ವಿಟಿಯು ಪರೀಕ್ಷೆ: ವಿದ್ಯಾರ್ಥಿಗಳ ಬೇಡಿಕೆಯಂತೆ ಪರೀಕ್ಷೆ ಮುಂದೂಡಿಕೆ

ಹಲವು ವಿದ್ಯಾರ್ಥಿ ಸಂಘಟನೆಗಳ ಬೇಡಿಕೆಗಳಿಗೆ ಮಣಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಈ ತಿಂಗಳು ಆರಂಭವಾಗಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.

ಸದಾ ಕಲಾ ಸಮಸ್ಯೆಗಳಿಂದಲೇ ಸುದ್ದಿಯಲ್ಲಿರುವ ವಿಟಿಯು ಅಂತು ಇಂತು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಮಣಿದು ಪರೀಕ್ಷಾ ದಿನಾಂಕವನ್ನು ಮುಂದೂಡಿದೆ.

ಪರೀಕ್ಷೆಗಳ ಮುಂದೂಡಿಕೆ, ಫಲಿತಾಂಶ ಪ್ರಕಟಣೆ ವಿಳಂಬದ ಜತೆಗೆ ಶುಲ್ಕ ಹೆಚ್ಚಳ ಹೀಗೆ ನಾನಾ ವಿಚಾರವಾಗಿ ವಿದ್ಯಾರ್ಥಿಗಳ ಕೋಪಕ್ಕೆ ವಿಟಿಯು ತುತ್ತಾಗಿತ್ತು.

ಹಲವು ವಿದ್ಯಾರ್ಥಿ ಸಂಘಟನೆಗಳ ಬೇಡಿಕೆಗಳಿಗೆ ಮಣಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಈ ತಿಂಗಳು ಆರಂಭವಾಗಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ಮರುಮೌಲ್ಯಮಾಪನ ಫಲಿತಾಂಶವನ್ನು ತಡವಾಗಿ ಬಿಡುಗಡೆ ಮಾಡಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ವಿವಿ ಈ ತೀರ್ಮಾನ ಕೈಗೊಂಡಿದೆ.

ಜೂನ್ 5ರಂದು ಆರಂಭವಾಗಬೇಕಿದ್ದ ಅಂತಿಮ ಬಿಇ ವರ್ಷದ ಪರೀಕ್ಷೆಗಳು ಜೂನ್ 12ರಂದು ನಡೆಯಲಿದೆ. ಇತರ ಕೆಳ ಹಂತದ ಸೆಮಿಸ್ಟರ್ ಪರೀಕ್ಷೆಗಳು ಜೂನ್ 23ರಂದು ಆರಂಭವಾಗಲಿದೆ.

ವಿಟಿಯು ಪರೀಕ್ಷೆ ಮುಂದೂಡಿಕೆ

ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ಜುಲೈ 31ರಂದು ಮುಗಿಯಲಿದೆ.ವಿವರವಾದ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ವಿವಿ ಉಪ ಕುಲಪತಿ ಕರಿಸಿದ್ದಪ್ಪ ಹೇಳಿದ್ದಾರೆ

ವಿಟಿಯು ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಅಧಿಕೃತ ವೆಬ್ ತಾಣದಲ್ಲಿ ಈಗ ಲಭ್ಯವಿದೆ

Revised - Time Table for B.E./B.TECH. Examinations, June / July 2017

Revised - B.ARCH. I to IV SEMESTER (2015 SCHEME) [CBCS Scheme] EXAMINATIONS, June / July 2017

Revised Time table for Crash Course B.Arch. Examinations May 2017

Time Table for M.TECH. Examinations, June / July 2017

MCA Examinations, June / July 2017

MBA Examinations, June / July 2017

JUNE/JULY 2017 M.ARCH. (2016 Scheme - CBCS) EXAMINATIONS

ಪರೀಕ್ಷಾ ಶುಲ್ಕದಲ್ಲಿ ಬದಲಾವಣೆ ಇಲ್ಲ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕ ಪರಿಷ್ಕರಣೆ ಸಾಧ್ಯವಿಲ್ಲ ಎಂದು ಕುಲಪತಿ ಡಾ| ಕರಿಸಿದ್ದಪ್ಪ ಸ್ಪಷ್ಟಪಡಿಸಿದ್ದಾರೆ. ವಿಶ್ವವಿದ್ಯಾಲಯದ ಸಮಿತಿಯ ನಿರ್ಧಾರದಂತೆ ಪರೀಕ್ಷಾ ಶುಲ್ಕ ಏರಿಸಿದ್ದೇವೆ. ರಾಜ್ಯದ ಬೇರೆಲ್ಲ ವಿವಿಗಳಿಗೆ ಹೋಲಿಸಿದರೆ, ವಿಟಿಯು ಪರೀಕ್ಷಾ ಶುಲ್ಕ ಕಡಿಮೆಯಿದೆ. ಹೊಸ ಶುಲ್ಕದಲ್ಲಿ ಮತ್ತೆ ಪರಿಷ್ಕರಣೆ ಮಾಡಲು ಸಾಧ್ಯ ವಿಲ್ಲ ಎಂದು ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
The VTU was forced to put off its BE exams amidst an inordinate delay in the re-evaluation of answer scripts. Exams for all semesters, including the final one, have been rescheduled, VTU said.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X