2017-18ನೇ ಸಾಲಿನ ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ, ಪಿಹೆಚ್.ಡಿ, ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ, ಪಿಹೆಚ್.ಡಿ, ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ 2ಎ,2ಬಿ,3ಎ,3ಬಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ನೀಡಿದ್ದ ದಿನಾಂಕವನ್ನು ವಿಸ್ತರಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 15-07-2017 ರೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಅರ್ಹತೆಗಳು

  • ಸ್ನಾತಕೋತ್ತರ ಪದವಿ/ಪಿಹೆಚ್.ಡಿ/ಸಂಶೋಧನೆ-ಸಂಬಂಧಪಟ್ಟ ಪದವಿ/ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.60% ಅಂಕಗಳು ಅಥವಾ ಸಮಾನವಾದ ಗ್ರೇಡ್ ಪಡೆದಿರಬೇಕು.
  • ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಸರಿಯಾಗಿ 35 ವರ್ಷ ಮಿತಿಯೊಳಗಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.6.00 ಲಕ್ಷ ಮಿತಿಯೊಳಗಿರಬೇಕು.
  • G-MAT, TOEFL, GRE ಮೂರರಲ್ಲಿ ಯಾವುದಾದರೂ ಒಂದು ಪ್ರವೇಶ ಪರೀಕ್ಷೆ ತೇರ್ಗಡೆಯಾಗಿರಬೇಕು.
  • eorld University Ranking ಅಥವಾ Best Global University Ranking ಹೊಂದಿರುವ ವಿಶ್ವವಿದ್ಯಾಲಯವಾಗಬೇಕು.
  • ಭಾರತದ ಪ್ರಜೆಯಾಗಿದ್ದು, ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಒಂದು ಕುಟುಂಬದ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಧನಸಹಾಯ ನೀಡಲಾಗುವುದು.
  • ಧನಸಹಾಯದ ಮೊತ್ತ ವಾರ್ಷಿಕವಾಗಿ ಗರಿಷ್ಠ ರೂ.10.00 ಲಕ್ಷ ಅಥವಾ ವಾಸ್ತವ ವೆಚ್ಚ ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ನೀಡಲಾಗುವುದು.
ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ

ಆಯ್ಕೆ ವಿಧಾನ

ಆಯ್ಕೆಯು ಮೂರು ಹಂತಗಳಲ್ಲಿ ನಡೆಯುವುದು.

  1. 1.ಹಂತದಲ್ಲಿ ವಿದ್ಯಾರ್ಥಿಯಿಂದ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಕೆ.
  2. ಸಂಬಂಧಪಟ್ಟ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಮೂಲ ದಾಖಲಾತಿಗಳ ಪರಿಶೀಲನೆ ಮತ್ತು ಸ್ಥಳ ಪರಿಶೀಲನೆ.
  3. ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂದರ್ಶನ

ಅನುದಾನ ಪಾವತಿ ವಿಧಾನ

  • ಆಯ್ಕೆಯಾದ ವಿದ್ಯಾರ್ಥಿಯು ಮೊದಲನೇ ವರ್ಷದ ಧನಸಹಾಯವವನ್ನು ಪಡೆಯಲು ವಿಸಾ ಪಾಸ್ ಪೋರ್ಟ್ ಪ್ರತಿ ಮತ್ತು ಸಂಬಂಧಿತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿರುವ ಬಗ್ಗೆ ದಾಖಲೆಗಳನ್ನು ಒದಗಿಸಬೇಕು.
  • ಎರಡು ಮತ್ತು ಮೂರು ವರ್ಷದ ಧನ ಸಹಾಯವನ್ನು ಪಡೆಯಲು ಸಂಬಂಧಿತ ವಿಶ್ವವಿದ್ಯಾಲಯಗಳಿಂದ ಪ್ರಗತಿ ವರದಿ ಸಲ್ಲಿಸುವುದು.
  • ಧನ ಸಹಾಯವನ್ನು ಒಂದು ವರ್ಷದಲ್ಲಿ ಒಂದೇ ಕಂತಿನಲ್ಲಿ ನೀಡಲಾಗುವುದು.
  • ಅಂತಿಮ ವರ್ಷದ ವ್ಯಾಸಂಗದ ಅವಧಿಯು 6 ತಿಂಗಳಿಗಿಂತ ಕಡಿಮೆ ಇದ್ದರೆ ಶೇ.50 ರಷ್ಟು ಮೊತ್ತವನ್ನು ಆ ವರ್ಷಕ್ಕೆ ನೀಡಲಾಗುವುದು.
  • ವಿದೇಶಿ ವ್ಯಾಸಂಗ ವೇತನವನ್ನು ವಿದ್ಯಾರ್ಥಿ ಬ್ಯಾಂಕ್ ಖಾತೆಗೆ NEFT-RTGS ಮೂಲಕ ಪಾವತಿ ಮಾಡಲಾಗುವುದು.

ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-07-2017
ಹೆಚ್ಚಿನ ಮಾಹಿತಿಗಾಗಿ backwardclasses.kar.nic.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
Online applications are invited from backward class students who are desired to study abroad under D.Devaraja Urs Videshi Vyasanga Vethana.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X