ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ) ನಡೆಸುವ 10 ಮತ್ತು 12ನೇ ತರಗತಿ ಪರೀಕ್ಷೆಯ ಪ್ರವೇಶ ಪತ್ರಗಳ ಬಿಡುಗಡೆ

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ) ನಡೆಸುವ 10 ಮತ್ತು 12ನೇ ತರಗತಿ ಪರೀಕ್ಷೆಯ ಪ್ರವೇಶ ಪತ್ರಗಳು ಬಿಡುಗಡೆಯಾಗಿವೆ.ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಪ್ರವೇಶ ಪತ್ರಗಳನ್ನು ಆನ್ಲೈನ್ ನಲ್ಲಿ  ಡೌನ್ಲೋಡ್ ಮಾಡಿಕೊಳ್ಳಿ

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ) ನಡೆಸುವ 10 ಮತ್ತು 12ನೇ ತರಗತಿ ಪರೀಕ್ಷೆಯ ಪ್ರವೇಶ ಪತ್ರಗಳು ಬಿಡುಗಡೆಯಾಗಿವೆ.
ಪ್ರವೇಶ ಪತ್ರಗಳನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ.ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ಲಾಗ್ ಇನ್ ಆಗುವುದರ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಕಳೆದ ತಿಂಗಳು ಸಿ ಬಿ ಎಸ್ ಇ ಎಕ್ಸಾಮ್ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಈ ಬಾರಿ ಒಟ್ಟು 1667573 ವಿದ್ಯಾರ್ಥಿಗಳು 10ನೇ ತರಗತಿಯ ಪರೀಕ್ಷೆ ತೆಗೆದುಕೊಂಡಿದ್ದು 10ನೇ ತರಗತಿ ಪರೀಕ್ಷೆಗಳು ಮಾರ್ಚ್ 9 ರಿಂದ ಏಪ್ರಿಲ್ 10ರವರೆಗೂ ನಡೆಯಲಿವೆ. 12ನೇ ತರಗತಿ ಪರೀಕ್ಷೆಗಳು ಮಾರ್ಚ್ 9ರಿಂದ ಏಪ್ರಿಲ್ 29ರವರೆಗೂ ನಡೆಯಲಿವೆ.

ಪ್ರವೇಶ ಪತ್ರ

ಪ್ರವೇಶ ಪತ್ರವು ವಿದ್ಯಾರ್ಥಿಯ ವಿವರಗಳನ್ನು ಒಳಗೊಂಡಿರುವುದಲ್ಲದೆ ವಿದ್ಯಾರ್ಥಿಯ ನೋಂದಣಿ ಸಂಖ್ಯೆ, ಕ್ರಮ ಸಂಖ್ಯೆ ಮತ್ತು ಪರೀಕ್ಷಾ ಕೇಂದ್ರದ ಮಾಹಿತಿ ಹೊಂದಿರುತ್ತದೆ. ವೆಬ್ ಸೈಟ್ ನಲ್ಲಿ ೧೦ ಮತ್ತು ೧೨ನೇ ತರಗತಿ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಪಟ್ಟಿ ಇದ್ದು, ಪ್ರವೇಶ ಪತ್ರವನ್ನು ಮತ್ತು ಸೆಂಟ್ರಲ್ ಮೆಟೀರಿಯಲ್ ಪಡೆಯಬಹುದಾಗಿದೆ.

ಪ್ರವೇಶ ಪತ್ರ ಪಡೆಯಲು ಅನುಸರಿಸಬೇಕಾದ ಕ್ರಮ

೧.ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ) ವೆಬ್ ಸೈಟ್ ಭೇಟಿ ಮಾಡಿ.
೨.ವೆಬ್ ಪೇಜ್ ನ್ ಬಲ ಭಾಗದಲ್ಲಿರುವ ಅಡ್ಮಿಟ್ ಕಾರ್ಡ್/ ಎಲ್ ಓ ಸಿ / ಸೆಂಟ್ರಲ್ ಮೆಟೀರಿಯಲ್ ಫಾರ್ ಬೋರ್ಡ್ ಎಕ್ಸಾಮ್ -೨೦೧೭ ಮೇಲೆ ಕ್ಲಿಕ್ ಮಾಡಿ
೩.ಮುಂದಿನ ಪೇಜ್ ನಲ್ಲಿ " CLICK HERE TO PROCEED " ಎಂಬಲ್ಲಿ ಕ್ಲಿಕ್ ಮಾಡಿ.
೪.ಕೊಟ್ಟಿರುವ ಜಾಗದಲ್ಲಿ ನಿಮ್ಮ ವಿವರಗಳಾದ ಯೂಸರ್ ಐಡಿ, ಪಾಸ್ವರ್ಡ್ ಮತ್ತು ಸೆಕ್ಯೂರಿಟಿ ಪಿನ್ ನಮೂದಿಸಿ
೫.login ಕ್ಲಿಕ್ ಮಾಡಿ
೬.ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡು ನಂತರ ಪ್ರಿಂಟ್ ತೆಗೆದುಕೊಳ್ಳಿ .
ಸೂಚನೆ:
ವಿದ್ಯಾರ್ಥಿಗಳು ಪರೀಕ್ಷೆಗೆ ಕಡ್ಡಾಯವಾಗಿ ಪ್ರವೇಶ ಪತ್ರವನ್ನು ತೆಗೆದುಕೊಂಡು ಹೋಗಬೇಕು, ಪ್ರವೇಶ ಪಾತ್ರದ ಜೊತೆಯಲ್ಲಿ ನಿಮ್ಮ ಇತ್ತೀಚಿನ ಭಾವಚಿತ್ರ ಮತ್ತು ಗುರುತಿನ ಚೀಟಿ ಕೂಡ ಕಡ್ಡಾಯವಾಗಿ ಒಯ್ಯಬೇಕು.

For Quick Alerts
ALLOW NOTIFICATIONS  
For Daily Alerts

English summary
The admit card for the CBSE class 10 and 12 exams 2017 has been released by the Central Board of Secondary Education (CBSE)
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X