ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಹೈದರಾಬಾದ್ ಸ್ಥಳೀಯ ಪ್ರಾಂತ್ಯಗಳಾದ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳ ಸ್ಥಳೀಯ ಅರ್ಹ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತದಲ್ಲಿ ಹೈದರಾಬಾದ್ ಸ್ಥಳೀಯ ಪ್ರಾಂತ್ಯಗಳಾದ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳ ಸ್ಥಳೀಯ ಅರ್ಹ ಅಭ್ಯರ್ಥಿಗಳಿಂದ ಹಾಗೂ ಕನಿಕಾ ನಿಯಮಿತದ ವೃಂದ ಮತ್ತು ನೇಮಕಾತಿ 2017 ರನ್ವಯ ಅವಶ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ವಿವರ

ಹುದ್ದೆ ಹೆಸರುವೇತನ ಶ್ರೇಣಿವಿದ್ಯಾರ್ಹತೆಹುದ್ದೆ ಸಂಖ್ಯೆ
ಸಹಾಯಕ ಅಭಿಯಂತರರು-ಸಿವಿಲ್22800-43200ಬಿ ಇ ಸಿವಿಲ್01
ಟೆಕ್ನಿಕಲ್ ಸೂಪರ್ ವೈಸರ್17650-32000ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್01
ಸ್ಕಿಲ್ಡ್ ಡ್ರೈವರ್16550-26700

ಎಸ್ ಎಸ್ ಎಲ್ ಸಿ +ವಾಹನ ಪರವಾನಗಿ ಜೊತೆಗೆ ಆರು ವರ್ಷದ ಅನುಭವ

01
ಸಹಾಯಕ12500-24200ಯಾವುದಾದರು ಪದವಿ02
ಜ್ಯೂನಿಯರ್ ಅಸಿಸ್ಟೆಂಟ್11600-21000ದ್ವಿತೀಯ ಪಿಯುಸಿ02
ಗ್ರೇಡ್ ವರ್ಕರ್/ಹೆಲ್ಪರ್9600-14550ಎಸ್ ಎಸ್ ಎಲ್ ಸಿ03
ಒಟ್ಟು10

ಅರ್ಜಿ ಸಲ್ಲಿಕೆ

ಅರ್ಜಿ ನಮೂನೆಯನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಅನುಬಂಧಗಳೊಂದಿಗೆ ದಿನಾಂಕ 31-07-2017 ರ ನಾಲ್ಕು ಘಂಟೆಯೊಳಗೆ ಖುದ್ದಾಗಿ /ನೊಂದಾಯಿಸಿದ ಅಂಚೆ ಮೂಲಕ ಅರ್ಜಿಗಳನ್ನು ಉಪವ್ಯವಸ್ಥಾಪಕರು-ಸಿಬ್ಬಂದಿ, ಕವಿಕಾ, ಅಂಚೆ ಪೆಟ್ಟಿಗೆ ಸಂಖ್ಯೆ 2610, ಮೈಸೂರು ರಸ್ತೆ, ಬೆಂಗಳೂರು-560026 ರವರಿಗೆ ಸಲ್ಲಿಸತಕ್ಕದ್ದು.

ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ ನೇಮಕಾತಿ

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು

  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಹುದ್ದೆಗ ನಿಗದಿ ಪಡಿಸಿರುವ ವ್ಯಾಸಂಗದ ದೃಢೀಕೃತ ಅಂಕಪಟ್ಟಿಗಳ ಪ್ರತಿ
  • ಸ್ಥಳೀಯ ವ್ಯಕ್ತಿಯೆಂದು ರುಜುವಾತು ಪಡಿಸಲು ಸಹಾಯಕ ಆಯುಕ್ತರು, ಸಂಬಂಧಸಿದ ಉಪ ವಿಭಾಗ ಕಂದಾಯ ಇಲಾಖೆರವರಿಂದ ಅರ್ಹತಾ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ ಪ್ರತಿ
  • ಆದಾಯ ದೃಢೀಕರಣ ಪತ್ರದ ಪ್ರತಿ
  • ಆಧಾರ್ ಕಾರ್ಡಿನ ಪ್ರತಿ

ಅಭ್ಯರ್ಥಿಗಳಿಗೆ ಕನ್ನಡ ಭಾಷಾಜ್ಞಾನ (ಓದು/ಬರಹ) ಕಡ್ಡಾಯ

ಇದನ್ನು ಗಮನಿಸಿ: ಲೋಕಸಭೆಯಲ್ಲಿ 31 ಜ್ಯೂನಿಯರ್ ಕ್ಲರ್ಕ್ ನೇಮಕಾತಿ

ವಯೋಮಿತಿ

ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ಪೂರ್ಣಗೊಳಿಸಿರಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷ. (ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇರಲಿದೆ)

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.250/-
ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ರೂ.150/-

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನು ಗಮನಿಸಿ: ಭಾರತೀಯ ಹವಾಮಾನ ಇಲಾಖೆಯಲ್ಲಿ 1102 ಹುದ್ದೆಗಳ ನೇಮಕಾತಿ

For Quick Alerts
ALLOW NOTIFICATIONS  
For Daily Alerts

English summary
The Karnataka Vidyuth Karkhane Limited invites applications from eligible candidates for the various posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X