆ : www.upsc.gov.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
The admit cards for UPSC CAPF Exam 2017 have been released by the Union Public Service Commission. The exam will be conducted for the recruitment of Assistant Commandants in July.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X