ಕಾಮನ್‌ ಅಡ್ಮಿಷನ್‌ ಟೆಸ್ಟ್‌-ಕ್ಯಾಟ್‌ 2017 ಕ್ಕೆ ದಿನಗಣನೆ

2016 ರ ಕ್ಯಾಟ್ ಪರೀಕ್ಷೆಯಂತೆಯೇ ಈ ಬಾರಿಯ ಪರೀಕ್ಷೆ ನಡೆಯಲಿದ್ದು ಈ ಬಾರಿ 20000 ಸೀಟುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು 10000 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌-ಐಐಎಂ) ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಕಾಮನ್‌ ಅಡ್ಮಿಷನ್‌ ಟೆಸ್ಟ್‌-ಕ್ಯಾಟ್‌)ಯನ್ನು ಈ ಬಾರಿ ಲಕ್ನೋವಿನ ಐಐಎಂ ಆಯೋಜಿಸಲಿದೆ.

2016 ರ ಕ್ಯಾಟ್ ಪರೀಕ್ಷೆಯಂತೆಯೇ ಈ ಬಾರಿಯ ಪರೀಕ್ಷೆ ನಡೆಯಲಿದ್ದು ಈ ಬಾರಿ 20000 ಸೀಟುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು 10000 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

ಕಳೆದ ಸೆಪ್ಟೆಂಬರ್ ನಲ್ಲಿ ನಡೆಸಿದ ಸಭೆಯಲ್ಲಿ ಸೀಟು ಹೆಚ್ಚಳದ ತೀರ್ಮಾನ ಕೈಗೊಳ್ಳಲಾಗಿದ್ದು, ಸೀಟು ಹಂಚಿಕೆಗೆ ನಿಗದಿ ಪಡಿಸುವ ಸೀಟ್ ಮ್ಯಟ್ರಿಕ್ಸ್ ಅನ್ನು ಪರೀಕ್ಷೆಗಳ ಮುಗಿದ ನಂತರ ತಿಳಿಸಲಾಗುವುದು.

ಕಾಮನ್‌ ಅಡ್ಮಿಷನ್‌ ಟೆಸ್ಟ್‌-ಕ್ಯಾಟ್‌

ಕ್ಯಾಟ್ ಪರೀಕ್ಷೆಯ ಅಧಿಕೃತ ಅಧಿಸೂಚನೆ ಈ ತಿಂಗಳ ಅಂತ್ಯಕ್ಕೆ ಹೊರಬೀಳಲಿದ್ದು, ಆಗಸ್ಟ್ 7 ನಂತರ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಲಿವೆ.
ಅರ್ಜಿ ಸಲ್ಲಿಕೆಗೆ ಪ್ರಕ್ರಿಯೆ ಪ್ರಾರಂಭದ ನಂತರ 45 ದಿನಗಳ ಕಾಲಾವಕಾಶವನ್ನು ನೀಡಲಾಗುತ್ತದೆ.

ಈ ಬಾರಿಯ ಪರೀಕ್ಷಾ ಶುಲ್ಕದಲ್ಲಿ ಯಾವುದೇ ವ್ಯಾತ್ಯಾಸ ಇರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಕಳೆದ ಸಾಲಿನಲ್ಲಿ ನಿಗದಿ ಪಡಿಸಿದ್ದ ರೂ.1700/- ಈ ಬಾರಿಯು ಮುಂದುವರೆಯಲಿದೆ.

ದೇಶದ 138 ನಗರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಅವಧಿಯು ಮೂರು ಗಂಟೆಗಳಾಗಿದ್ದು (180 ನಿಮಿಷ) ಮೂರು ವಿಭಾಗಗಳಲ್ಲಿ ಪ್ರಶ್ನೆಗಳು ಇರಲಿವೆ. ಎರಡು ಲಕ್ಷಕ್ಕು ಅಧಿಕ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳುತ್ತಾರೆ.

ಸಿಎಟಿ ಪರೀಕ್ಷೆ

ಸಿಎಟಿ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆಯು ದೇಶದಲ್ಲಿ ನಡೆಯುವ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೆನಿಸಿದೆ. ಪ್ರತಿಷ್ಠಿತ ಐಐಎಂಗಳು ಮತ್ತು ಎಫ್‌ಎಂಎಸ್, ಎಂಡಿಐ, ಎಸ್‌ಪಿ ಜೈನ್, ಐಐಟಿಗಳು ಸೇರಿದಂತೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾವಹಾರಿಕ (ಬಿಸಿನೆಸ್) ಪದವಿಗೆ ಪ್ರವೇಶ ಪಡೆಯಲು ಸಿಎಟಿ ಅರ್ಹತೆ ಕಡ್ಡಾಯ.

ಒಟ್ಟು ಎರಡು ವಿಭಾಗಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗಿರುತ್ತದೆ. ಮೊದಲ ವಿಭಾಗದಲ್ಲಿ ಗುಣಾತ್ಮಕ ಸಾಮರ್ಥ್ಯ ಮತ್ತು ಮಾಹಿತಿ ವಿಶ್ಲೇಷಣೆ, ಇನ್ನೊಂದರಲ್ಲಿ ಮೌಖಿಕ ಸಾಮರ್ಥ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯದ ಪರೀಕ್ಷೆ ನಡೆಯುತ್ತದೆ.

ಎಂಬಿಎ ಕಲಿಕೆಗೆ ಇದು ಪ್ರವೇಶ ಪರೀಕ್ಷೆ ಆಗಿರುವುದರಿಂದ ಗುಣಾತ್ಮಕ ಸಾಮರ್ಥ್ಯ, ವಿಶ್ಲೇಷಣೆ ಮತ್ತು ತಾರ್ಕಿಕ ಮನೋಭಾವ, ಮಾಹಿತಿ ವಿಶ್ಲೇಷಣೆ ಮತ್ತು ಮೌಖಿಕ ಸಂವಹನ ಕ್ಷೇತ್ರದಲ್ಲಿ ಅಭ್ಯರ್ಥಿ ದಕ್ಷನಾಗಿರಬೇಕಾಗುತ್ತದೆ. ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಕ್ಯಾಟ್ ಪರೀಕ್ಷೆ ಸಹಕಾರಿಯಾಗಲಿದೆ.

For Quick Alerts
ALLOW NOTIFICATIONS  
For Daily Alerts

English summary
CAT 2017 will be conducted by IIM Lucknow with TCS as the testing agency. Through CAT almost 20,000 students will be admitted to the various programs offered at the 20 IIMs.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X