ವಿ ಎಸ್ ಎಸ್ ಸಿ ವಿವಿಧ ಹುದ್ದೆಗಳ ನೇಮಕಾತಿ

Posted By:

ವಿಕ್ರಮ ಸಾರಾಭಾಯಿ ಸ್ಪೇಸ್ ಸೆಂಟರ್ ನಲ್ಲಿ ಖಾಲಿಯಿರುವ ವಿಜ್ಞಾನಿ /ಇಂಜಿನಿಯರ್, ಫೈರ್ ಆಫೀಸರ್ ಮತ್ತು ಸಂಶೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ಚಾನಿಸಲಾಗಿದೆ.

ಅರ್ಹ ಮತ್ತು ಅಸಕ್ತ ಅಭ್ಯರ್ಥಿಗಳು ದಿನಾಂಕ 24 -04 -2017 ರ ಒಳಗೆ ಅನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿ ಎಸ್ ಎಸ್ ಸಿ ನೇಮಕಾತಿ

ಹುದ್ದೆಗಳ ವಿವರ

ಹುದ್ದೆಯ ಕೋಡ್ 1320 : 03 ಹುದ್ದೆಗಳು
ಹುದ್ದೆಯ ಹೆಸರು: ಎಂಜಿನಿಯರ್
ವೇತನ : ರೂ.61400 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಇ/ಎಂ.ಟೆಕ್ ಪದವಿ ಅಥವಾ ಇಂಜಿನಿಯರಿಂಗ್ ಇನ್ ಮೆಕಾನಿಕ್ಸ್/ಮಷಿನ್ ಡಿಸೈಸ್/ಮೆಕಾನಿಕಲ್ ಡಿಸೈನ್ ನಲ್ಲಿ ಶೇ.60 ರಷ್ಟು ಅಂಕಗಳಿಸಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ

ಹುದ್ದೆಯ ಕೋಡ್: 1321 : 01 ಹುದ್ದೆ (ಬ್ಯಾಕ್ಲಾಗ್)
ಹುದ್ದೆಯ ಹೆಸರು: ವಿಜ್ಙಾನಿ
ವೇತನ: ರೂ.61400 /-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಶೇ.65 ಅಂಕಗಳೊಂದಿಗೆ ಕೆಮಿಸ್ಟ್ರಿ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ

ಹುದ್ದೆಯ ಕೋಡ್ :1322 : 01 ಹುದ್ದೆ
ಹುದ್ದೆಯ ಹೆಸರು: ವಿಜ್ಙಾನಿ
ವೇತನ: ರೂ.61400 /-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಶೇ.65 ಅಂಕಗಳೊಂದಿಗೆ ಕೆಮಿಸ್ಟ್ರಿ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ

ಹುದ್ದೆಯ ಕೋಡ್ 1323: 04 ಹುದ್ದೆಗಳು
ಹುದ್ದೆಯ ಹೆಸರು: ಎಂಜಿನಿಯರ್
ವೇತನ : ರೂ.61400 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಇ/ಬಿ.ಟೆಕ್ ಪದವಿ ಅಥವಾ ಇಂಜಿನಿಯರಿಂಗ್ ಇನ್ ಮೆಕಾನಿಕ್ಸ್/ಮಷಿನ್ ಡಿಸೈಸ್/ಮೆಕಾನಿಕಲ್ ಡಿಸೈನ್ ನಲ್ಲಿ ಶೇ.65 ರಷ್ಟು ಅಂಕಗಳಿಸಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ

ಹುದ್ದೆಯ ಕೋಡ್: 1324 : 01 ಹುದ್ದೆ
ಹುದ್ದೆಯ ಹೆಸರು: ಫೈರ್ ಆಫೀಸರ್
ವೇತನ : ರೂ.61400 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ, ನ್ಯಾಷನಲ್ ಫೈರ್ ಸರ್ವೀಸ್ ಕಾಲೇಜಿನಲ್ಲಿ ಡಿಪ್ಲೊಮಾ ಮತ್ತು ಸ್ಟೇಷನ್ ಆಫೀಸರ್ ಆಗಿ ಆರು ವರ್ಷಗಳ ಅನುಭವ
ಅಥವಾ
ಫೈರ್ ಎಂಜಿನಿಯರಿಂಗ್ ಪದವಿ ಜೊತೆಗೆ ಆರು ವರ್ಷಗಳ ಸ್ಟೇಷನ್ ಆಫೀಸರ್ ಅನುಭವ
ವಯೋಮಿತಿ: ಗರಿಷ್ಠ 45 ವರ್ಷ

ಹುದ್ದೆಯ ಹೆಸರು: ಸಂಶೋಧಕ ವಿಜ್ಞಾನಿ: 02 ಹುದ್ದೆಗಳು
ವೇತನ : ರೂ.61400 /- (ತಿಂಗಳಿಗೆ)
ವಿದ್ಯಾರ್ಹತೆ: ಮೀಟ್ಯೋರಾಲಜಿಯಲ್ಲಿ ಶೇ.65 ಅಂಕಗಳೊಂದಿಗೆ ಸ್ನಾತಕ ಪದವಿ.
ವಯೋಮಿತಿ: ಗರಿಷ್ಠ 35 ವರ್ಷ

ಸೂಚನೆ
ಸರ್ಕಾರಿ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಆಯ್ಕೆ ಪ್ರಕ್ರಿಯೆ

  • ವಿಜ್ಞಾನಿ/ಇಂಜಿನಿಯರ್ ಮತ್ತು ಸಂಶೋಧಕ ಅಭ್ಯರ್ಥಿಗಳನ್ನು ಆನ್-ಲೈನ್ ಬಯೋಡಾಟಾ ಪರಿಗಣಿಸಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
  • ಫೈರ್ ಆಫೀಸರ್ ಹುದ್ದೆಗೆ ಪ್ರಾಯೋಗಿಕ ಪರೀಕ್ಷೆ ಜೊತೆಗೆ ಲಿಖಿತ ಪರೀಕ್ಷೆ ನಡೆಸಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳಿಗೆ ರೂ.250/-
  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಮಹಿಳೆ/ ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
  • ಅರ್ಜಿ ಶುಲ್ಕವನ್ನು ಆನ್-ಲೈನ್ ಮೂಲಕವೇ ಪಾವತಿಸುವುದು.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆನ್-ಲೈನ್ ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಕಾಪಾಡಿಕೊಳ್ಳುವುದು.

ಆನ್-ಲೈನ್ ಅರ್ಜಿ ಸಲ್ಲಿಸುವ ವಿಳಾಸ ww.vssc.gov.in

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-04-2017

ಹೆಚ್ಚಿನ ಮಾಹಿತಿಗಾಗಿ www.vssc.gov.in ಗಮನಿಸಿ

English summary
VIKRAM SARABHAI SPACE CENTRE INVITES APPLICATION FOR THE VARIOUS POSTS
Please Wait while comments are loading...