ಫೇರ್ ಅಂಡ್ ಲವ್ಲಿ ಸ್ಕಾಲರ್ಷಿಪ್ 2017

ಫೇರ್ ಅಂಡ್ ಲವ್ಲಿ ಪ್ರತಿಷ್ಠಾನದ ವತಿಯಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ಮಹಿಳಾ ಅಭ್ಯರ್ಥಿಗಳಿಗೆ 2017ನೇ ಸಾಲಿನ ಸ್ಕಾಲರ್ಷಿಪ್.

ಫೇರ್ ಅಂಡ್ ಲವ್ಲಿ ಪ್ರತಿಷ್ಠಾನದ ವತಿಯಿಂದ 15 ರಿಂದ 30 ವರ್ಷ ವಯೋಮಿತಿಯ ಪದವಿ ಅಥವಾ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ವಿದ್ಯಾರ್ಥಿನಿಯರಿಗೆ ಸ್ಕಾಲರ್ಷಿಪ್

ಫೇರ್ ಅಂಡ್ ಲವ್ಲಿ ಸ್ಕಾಲರ್ಷಿಪ್ ಯೋಜನೆ

ಮಹಿಳೆಯರ ಶಿಕ್ಷಣಕ್ಕೆ ಉತ್ತೇಜನ ನೀಡುವ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಫೇರ್ ಅಂಡ್ ಲವ್ಲಿ ಪ್ರತಿಷ್ಠಾನ ಸಂಸ್ಥೆಯು 2003ನೇ ಇಸವಿಯಿಂದ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ಷಿಪ್ಸ್, ಕೆರಿಯರ್ ಗೈಡೆನ್ಸ್, ಮತ್ತು ಆನ್ಲೈನ್ ಕೋರ್ಸುಗಳ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.ಈ ಯೋಜನೆಯಿಂದ ಪ್ರತಿ ವರ್ಷ ಸಾವಿರಾರು ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ ಹಲವಾರು ಮಂದಿ ಮಹಿಳೆಯರು ತಮ್ಮ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ, ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ರಾಷ್ಟ್ರಗಳಿಗೂ ಈ ಯೋಜನೆಯನ್ನು ವಿಸ್ತಾರಗೊಳಿಸಲಾಗಿದೆ.

ಫೇರ್ ಅಂಡ್ ಲವ್ಲಿ ಸ್ಕಾಲರ್ಷಿಪ್ ಯಾರಿಗಾಗಿ ?

ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಶೇ.60 ರಷ್ಟು (ವಿಜ್ಞಾನ, ಕಲೆ, ವಾಣಿಜ್ಯ ಅಥವಾ ಸಮಾನ ವಿದ್ಯಾರ್ಹತೆ) ಪಡೆದಿರುವ ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ಆದಾಯ 4 ಲಕ್ಷ ರೂ. ಗಳಿಗಿಂತ ಮೀರಿರಬಾರದು.

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು

1. ಪಾಸ್ಪೋರ್ಟ್ ಅಳತೆಯ ಭಾವಚಿತ್ರ
2 ಐ.ಡಿ.ಪ್ರೂಫ್ (ಅಧಾರ್,ಓ.ಆರ್ ಐ ಡಿ ಪಾನ್ಕಾರ್ಡ್)
3. ಎಸ್.ಎಸ್.ಎಲ್.ಸಿ ಅಂಕಪಟ್ಟಿ ಪ್ರತಿ
4. ವಯೋಮಿತಿಯನ್ನು ನಮೂದಿಸುವ ಪ್ರಮಾಣ ಪತ್ರ ( ಜನನ ಪ್ರಮಾಣ ಪತ್ರ ಪ್ರತಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿ)
5. ದ್ವಿತೀಯ ಪಿಯುಸಿ ಅಂಕಪಟ್ಟಿ
6. ಪದವಿ ಅಂಕಪಟ್ಟಿ
7. ಕಾಲೇಜಿಗೆ ದಾಖಲಾತಿ ಪಡೆದ ರಶೀದಿ
8. ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಗಳನ್ನು ಫೇರ್ ಅಂಡ್ ಲವ್ಲಿ ವೆಬ್ಸೈಟ್ ನಲ್ಲಿ ಆನ್ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ. ವೆಬ್ಸೈಟ್ನಲ್ಲಿ ಕೇಳಿರುವ ಎಲ್ಲಾ ದಾಖಲೆಗಳೊಂದಿಗೆ ಆನ್ಲೈನ್ ಅರ್ಜಿಯನ್ನು ಸಂಪೂರ್ಣವಾಗಿ ತಪ್ಪಿಲ್ಲದಂತೆ ತುಂಬಬೇಕು. ಅರ್ಜಿಯನ್ನು ತುಂಬಿದ ನಂತರ ಅದರ ಪ್ರತಿಯನ್ನು ಸೇವ್ ಮಾಡಿ ಇಟ್ಟುಕೊಳ್ಳಿ ಮುಂದಿನ ಆನ್ಲೈನ್ ವ್ಯವಹಾರಕ್ಕೆ ಸಹಾಯಕಾರಿಯಾಗುತ್ತದೆ. ನಿಮಗೆ ಆನ್ಲೈನ್ ಮೂಲಕವೇ ಮುಂದಿನ ಹಂತದ ಬಗ್ಗೆ ಸಂದೇಶವೂ ಬರುವುದು.

ಸ್ಕಾಲರ್ಷಿಪ್ ನವೀಕರಣ

ಸ್ಕಾಲರ್ಷಿಪ್ ಪಡೆದ ವಿದ್ಯಾರ್ಥಿಗಳು ಪ್ರತಿ ವರ್ಷದಿಂದ ವರ್ಷಕ್ಕೆ ಅದನ್ನು ನವೀಕೃತಗೊಳಿಸಬಹುದಾಗಿದೆ. ಹಿಂದಿನ ವರ್ಷದ ಅಂಕಪಟ್ಟಿಯನ್ನು ಸಲ್ಲಿಸುವ ಮೂಲಕ ನವೀಕೃತ ಮಾಡಿಕೊಳ್ಳಬಹುದು. ಈ ಮೂಲಕ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದ ಅವಧಿ ಮುಗಿಯುವವರೆಗು ವೇತನ ಪಡೆಯಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-02-2017
ಹೆಚ್ಚಿನ ಮಾಹಿತಿಗಾಗಿ www.fairandlovelyfoundation .in /scholarship

For Quick Alerts
ALLOW NOTIFICATIONS  
For Daily Alerts

English summary
Fair and Lovely Foundation helps women create pathways to self-reliance through scholarships.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X