ಇಂದಿನಿಂದ ರಾಜ್ಯದ 404 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ 2017ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಇಂದಿನಿಂದ ಆರಂಭವಾಗಿದೆ. ರಾಜ್ಯದ 404 ಕೇಂದ್ರಗಳಲ್ಲಿ ಸಿಇಟಿ ನಡೆಯಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ 2017ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಇಂದಿನಿಂದ ಆರಂಭವಾಗಿದೆ. ರಾಜ್ಯದ 404 ಕೇಂದ್ರಗಳಲ್ಲಿ ಸಿಇಟಿ ನಡೆಯಲಿದೆ.

ಕರ್ನಾಟಕದಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಥವಾ ಅದನ್ನು ಬರೆದಿರುವ ವಿದ್ಯಾರ್ಥಿಗಳು, ಯಾವ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯನ್ನು ವ್ಯಾಸಂಗ ಮಾಡಿರುವರೋ, ಆ ಜಿಲ್ಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೀಡುವ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ- 2017'ನ್ನು ಬರೆಯಬೇಕಿರುತ್ತದೆ.

2017 ಮೇ 02 ಮತ್ತು 03 ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯಲಿದೆ ಎಂದು ಕೆಇಎ ತಿಳಿಸಿದೆ. ಈ ಬಾರಿ ಸಿಬಿಎಸ್ಇ ನೀಟ್-2017 ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪರೀಕ್ಷೆಯ ಜವಾಬ್ದಾರಿ ಹೊತ್ತಿರುವುದರಿಂದ ವೈದ್ಯಕೀಯ ಸೀಟು ಹೊರತುಪಡಿಸಿ ಎಂಜಿನಿಯರಿಂಗ್, ಆಯುಷ್ ಹಾಗೂ ಕೃಷಿ ಎಂಜಿನಿಯರಿಂಗ್ ಸೀಟುಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ.

ಇಂದಿನಿಂದ ಸಿಇಟಿ ಪರೀಕ್ಷೆ

ಮೇ 2ರಂದು ಬೆಳಗ್ಗೆ ಜೀವಶಾಸ್ತ್ರ ನಡೆದರೆ, ಮಧ್ಯಾಹ್ನದ ಬಳಿಕ ಗಣಿತ ಪರೀಕ್ಷೆ ನಡೆಯಲಿದೆ. ಮೇ 3ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದೆ. ಈ ನಾಲ್ಕು ವಿಷಯಗಳಿಗೆ 60 ಅಂಕಗಳನ್ನು ನಿಗದಿಪಡಿಸಲಾಗಿದೆ.

ಪರೀಕ್ಷೆಗಳು ನಡೆಯುವ ಸಮಯ

ಬೆಳಗ್ಗೆ 10.30ರಿಂದ 11.50ರವರೆಗೆ ನಡೆದರೆ, ಮಧ್ಯಾಹ್ನದ ಪರೀಕ್ಷೆಗಳು 2.30ರಿಂದ 3.50ರವರೆಗೆ ನಡೆಯಲಿದೆ. ಹೊರನಾಡು, ಗಡಿನಾಡು ಕನ್ನಡಿಗರಿಗೆ 50 ಅಂಕಗಳಿಗೆ ಮಾತ್ರ ನಡೆಯುವ ಕನ್ನಡ ಭಾಷಾ ಪರೀಕ್ಷೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ನಡೆಯಲಿದೆ.

ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. 404 ವೀಕ್ಷಕರು, 808 ವಿಶೇಷ ಜಾಗೃತಿ ದಳದ ಸದಸ್ಯರು, 404 ಪ್ರಶ್ನೆ ಪತ್ರಿಕೆ ಪಾಲಕರು, 11,625 ಕೊಠಡಿ ಮೇಲ್ವಿಚಾರಕರು ಹಾಗೂ 32 ಸಾವಿರ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಕ ಮಾಡಲಾಗಿದೆ. ಕನ್ನಡ ಭಾಷಾ ಪರೀಕ್ಷೆಗೆ ಹೊರನಾಡು ಮತ್ತು ಗಡಿನಾಡಿನ 1,800 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.

ಕನ್ನಡದಲ್ಲಿ ಪ್ರಶ್ನೆಪತ್ರಿಕೆ

ಇದೇ ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಮುದ್ರಿಸಲಾಗುತ್ತಿದೆ. ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ನೀಡಲು ನೀಟ್ ಒಪ್ಪಿಗೆ ಸೂಚಿರುವ ಹಿನ್ನೆಲೆಯಲ್ಲಿ ಇಂಗ್ಲಿಷ್ ಜತೆ ಕನ್ನಡ ಪ್ರಶ್ನೆ ಪತ್ರಿಕೆಯನ್ನೂ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಿರ್ಧರಿಸಿದೆ. ಆದರೆ ಇಂಗ್ಲಿಷ್ ಪ್ರಶ್ನೆಪತ್ರಿಕೆಯನ್ನೇ ಅಂತಿಮವೆಂದು ಪರಿಗಣಿಸಲು ತೀರ್ಮಾನಿಸಲಾಗಿದೆ. ವಿಜ್ಞಾನದ ಕೆಲವು ಪದಗಳು ಅನುವಾದಕ್ಕೆ ಕಷ್ಟವಾಗಿರುವುದರಿಂದ ವಿದ್ಯಾರ್ಥಿಗಳು ಆಂಗ್ಲಭಾಷೆಯಲ್ಲಿರುವ ಪ್ರಶ್ನೆಗಳನ್ನೇ ಓದಿಕೊಂಡು ಉತ್ತರಿಸಬೇಕು. ಆಂಗ್ಲಭಾಷೆಯಲ್ಲಿ ಪ್ರಶ್ನೆ ಸರಿಯಿದ್ದು, ಕನ್ನಡ ಅನುವಾದ ತಪ್ಪಿದ್ದರೆ ಆಕ್ಷೇಪಣೆ ಸಲ್ಲಿಸಲು ಸಾಧ್ಯವಿಲ್ಲ. ಮೌಲ್ಯಮಾಪನಕ್ಕೆ ಇಂಗ್ಲಿಷ್ ಪ್ರಶ್ನೆಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಕೆಇಎ ಮೂಲಗಳು ತಿಳಿಸಿವೆ. ಎರಡು ಭಾಷೆಯಲ್ಲಿ ಪ್ರಶ್ನೆಗಳಿದ್ದರೂ ಪ್ರಶ್ನೆಗಳ ಶ್ರೇಣಿ, ಸಂಖ್ಯೆ ಒಂದೇ ಆಗಿರುತ್ತವೆ.

For Quick Alerts
ALLOW NOTIFICATIONS  
For Daily Alerts

English summary
The Common Entrance Test (CET) for admissions to government and government-quota seats in professional courses will be held from May 2 to 4.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X