ಬೆಂಗಳೂರಿನಲ್ಲಿ ನಾಳೆ ಬೃಹತ್ ಉದ್ಯೋಗ ಮೇಳ

ಬೆಂಗಳೂರಿನ ಆನಂದ ನಗರದ ಏಟ್ರಿಯಾ ಕಾಲೇಜು ಆವರಣದಲ್ಲಿ ಬೆಳಗ್ಗೆ 09 ರಿಂದ ಸಂಜೆ 4 ಗಂಟೆ ವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಮೇಳದಲ್ಲಿ ಸುಮಾರು 80 ಉದ್ಯೋಗ ನೀಡುವ ಕಂಪೆನಿಗಳು ಭಾಗವಹಿಸಲಿವೆ.

ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಆನಂದ ನಗರದಲ್ಲಿ ಇದೇ ಜೂನ್ 24ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಬೆಂಗಳೂರಿನ ಆನಂದ ನಗರದ ಏಟ್ರಿಯಾ ಕಾಲೇಜು ಆವರಣದಲ್ಲಿ ಬೆಳಗ್ಗೆ 09 ರಿಂದ ಸಂಜೆ 4 ಗಂಟೆ ವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಮೇಳದಲ್ಲಿ ಸುಮಾರು 80 ಉದ್ಯೋಗ ನೀಡುವ ಕಂಪೆನಿಗಳು ಭಾಗವಹಿಸಲಿವೆ.

ಅರ್ಧದಲ್ಲಿಯೇ ಶಿಕ್ಷಣ ಮೊಟಕುಗೊಳಿಸಿದವರು, ಎಸ್‌ಎಸ್‌ಎಲ್‌ಸಿ, ಡಿಪ್ಲಮೋ, ಬಿಇ, ಬಿಟೆಕ್, ಐಟಿಐ, ಪದವಿ ಮುಗಿಸಿದ ಯುವಕ ಮತ್ತು ಯುವತಿಯರು ತಮ್ಮ ಮೂಲ ದಾಖಲಾತಿಗಳೊಂದಿಗೆ ಆಧಾರ್ ಕಾರ್ಡ್ ಪ್ರತಿ ಸಮೇತ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ನಾಳೆ ಉದ್ಯೋಗ ಮೇಳ

ನಿಮ್ಮ ಮೊಬೈಲ್ ನಿಂದ ಈ ಟೋಲ್ ಫ್ರೀ ನಂಬರಿಗೆ 7878704433 ಮಿಸ್ ಕಾಲ್ ಕೊಡುವ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸತಕ್ಕದ್ದು.

ಉದ್ಯೋಗ ಮೇಳಕ್ಕೆ ಹೋಗುವ ಮುನ್ನ

ಮೊದಲನೆಯದಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಅಲ್ಲಿಗೆ ಹೋಗುವ ಮುನ್ನ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.
ಸಂದರ್ಶನದ ವೇಳೆಗಿಂತ ಸ್ವಲ್ಪ ಮೊದಲೇ ಸ್ಥಳ ತಲುಪಿ. ಸರಳವಾದ ಉಡುಗೆ ಧರಿಸಿ. ಮೇಕಪ್ ಸಹ ಸರಳವಾಗಿ ಗೌರವಯುತವಾಗಿದ್ದು, ಸ್ಮಾರ್ಟ್ ಲುಕ್ ಕೊಡುವಂತೆ ಇರಬೇಕು.

ನಿಮ್ಮ ಸಾಮರ್ಥ್ಯ, ಕೆಲಸದ ಬಗೆಗಿರುವ ಆಸಕ್ತಿ, ಶ್ರಮ, ದುಡಿಮೆ, ಪ್ರಾಮಾಣಿಕತನದ ಬಗ್ಗೆ ಹೇಳಿ. ನೆನಪಿರಲಿ, ಆತ್ಮಪ್ರಶಂಸೆ ಅತಿಯಾಗದಂತೆ ಗಮನ ವಹಿಸಿ. ನಿಮಗಿರುವ ಪರಿಣತಿ, ವಿಶೇಷ ಅರಿವು, ಎಂಥ ಒತ್ತಡಕ್ಕೂ ಒಳಗಾಗದೇ ದುಡಿಯುವ ಮನೋಭಾವ, ಎಲ್ಲದರಲ್ಲೂ ನಿಮಗಿರುವ ಜ್ಞಾನದ ಬಗ್ಗೆ ತಿಳಿಸಿ ಅವರ ಗಮನ ಸೆಳೆಯಿರಿ.

ಶಿವಮೊಗ್ಗ ನಂದಿನಿ ಹಾಲು ಒಕ್ಕೂಟದಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಶಿವಮೊಗ್ಗ ನಂದಿನಿ ಹಾಲು ಒಕ್ಕೂಟದಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ

ಅಗತ್ಯ ದಾಖಲೆಗಳನ್ನು ಕೊಂಡೊಯ್ಯಿರಿ

  • ರೆಸ್ಯುಮ್ ಮತ್ತು ಬಯೋಡೆಟಾ.
  • ಕನಿಷ್ಠ ಮೂರು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು.
  • ಭಾವ ಚಿತ್ರವಿರುವ ಗುರುತು ಚೀಟಿಗಳು ಹಾಗು ಅವುಗಳ ಝೆರಾಕ್ಸ್ ಪ್ರತಿಗಳು.
  • ಈ ಹಿಂದೆ ಎಲ್ಲಾದರು ಕೆಲಸ ಮಾಡಿದ್ದರೆ ಅದರ ಸೇವಾನುಭವದ ಪ್ರಮಾಣ ಪತ್ರ

ಬೆಂಗಳೂರು ವಿವಿ: ಉದ್ಯೋಗ ಸೃಷ್ಟಿಸುವ ಐದು ಹೊಸ ಕೋರ್ಸುಗಳ ಪರಿಚಯ

For Quick Alerts
ALLOW NOTIFICATIONS  
For Daily Alerts

English summary
Job fair Mela to be held on 24.06.2017 at Atria Institute of technology ASKB Campus, 1st Main, AGS colony, Anand Nagar Bengaluru 560024. Mela Starts at 9AM.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X