ಅಂಚೆ ಇಲಾಖೆಯಲ್ಲಿ ಎಸ್ ಎಸ್ ಎಲ್ ಸಿ ಪಾಸ್ ಆದವರಿಗೆ ಉದ್ಯೋಗಾವಕಾಶ

ಎಸ್ ಎಸ್ ಎಲ್ ಸಿ ಪಾಸ್ ಆದವರಿಗೆ ಭಾರತೀಯ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶ. ರಾಜ್ಯ ವಲಯದಲ್ಲಿ ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗೆ ನೇಮಿಸಿಕೊಳ್ಳಲು ಆನ್ಲೈನ್ ಅರ್ಜಿ ಆಹ್ವಾನ.

ಎಸ್ ಎಸ್ ಎಲ್ ಸಿ ಪಾಸ್ ಆದವರಿಗೆ ಭಾರತೀಯ ಅಂಚೆ ಕಚೇರಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಭಾರತೀಯ ಅಂಚೆ ಕಚೇರಿಯ ರಾಜ್ಯ ವಲಯದಲ್ಲಿ ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ.

ದೇಶಾದ್ಯಂತ ಸಾವಿರಾರು ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು ಕರ್ನಾಟಕದಲ್ಲಿ1048 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರ

ಹುದ್ದೆಯ ಹೆಸರು: ಗ್ರಾಮೀಣ ಡಾಕ್‌ ಸೇವಕ್‌
ಒಟ್ಟು ಹುದ್ದೆ: 1048

ಎಸ್ ಎಸ್ ಎಲ್ ಸಿ ಪಾಸ್ ಆದವರಿಗೆ ಉದ್ಯೋಗಾವಕಾಶ

ಹುದ್ದೆ ವರ್ಗೀಕರಣ

ಸಾಮಾನ್ಯ:579
ಒಬಿಸಿ: 240
ಎಸ್‌ಸಿ: 150
ಎಸ್‌ಟಿ: 79

ಅರ್ಜಿ ಸಲ್ಲಿಕೆ ಕೊನೇ ದಿನ: ಮೇ 8, 2017
ವೇತನ: ₹4,220-6,470 (ನಗರದ ವಲಯ)
ವೆಬ್‌ಸೈಟ್‌: indiapost.gov.in

ವಯೋಮಿತಿ

ಕನಿಷ್ಠ 18 ಹಾಗೂ ಗರಿಷ್ಠ 40 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5, ಒಬಿಸಿ ಅಭ್ಯರ್ಥಿಗಳಿಗೆ 3 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆಯಿದೆ.

ವಿದ್ಯಾರ್ಹತೆ

  • ರಾಜ್ಯ ಅಂಗೀಕೃತ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಪೂರೈಸಿರಬೇಕು.
  • ಕಂಪ್ಯೂಟರ್‌ ಜ್ಞಾನ ಅಗತ್ಯವಿದ್ದು, ಅಂಗೀಕೃತ ಸಂಸ್ಥೆಯಿಂದ ಕನಿಷ್ಠ 2 ತಿಂಗಳ ಕಂಪ್ಯೂಟರ್‌ ಕೋರ್ಸ್‌ ಮಾಡಿ ಸರ್ಟಿಫಿಕೆಟ್‌ ಪಡೆದಿರಬೇಕು.

ಇದನ್ನು ಗಮನಿಸಿ:ವಿ ಎಸ್ ಎಸ್ ಸಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ

ಕಚೇರಿ ಸಮೀಪ ಮನೆ

ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ಸ್ಥಳೀಯ ಅಂಚೆ ಕಚೇರಿ ಇರುವ ವಲಯದಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು.

ಅರ್ಜಿ ಸಲ್ಲಿಕೆ ಮತ್ತು ಶುಲ್ಕ

  • ಅಂಚೆ ಕಚೇರಿ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಅಂಕಪಟ್ಟಿ ಸೇರಿದಂತೆ ಕೇಳಿರುವ ದಾಖಲೆಗಳನ್ನು ಅಪ್‌ಲೋಡ್‌ಬೇಕು.
  • ಅರ್ಜಿ ಭರ್ತಿ ಬಳಿಕ ನೋಂದಣಿ ಸಂಖ್ಯೆ ಬಳಸಿ ಯಾವುದೇ ಮುಖ್ಯ ಅಂಚೆ ಕಚೇರಿಯಲ್ಲಿ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ₹100 ಶುಲ್ಕ ಪಾವತಿಸಬೇಕು. (ಎಸ್‌ಸಿ/ಎಸ್‌ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ).

ಆಯ್ಕೆ ಪ್ರಕ್ರಿಯೆ

ಸಲ್ಲಿಕೆಯಾದ ಅರ್ಜಿಗಳ ಪೈಕಿ ನಿಗದಿತ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ಅರ್ಹತಾ ಪಟ್ಟಿ ಸಿದ್ಧಪಡಿಸಿ ಮುಂದಿನ ಪ್ರಕ್ರಿಯೆಗೆ ಆಹ್ವಾನಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ : www.indiapost.gov.in ಗಮನಿಸಿ

ಭಾರತೀಯ ಅಂಚೆ

ಭಾರತೀಯ ಅಂಚೆ ಸೇವೆ ವಿವಿಧ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದ್ದು ಅದರಲ್ಲಿ ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ (EMS-SPEED POST) ಇನ್ನಿತರ ಸೇವೆಗಳು ಸೇರಿವೆ. ಇದರ ಜೊತೆಗೆ ಹಣದ ವ್ಯವಾಹಾರದಲ್ಲಿ ಮನಿ ಆರ್ಡರ್, ಮ್ಯುಚುಯಲ್ ಫಂಡ್, ಹಣ ವರ್ಗಾವಣೆ ಸೇರಿವೆ. ಮತ್ತು ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ (NSC), ಕಿಸಾನ್ ವಿಕಾಸ್ ಪತ್ರ, ಆವರ್ತಿತ ಠೇವಣಿ ಮತ್ತು ನಿಶ್ಚಿತ ಠೇವಣಿಗಳನ್ನು ಒದಗಿಸುತ್ತಿದೆ.

For Quick Alerts
ALLOW NOTIFICATIONS  
For Daily Alerts

English summary
Applications are invited by India Post from eligible candidates for the selection and engagement to the posts of Gramin Dak Sevaks
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X