ಜೆಸ್ಕಾಂನಲ್ಲಿ 80 ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಶಿಶಿಕ್ಷು ತರಬೇತಿ ಯೋಜನೆಯಡಿ (NCVT) ಮತ್ತು SCVT ಪ್ರಮಾಣ ಪತ್ರ ಪಡೆದವರಿಗೆ ಜೆಸ್ಕಾಂನಲ್ಲಿ ಶಿಶಿಕ್ಷು ತರಬೇತಿ ನೀಡಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ (ಜೆಸ್ಕಾಂ)ದಲ್ಲಿ 80 ಶಿಶಿಕ್ಷು ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಶಿಶಿಕ್ಷು ತರಬೇತಿ ಯೋಜನೆಯಡಿ (NCVT) ಪ್ರಮಾಣ ಪತ್ರ ಪಡೆದವರಿಗೆ ಒಂದು ವರ್ಷ ಅವಧಿಯ ಎಲೆಕ್ಟ್ರಿಷಿಯನ್ ವೃತ್ತಿಯಲ್ಲಿ ಶಿಶಿಕ್ಷು (ಅಪ್ರೆಂಟಿಸ್) ತರಬೇತಿಗೆ ಹಾಗೂ ರಾಜ್ಯ ವೃತ್ತಿ ಪ್ರಮಾಣ ಪತ್ರ/ಅಂಕ ಪಟ್ಟಿ ಪಡೆದವರಿಗೆ 1 ವರ್ಷ ಮೂರು ತಿಂಗಳು ಅವಧಿಯ ಎಲೆಕ್ಟ್ರಿಷಿಯನ್ ವೃತ್ತಿಯಲ್ಲಿ ಶಿಶಿಕ್ಷು ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.

ಅಪ್ರೆಂಟಿಸ್ ಸಂಖ್ಯೆ ವಿವರ

ಐಟಿಐ/ಐಟಿಸಿ (ಎಲೆಕ್ಟ್ರಿಷಿಯನ್) ವೃತ್ತಿಯಲ್ಲಿ ಗರಿಷ್ಠ ಅಂಕಗಳ ಆಧಾರದ ಮೇಲೆ ಮೀಸಲಾತಿ ರೋಸ್ಟರ್ ಪ್ರಕಾರ 80 ಶಿಶಿಕ್ಷುಗಳನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.

  • ಹೈದರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ 64
  • ಇತರೆ ಅಭ್ಯರ್ಥಿಗಳಿಗೆ 16
ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಅಭ್ಯರ್ಥಿ ವಯಸ್ಸು

ದಿನಾಂಕ 03-05-2017 ಕ್ಕೆ ಕನಿಷ್ಟ 16 ವರ್ಷ ಮತ್ತು ಗರಿಷ್ಠ 40 ವರ್ಷ

ವಿದ್ಯಾರ್ಹತೆ

ಎಸ್ ಎಸ್ ಎಲ್ ಸಿ ನಂತರ ಎರಡು ವರ್ಷ ಅವಧಿಯ ಐಟಿಐ ತರಬೇತಿ ಹೊಂದಿ, ಕುಶಲಕರ್ಮಿ ತರಬೇತಿ ಯೋಜನಯಡಿ ನಡೆಸುವ ವೃತ್ತಿ ಪರೀಕ್ಷೆಯ ಎಲೆಕ್ಟ್ರಿಷಿಯನ್ ವೃತ್ತಿಯಲ್ಲಿ ತೇರ್ಗಡೆಯಾಗಿ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ (NCVT) ರಾಜ್ಯ ವೃತ್ತಿ ಪ್ರಮಾಣ ಪತ್ರ (SCVT) ಅಂಕಪಟ್ಟಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಶಿಶಿಕ್ಷು ವೇತನ

ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ ರೂ.5577/- ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

ಪೂರ್ಣ ವಿವರವಿರುವ ಸ್ವಯಂ ಲಿಖಿತ ಅಥವಾ ಬೆರಳಚ್ಚು ಮಾಡಿದ ಅರ್ಜಿಗಳನ್ನು ಕೆಳಗೆ ಕಾಣಿಸಿರುವ ಅರ್ಜಿ ನಮೂನೆಯಂತೆ ಎಲ್ಲಾ ದಾಖಲೆಗಳೊಂದಿಗೆ ಪ್ರಧಾನ ವ್ಯವಸ್ಥಾಪಕರು, ನಿಗಮ ಕಛೇರಿ, ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ, (ಜೆಸ್ಕಾಂ) ಕಲಬುರಗಿ ರವರಿಗೆ ಸಲ್ಲಿಸತಕ್ಕದ್ದು.

ಅರ್ಜಿಯೊಂದಿಗೆ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ರೂ.100 /- ಮತ್ತು ಎಸ್.ಸಿ/ಎಸ್.ಟಿ ಅಭ್ಯರ್ಥಿಗಳು ರೂ.50 /- ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ ಅನ್ನು "ಆರ್ಥಿಕ ಸಲಹೆಗಾರರು, ಗಲಬರ್ಗಾ, ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಲಬುರಗಿ" ಇವರ ಹೆಸರಿನಲ್ಲಿ 20-04-2017 ರಿಂದ 03-05-2017 ರವರೆಗೆ ಖರೀದಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು.

ಅರ್ಜಿ ಕಳುಹಿಸುವ ಲಕೋಟೆಯ ಮೇಲೆ 2016 -17 ಸಾಲಿನ ಶಿಶಿಕ್ಷು ಆಯ್ಕೆಗೆ ಅರ್ಜಿ ಎಂದು ಸ್ಪಷ್ಟವಾಗಿ ಬರೆದಿರಬೇಕು. ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲೆಗಳೊಡನೆ ದಿನಾಂಕ 03-05-2017 ಮದ್ಯಾಹ್ನ 2 ಗಂಟೆಯೊಳಗೆ ನೇರವಾಗಿ ಅಥವಾ ಅಂಚೆಯ ಮೂಲಕ ಪ್ರಧಾನ ವ್ಯವಸ್ಥಾಪಕರು, ನಿಗಮ ಕಛೇರಿ, ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ, (ಜೆಸ್ಕಾಂ) ಕಲಬುರಗಿ, 582102 ಇವರಿಗೆ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ www.gescom.in ಗಮನಿಸತಕ್ಕದ್ದು

For Quick Alerts
ALLOW NOTIFICATIONS  
For Daily Alerts

English summary
Gulbarga Electricity Supply Company Limited (GESCOM) ITC Apprenticeship Training Notification from 20.04.2017 to 03.05.2017
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X