ಭಾರತೀಯ ರೈಲ್ವೆ ಇಲಾಖೆಯಲ್ಲಿ ಭಾರಿ ಉದ್ಯೋಗ ಸೃಷ್ಟಿ

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ರೈಲ್ವೆ ಚಾಲಕರು, ಗಾರ್ಡ್‌ಗಳು, ಕಿರಿಯ ಲೆಕ್ಕಪತ್ರ ಸಹಾಯಕರು, ಸಹಾಯಕ ನಿಲ್ದಾಣಾಧಿಕಾರಿಗಳು, ಕಾದಿರಿಸುವಿಕೆ ಮತ್ತು ವಿಚಾರಣೆ ಸಹಾಯಕರು ಮುಂತಾದ ಹುದ್ದೆಗಳಿಗೆ ಈ ವರ್ಷವೇ ನೇಮಕಾತಿ ನಡೆಯಲಿದೆ.

ಭಾರತೀಯ ರೈಲ್ವೆ ಇಲಾಖೆ ಭಾರಿ ನೇಮಕಾತಿಗೆ ಮುಂದಾಗಿದ್ದು, ಈ ವರ್ಷ ಸುಮಾರು 25 ಸಾವಿರ ನೌಕರರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ.

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ರೈಲ್ವೆ ಚಾಲಕರು, ಗಾರ್ಡ್‌ಗಳು, ಕಿರಿಯ ಲೆಕ್ಕಪತ್ರ ಸಹಾಯಕರು, ಸಹಾಯಕ ನಿಲ್ದಾಣಾಧಿಕಾರಿಗಳು, ಕಾದಿರಿಸುವಿಕೆ ಮತ್ತು ವಿಚಾರಣೆ ಸಹಾಯಕರು ಮುಂತಾದ ಹುದ್ದೆಗಳಿಗೆ ಈ ವರ್ಷವೇ ನೇಮಕಾತಿ ನಡೆಯಲಿದೆ.

ರೈಲ್ವೆಯಲ್ಲಿ 25 ಸಾವಿರ ಸಿಬ್ಬಂದಿ ನೇಮಕಾತಿ

ರೈಲ್ವೆ ಉದ್ಯೋಗದ ಅಂಕಿ ಅಂಶ

  • ರೈಲ್ವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು: 13 ಲಕ್ಷ
  • ಖಾಲಿ ಇರುವ ಹುದ್ದೆಗಳ ಸಂಖ್ಯೆ: 2.25 ಲಕ್ಷ
  • ನೇಮಕಾತಿ ಪ್ರಕ್ರಿಯೆ ಅಂತಿಮಗೊಂಡ ಹುದ್ದೆಗಳ ಸಂಖ್ಯೆ: 18,200
  • ನೇಮಕಾತಿ ಪ್ರಕ್ರಿಯೆ ಆರಂಭವಾಗಬೇಕಿರುವ ಹುದ್ದೆಗಳ ಸಂಖ್ಯೆ: 7,000
  • ಮುಂದಿನ ವರ್ಷ ನೇಮಕ ಮಾಡಿಕೊಳ್ಳಲು ಉದ್ದೇಶಿಸಿರುವ ಸಿಬ್ಬಂದಿ ಸಂಖ್ಯೆ: 13,000

ಮುಂದಿನ ಆರ್ಥಿಕ ವರ್ಷದಲ್ಲಿಯೂ ಹೊಸ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಬಹುಪಾಲು ತಾಂತ್ರಿಕ ಹುದ್ದೆಗಳು ಇರಲಿವೆ ಎಂದು ರೈಲ್ವೇ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಧುನೀಕರಣ ಮತ್ತು ಮಾಹಿತಿ ತಂತ್ರಜ್ಞಾನದ ಬಳಕೆಯಿಂದಾಗಿ ರೈಲ್ವೆಯ ಸಿಬ್ಬಂದಿ ವ್ಯವಸ್ಥೆಯನ್ನು ಮರುರೂಪಿಸಲು ರೈಲ್ವೆ ಪ್ರಯತ್ನಿಸುತ್ತಿದೆ. ಹಲವು ಹುದ್ದೆಗಳನ್ನು ರದ್ದುಪಡಿಸಲಾಗಿದೆ. ನಿರ್ಣಾಯಕವಾಗಿರುವ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರೈಲ್ವೆಯಲ್ಲಿ ಖಾಲಿ ಹುದ್ದೆ ಭರ್ತಿ ಮಾಡುವುದು ನಿರಂತರ ನಡೆಯುವ ಪ್ರಕ್ರಿಯೆಯಾಗಿದೆ. ಸುರಕ್ಷತೆಗೆ ಸಂಬಂಧಿಸಿದ ಹುದ್ದೆಗಳನ್ನು ಭರ್ತಿ ಮಾಡಲು ಮುಂದಿನ ವರ್ಷ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಏಕೆಂದರೆ 2016-17ರಲ್ಲಿ ರೈಲು ಹಳಿ ತಪ್ಪಿದ 78 ಪ್ರಕರಣಗಳು ನಡೆದಿದ್ದು, ಅದರಲ್ಲಿ 196 ಪ್ರಯಾಣಿಕರು ಮೃತಪಟ್ಟಿದ್ದಾರೆ. 327 ಮಂದಿ ಗಾಯಗೊಂಡಿದ್ದಾರೆ.ಸಿಬ್ಬಂದಿ ಕೊರತೆಯೇ ಈ ಅಪಘಾತಗಳಿಗೆ ಒಂದು ಕಾರಣ ಎಂಬ ಆರೋಪ ಇದೆ.

For Quick Alerts
ALLOW NOTIFICATIONS  
For Daily Alerts

English summary
The Indian Railways Department has taken steps to fill vacant posts. So, about 25,000 new employees will join the Railways.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X