ಅರಿವು ಯೋಜನೆ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ

2017-18ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಪ್ರವೇಶ ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಾಲ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

2017-18ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರವೇಶ ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಮಂಜೂರಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ.ಇ.ಟಿ. ಮೂಲಕ ಸೀಟು ಪಡೆದು ಬಿ.ಇ., ಎಂ.ಬಿ.ಬಿ.ಎಸ್., ಬಿ.ಯು.ಎಂ.ಎಸ್., ಬಿ.ಡಿ.ಎಸ್., ಬಿ.ಎ.ಎಂ.ಎಸ್., ಬಿ.ಹೆಚ್.ಎಂ.ಎಸ್., ಎಂ.ಸಿ.ಎ., ಎಂ.ಎಸ್ಸಿ(ಅಗ್ರಿ)., ಮುಂತಾದ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ ರೂ.1.00 ಲಕ್ಷಗಳವರೆಗೆ ಸಾಲ ಮಂಜೂರು ಮಾಡಲಾಗುತ್ತದೆ.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ

2017-18ನೇ ಸಾಲಿಗೆ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿ.ಇ.ಟಿ.ಗೆ ಪಾವತಿಸಬೇಕಾದ ಶುಲ್ಕವನ್ನು ಸಿ.ಇ.ಟಿ ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪಾವತಿಸಿದ ಮುಂಗಡ ಹಣದ ಮೊತ್ತದಲ್ಲಿ ಜಮಾ ಮಾಡಲಾಗುತ್ತದೆ.

2017-18ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ನಿಗಮದಿಂದ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ಪ್ರ-1, ಪ್ರ-2ಎ(ವಿಶ್ವಕರ್ಮ ಮತ್ತು ಉಪ ಜಾತಿಗಳನ್ನು ಹಾಗೂ ಅಲ್ಪ ಸಂಖ್ಯಾತರನ್ನು ಹೊರತುಪಡಿಸಿ), ಪ್ರ-3ಎ ಮತ್ತು ಪ್ರ-3ಬಿ ಗೆ ಸೇರಿದ್ದು, ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿಕ ವರಮಾನ ರೂ.3.50 ಲಕ್ಷಗಳ ಮಿತಿಯಲ್ಲಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆನ್‍ಲೈನ್ ಮೂಲಕ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆ

ಸಾಲ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ www.karnataka.gov.in/dbcdc ರಲ್ಲಿ ಲಾಗಿನ್ ಆಗಿ ವೆಬ್‍ಸೈಟ್‍ನಲ್ಲಿ ಲಭ್ಯವಿರುವ Usernameinfra\dbcdcarivu ಮತ್ತು Passward - DB(d#098 ನ್ನು ನಮೂದಿಸಿ ಅರ್ಜಿಯನ್ನು ಆನ್‍ಲೈನ್‍ಲ್ಲಿ ಭರ್ತಿಮಾಡುವುದು.

ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಲಗತ್ತಿಸುವುದು.

ಕೊನೆಯ ದಿನಾಂಕ

ಸಂಪೂರ್ಣ ಭರ್ತಿ ಮಾಡಿದ ಅರ್ಜಿಗಳನ್ನು ಆನ್‍ಲೈನ್‍ಲ್ಲಿ ದಿನಾಂಕ 20.05.2017 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ಕಛೇರಿಗಳನ್ನು ಸಂಪರ್ಕಿಸುವುದು.

ಅರ್ಜಿಯೊಂದಿಗೆ Scan ಮಾಡಿ ಸಲ್ಲಿಸಬೇಕಾದ ದಾಖಲೆಗಳು

  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ.
  • ಆಧಾರ್ ಕಾರ್ಡ್ ಸಂಖ್ಯೆ.
  • ಎಸ್.ಎಸ್.ಎಲ್.ಸಿ ಅಂಕಪಟ್ಟಿ.
  • ಸಿ.ಇ.ಟಿ ಪ್ರವೇಶ ಪರೀಕ್ಷೆ ಅಡ್ಮಿಷನ್ ಟಿಕೆಟ್.

ಕಛೇರಿ ವಿಳಾಸ

ನಂ.16-ಡಿ, 4ನೇ ಮಹಡಿ,
ದೇವರಾಜ ಅರಸು ಭವನ,
ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ,
ವಸಂತನಗರ, ಬೆಂಗಳೂರು-52

For Quick Alerts
ALLOW NOTIFICATIONS  
For Daily Alerts

English summary
applications are invited to grant 2017-18 academic year student loan under arivu scheme for cet rank holders who belongs to backward classes.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X