ಪೊಲೀಸ್ ಇಲಾಖೆಯಲ್ಲಿ 2626 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ www.ksp.gov.in ನಲ್ಲಿ ಆನ್-ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಕರ್ನಾಟಕ ರಾಜ್ಯದ, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ನಾಗರೀಕ (ಪುರುಷ ಮತ್ತು ಮಹಿಳಾ) ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ www.ksp.gov.in ನಲ್ಲಿ ಆನ್-ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಹುದ್ದೆಗಳ ವಿವರ

  • ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ)(ಪುರುಷ)-1980
  • ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ)(ಮಹಿಳಾ)-496
  • ಪುರುಷ ಸ್ಥಳೀಯೇತರ ವೃಂದ (ಉಳಿದ ಮೂಲ ವೃಂದ)-ರೈಲ್ವೇಸ್-120
  • ಮಹಿಳಾ ಸ್ಥಳೀಯೇತರ ವೃಂದ (ಉಳಿದ ಮೂಲ ವೃಂದ)-ರೈಲ್ವೇಸ್-30

ಒಟ್ಟು 2626

ಸೂಚನೆ: ಈ ಹುದ್ದೆಗಳ ಸಂಖ್ಯೆಯು ತಾತ್ಕಾಲಿಕವಾಗಿದ್ದು, ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಬದಲಾವಣೆ ಮಾಡಲಾಗುವುದು.

ಪೊಲೀಸ್ ಇಲಾಖೆಯಲ್ಲಿ ನೇಮಕಾತಿ

ವಯೋಮಿತಿ

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 12-06-2017 ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ ವಯಸ್ಸು ಮೀರಿರಬಾರದು.
ಸಾಮಾನ್ಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ

  • ಪ.ಜಾ/ಪ.ಪಂ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು
  • ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.
  • ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು

ವಿದ್ಯಾರ್ಹತೆ

ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವೇತನ ಶ್ರೇಣಿ: ರೂ.11600-21000/-

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೇಹದಾರ್ಢ್ಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಗಳನ್ನು ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.250/-
ಪ.ಜಾ/ಪ.ಪಂ/ಪ್ರ-1 ರ ಅಭ್ಯರ್ಥಿಗಳಿಗೆ ರೂ.100/-

ನಿಗದಿತ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸ್ಥಳೀಯ ಅಂಚೆ ಕಛೇರಿಯ ಅಧಿಕೃತ ಶಾಖೆಗಳಲ್ಲಿ ಕಛೇರಿಯ ವೇಳೆಯಲ್ಲಿ ಚಲನ್ ನೀಡಿ ಶುಲ್ಕ ಪಾವತಿಸಬೇಕು.

ಅಧಿಸೂಚನೆಯ ಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 27-05-2017, ಬೆಳಿಗ್ಗೆ 10.00 ಗಂಟೆಯಿಂದ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2017, ಸಂಜೆ 06.00 ಗಂಟೆಯವರೆಗೆ
  • ಅಧಿಕೃತ ಬ್ಯಾಂಕ್ ಶಾಖೆಗಳ/ಅಂಚೆ ಕಛೇರಿ ವೇಳೆಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 14-06-2017

ಹೆಚ್ಚಿನ ಮಾಹಿತಿಗಾಗಿ

ವೆಬ್ಸೈಟ್ ವಿಳಾಸ: www.ksp.gov.in
ಸಹಾಯವಾಣಿ 080-22943346 ಅನ್ನು ಸಂಪರ್ಕಿಸಬಹುದು

For Quick Alerts
ALLOW NOTIFICATIONS  
For Daily Alerts

English summary
Karnataka State Police one again comes out with mega recruitment drive. According to advertisement released in May 2017 total 2626 jobs open for Civil Police Constable.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X