ಕಾಂಟ್ರ್ಯಾಕ್ಟ್ ಇಂಜಿನಿಯರ್ಸ್ ನೇಮಕಾತಿಗೆ ಬಿಇಎಲ್ ಅರ್ಜಿ ಆಹ್ವಾನ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತನ್ನ ಕೇಂದ್ರೀಯ ಸಂಶೋಧನಾ ಪ್ರಯೋಗಶಾಲೆಯಲ್ಲಿ ಅವಶ್ಯವಿರುವ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನವರತ್ನ ಕಂಪನಿಯು ಭಾರತದಲ್ಲಿ ವೃತ್ತಿಪರ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬಹು ಯೂನಿಟ್, ಬಹು ಉತ್ಪನ್ನ ಸಂಸ್ಥೆಯಾಗಿ ಪ್ರಗತಿಪರ ರೂಪದಲ್ಲಿ ಸ್ಥಾಪಿತಗೊಂಡಿದೆ.

ಭಾರತ್ ಎಲೆಕ್ಟ್ರಾನಿಕಸ್ ಲಿಮಿಟೆಡ್ ತನ್ನ ಕೇಂದ್ರೀಯ ಸಂಶೋಧನಾ ಪ್ರಯೋಗಶಾಲೆಯಲ್ಲಿ ಅವಶ್ಯವಿರುವ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಬಿಇಎಲ್ ನೇಮಕಾತಿ

ಹುದ್ದೆಗಳ ವಿವರ

ಕಾಂಟ್ರ್ಯಾಕ್ಟ್ ಇಂಜಿಯರ್ಸ್ (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್): 06 ಹುದ್ದೆಗಳು

ವಿದ್ಯಾರ್ಹತೆ

  • ಅಂಗೀಕೃತ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದಲ್ಲಿ ಬಿಇ/ಬಿ.ಟೆಕ್ ಪದವಿ ಗಳಿಸಿರಬೇಕು.
  • ಒಂದರಿಂದ ಎರಡು ವರ್ಷ ಸಂಬಂಧಪಟ್ಟ ಕ್ಷೇತ್ರದಲ್ಲಿ ಸೇವಾನುಭವವಿರಬೇಕು

ವೇತನ : ರೂ.21.000/-(ತಿಂಗಳಿಗೆ)

ಕಾಂಟ್ರ್ಯಾಕ್ಟ್ ಇಂಜಿನಿಯರ್ಸ್ (ಕಂಪ್ಯೂಟರ್ ಸೈನ್ಸ್): 03 ಹುದ್ದೆಗಳು

ವಿದ್ಯಾರ್ಹತೆ

  • ಅಂಗೀಕೃತ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದಲ್ಲಿ ಬಿಇ/ಬಿ.ಟೆಕ್ ಪದವಿ ಗಳಿಸಿರಬೇಕು.
  • ಒಂದರಿಂದ ಎರಡು ವರ್ಷ ಸಂಬಂಧಪಟ್ಟ ಕ್ಷೇತ್ರದಲ್ಲಿ ಸೇವಾನುಭವವಿರಬೇಕು

ವೇತನ : ರೂ.30.000/-(ತಿಂಗಳಿಗೆ)
ಅದ್ಯತೆ
ಕಂಪ್ಯೂಟರ್ ಲ್ಯಾಂಗ್ವೇಜ್ ಮತ್ತು ನೆಟ್ವರ್ಕಿಂಗ್ ಬಗ್ಗೆ ಜ್ಞಾನ ಹೊಂದಿರಬೇಕು

ವಯೋಮಿತಿ
ದಿನಾಂಕ: 01-04-2017 ಕ್ಕೆ 25 ಮೀರಿರಬಾರದು

ಮೀಸಲಾತಿ
ಮೀಸಲಾತಿಗೆ ಒಳಪಡುವವರಿಗೆ ಸರ್ಕಾರಿ ನಿಯಮಗಳು ಅನ್ವಯವಾಗಲಿದೆ.
ಗುತ್ತಿಗೆ ಅವಧಿ: ಒಂದು ವರ್ಷ

ಆಯ್ಕೆ ವಿಧಾನ

ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು ಬಿಇಲ್ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 19-04-2017

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ bel-india.com ಗಮನಿಸಿ

ಬಿಇಎಲ್

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ ಕಂಪೆನಿಯಾಗಿದೆ.

ಭಾರತದ ಸೇನೆಗೆ ಸಂಬಂಧಪಟ್ಟ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ ಮತ್ತು ಸರಬರಾಜಿಗಾಗಿ 1954 ರಲ್ಲಿ ಸ್ಥಾಪಿತಗೊಂಡ ಭಾರತ್ ಎಲೆಕ್ಟ್ರಾನಿಕ್ಸ್ ಇಂದು ದೇಶದ ಹೆಮ್ಮೆಯ ಸಂಸ್ಥೆಯಾಗಿದೆ. ಮೊದಮೊದಲಿಗೆ ಬರೀ ಭಾರತೀಯ ಸೇನೆಗೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸುತ್ತಿದ್ದ ಈ ಸಂಸ್ಥೆ, ಉದ್ದೇಶ ಮೀರಿ ಬೆಳೆದಿದ್ದಲ್ಲದೇ ಸಾಫ್ಟ್ ವೇರ್, ದೂರದರ್ಶನ, ಟೆಲಿಕಾಂ, ವಿದ್ಯುತ್ ಚಾಲಿತ ಮತಯಂತ್ರದ ತಯಾರಿಕೆವರೆಗೂ ತನ್ನ ತಂತ್ರಜ್ಞಾನವನ್ನು ವಿಸ್ತರಿಸಿಕೊಂಡಿದೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ನ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ. ಇದಲ್ಲದೇ ದೇಶದ ನಾನಾಭಾಗಗಳಲ್ಲಿ ಇದರ ಘಟಕಗಳಿವೆ. ಭಾರತ ಸರ್ಕಾರ ನೀಡುವ ನವರತ್ನ ಪ್ರಶಸ್ತಿಯನ್ನು ಭಾರತ ಎಲೆಕ್ಟ್ರಾನಿಕ್ಸ್ ತನ್ನ ಮುಡಿಗೇರಿಸಿಕೊಂಡಿದೆ.

For Quick Alerts
ALLOW NOTIFICATIONS  
For Daily Alerts

English summary
Recruiting for engineers on contract basis for its CENTRAL RESEARCH LABORATORY-BANGALORE
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X