1982 ರಿಂದ ಆಚರಣೆಯಲ್ಲಿದೆ ಇಂದಿನ ವಿಶ್ವ ಸಂಗೀತ ದಿನ

ಜೂನ್ 21, 1982ರಂದು ಮೊದಲಬಾರಿಗೆ ಅಮೆರಿಕನ್‌ ಸಂಗೀತಗಾರ ಜೋಯೆಲ್‌ ಕೊಹೆನ್‌ ಇಡೀ ರಾತ್ರಿ ಸಂಗೀತ ಕಾರ್ಯಕ್ರಮ ಏರ್ಪಡಿಸಿ, ವಿಶ್ವ ಸಂಗೀತ ದಿನಕ್ಕೆ ನಾಂದಿ ಹಾಡಿದರು.

By Kavya

ಇಂದು ವಿಶ್ವ ಸಂಗೀತ ದಿನ, ವಿಶ್ವ ಯೋಗದಿನದಂತೆ ಜೂನ್ 21ರಂದೇ ಸಂಗೀತ ದಿನವನ್ನು ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ. ಸಂಗೀತವನ್ನು ದೇವರ ಭಾಷೆ ಎಂದು ಕರೆಯಲಾಗುತ್ತದೆ. ಎಲ್ಲಾ ವಯೋಮಾನದವರನ್ನು ಬಂಧಿಸಿಡುವ ಶಕ್ತಿ ಸಂಗೀತಕ್ಕೆ ಇದೆ.

ಸಂಗೀತ ದಿನಕ್ಕೆ ತನ್ನದೇ ಆದ ವಿಶೇಷತೆ ಇದ್ದು, ಮೂರು ದಶಕಗಳಿಂದ ಆಚರಣೆಯಲ್ಲಿದೆ. ವಿಶ್ವ ಸಂಗೀತ ದಿನ 'ಫೆಟೆ ಡಿ ಲಾ ಮ್ಯೂಸಿಕೆ' ಆರಂಭಗೊಂಡದ್ದು 1982ರ ವೇಳೆ ಫ್ರಾನ್ಸ್ ದೇಶದಲ್ಲಿ. ಅಲ್ಲಿನ ಸಂಸ್ಕೃತಿ ಸಚಿವರಾಗಿದ್ದ ಜ್ಯಾಕ್‌ ಲಾಂಗ್‌ ಅವರಿಗೆ ಇದು ಹೊಳೆದಿದ್ದು, ಜೂನ್ 21ನ್ನು ಸಂಗೀತ ದಿನವನ್ನಾಗಿ ಆಚರಿಸಲು ನಿರ್ಧರಿಸಿದರು. ಅದರಂತೆ ಮೊದಲಬಾರಿಗೆ ಅಮೆರಿಕನ್‌ ಸಂಗೀತಗಾರ ಜೋಯೆಲ್‌ ಕೊಹೆನ್‌ ಇಡೀ ರಾತ್ರಿ ಸಂಗೀತ ಕಾರ್ಯಕ್ರಮ ಏರ್ಪಡಿಸಿ, ವಿಶ್ವ ಸಂಗೀತ ದಿನಕ್ಕೆ ನಾಂದಿ ಹಾಡಿದರು.

ಆರಂಭದಲ್ಲಿ ಸಂಗೀತದ ದಿನದ ಆಚರಣೆ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಹಬ್ಬಿತ್ತು. ವಿಶ್ವದ 32 ದೇಶಗಳಲ್ಲಿ ಮಾತ್ರ ಪ್ರತಿ ವರ್ಷದ ಜೂನ್ 21 ರಂದು ಸಂಗೀತ ದಿನವನ್ನು ಆಚರಿಸಲಾಗುತಿತ್ತು. ಇದೀಗ, ವಿಶ್ವದ ಬಹುತೇಕ ದೇಶಗಳು, ವಿಶ್ವ ಸಂಗೀತದ ಹೆಸರಿನಲ್ಲಿ ದೇಶವಾರು ಶೈಲಿಯ ಸಂಗೀತದ ಮೂಲಕ ಸಂಗೀತದಿನವನ್ನು ಆಚರಿಸುತ್ತಿವೆ.

ಇಂದು ವಿಶ್ವ ಸಂಗೀತ ದಿನ

ಜೂನ್ 21ರಂದೇ ಏಕೆ ಸಂಗೀತ ದಿನ?

1976ರಲ್ಲಿ ಅಮೆರಿಕದ ಸಂಗೀತಗಾರ ನ್ಯಾಷನಲ್ ಫ್ರೆಂಚ್ ರೇಡಿಯೋದ ಉದ್ಯೋಗಿ ಜೊಯೆಲ್ ಕೊಹೆನ್ ಈ ದಿನ ಅಹೋರಾತ್ರಿ ಸಂಗೀತ ಉತ್ಸವ ಆಚರಿಸುವ ಪ್ರಸ್ತಾಪ ಮುಂದಿಟ್ಟಿದ್ದ. 1981ರಲ್ಲಿ ಫ್ರಾನ್ಸ್‌ನ ಸಂಗೀತ ಮತ್ತು ನೃತ್ಯ ನಿರ್ದೇಶಕ ಮಾರಿಸ್ ಫ್ಲುರೆಟ್ ಅವರು ಕೊಹೆನ್‌ನ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರು. 1982ರಲ್ಲಿ ಮೊದಲ ಬಾರಿ ಫ್ರಾನ್ಸ್‌ನಲ್ಲಿ ವಿಶ್ವ ಸಂಗೀತ ದಿನ ಆಚರಿಸಲಾಯಿತು.

ಈಗ ಭಾರತ ಸೇರಿದಂತೆ ಆಸ್ಟ್ರೇಲಿಯಾ, ಬೆಲ್ಜಿಯಂ, ಬ್ರಿಟನ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್, ಚೀನಾ, ಲೆಬನಾನ್, ಮಲೇಷ್ಯಾ, ಪಾಕಿಸ್ತಾನ ಮತ್ತಿತರ ದೇಶಗಳಲ್ಲೂ ವಿಶ್ವ ಸಂಗೀತ ದಿನ ಆಚರಿಸಲಾಗುತ್ತದೆ. 2007ರಲ್ಲಿ ಮೊದಲ ಬಾರಿಗೆ ನ್ಯೂಯಾರ್ಕ್‌ನಲ್ಲಿ ಈ ದಿನ ಆಚರಿಸಲಾಯಿತು.

ಪಾಶ್ಚಿಮಾತ್ಯ ದೇಶಗಳಲ್ಲಿ ಇದೊಂದು ದಿನ ಉದಯೋನ್ಮುಖ ಸಂಗೀತಗಾರರು ಮತ್ತು ಹಿರಿಯ ಕಲಾವಿದರು ಬೀದಿಯಲ್ಲೂ ಕಾರ್ಯಕ್ರಮ ನೀಡುತ್ತಾರೆ. ಹಲವು ಸಂಗೀತ ಕಛೇರಿಗಳನ್ನು ಉಚಿತವಾಗಿ ಏರ್ಪಡಿಸಲಾಗುತ್ತದೆ. ಸಂಗೀತ ಸ್ಪರ್ಧೆ, ರಸಪ್ರಶ್ನೆ, ಸಂಗೀತ ವಾದ್ಯಗಳ ಪ್ರದರ್ಶನ, ಮಾರಾಟ ನಡೆಯುತ್ತದೆ.

ಹೆಸರೇ ಹೇಳುವಂತೆ ವಿಶ್ವ ಸಂಗೀತದಲ್ಲಿ ಪ್ರಪಂಚದ ಎಲ್ಲಾ ಸಂಗೀತ ವಿಧಗಳನ್ನು ಹೇಳಲಾಗುತ್ತಿದೆ. ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯೇತರ ಎಂಬ ಶೈಲಿಗ‌ಳು ಇದರಲ್ಲಿವೆ. 'ಜಪಾನಿನ ಕೋಟೋ', 'ಭಾರತದಲ್ಲಿ ರಾಗ, ಭಾವ ಪ್ರಧಾನವಾಗಿರುವ ಹಿಂದೂಸ್ತಾನಿ, ಕರ್ನಾಟಕಿ ಶೈಲಿಯ ಸಂಗೀತ', 'ದಕ್ಷಿಣ ಆಫ್ರಿಕಾದ ಟೌನ್‌ಶಿಪ್‌' ಶೈಲಿಗಳು ಶಾಸ್ತ್ರೀಯ ಸಂಗೀತ ಶೈಲಿಗೆ ಸೇರಿದವುಗಳು.

ಭಾರತವಂತೂ ಸಂಗೀತದ ತವರೂರಿನಂತೆ. ಹಲವಾರು ಶೈಲಿಗಳನ್ನು ಹೊಂದಿದೆ. ಹಿಂದೂಸ್ತಾನಿ, ಕರ್ನಾಟಕಿ ಶಾಸ್ತ್ರೀಯ ಶೈಲಿಯೇ ಅಲ್ಲದೆ, ಭಾಂಗ್ರಾ, ಭಜನೆ, ಭಕ್ತಿಗೀತೆ, ಗಝಲ್‌, ಕವ್ವಾಲಿ, ಇಂಡಿ-ಪಾಪ್‌, ಜನಪದ, ಸಿನೆಮಾ ಹಾಡುಗಳು, ಸುಗಮ ಸಂಗೀತ, ರಿಮಿಕ್ಸ್‌, ಫ್ಯೂಶನ್‌ ಮುಂತಾದ ವೈವಿಧ್ಯಮಯ ಶೈಲಿಗಳೂ ಇವೆ. ಹಾಗೆಯೇ ಪಾಶ್ಚಿಮಾತ್ಯ ಪ್ರಾಕಾರಗಳಾದ ಮೆಟಲ್‌, ರಾಕ್‌, ಹಿಪ್‌ ಹಾಪ್‌, ಆಲ್ಟರ್‌ ನೇಟಿವ್‌, ಏಕ್ಸ್ಪೆರಿಮೆಂಟಲ್, ಕಂಟ್ರಿ, ಡಿಸ್ಕೋ, ಫೂಂತಕ್‌, ಕ್ಲಾಸಿಕಲ್, ಪ್ರೋಗ್ರೆಸ್ಸಿವ್‌, ಟ್ರಾನ್ಸ್‌, ಟೆಕ್ನೋ, ರೆಗ್ಗೆ ಮುಂತಾದ ಸಂಗೀತಗಳೂ ಇವೆ.

ಸಂಗೀತವನ್ನು ಗಾಂಧರ್ವವೇದ ಎನ್ನುತ್ತಾರೆ. ಗಂಧರ್ವರ ವಿದ್ಯೆಯಾದುದರಿಂದ ಇದಕ್ಕೆ ಈ ಹೆಸರು. 'ಗಾಂಧರ್ವ ವಿದ್ಯೆ' ಎಂದರೆ 'ಗಾನವಿದ್ಯೆ' ಅಥವಾ ಸಂಗೀತ ಎಂದರ್ಥ.

ಮಾನವನ ಸ್ವಭಾವಗಳ ಮೇಲೆ ಸಂಗೀತವು ಪ್ರಭಾವ ಬೀರುತ್ತದೆಂದು ದೃಢಪಟ್ಟಿದೆ. ಅನೇಕ ರೋಗಗಳು ಸಂಗೀತದಿಂದ ಗುಣವಾಗುತ್ತದೆ ಎಂಬುದು ಅನೇಕರ ಅನುಭವ. ಸಂಗೀತಾಭ್ಯಾಸವು ಒಬ್ಬ ವ್ಯಕ್ತಿಯನ್ನು ಒಳ್ಳೆಯ ಪೌರನನ್ನಾಗಿ ಬೆಳಸಲು ಸಹಾಯ ಮಾಡುತ್ತದೆ. ಸಂಗೀತದ ಮಾಧುರ್ಯವು ಮಾನವನಲ್ಲಿರುವ ಸಂಕುಚಿತ ಸ್ವಭಾವವನ್ನು ಹೋಗಲಾಡಿಸಿ ಹೃದಯ ವೈಶಾಲ್ಯವನ್ನುಂಟು ಮಾಡುತ್ತದೆ.

ಎಲ್ಲ ಸಂಗೀತ ಶ್ರೇಷ್ಠರಿಗೂ, ಕಲಾವಿದರಿಗೂ, ಸಂಗೀತ ಪ್ರೇಮಿಗಳಿಗೂ ವಿಶ್ವ ಸಂಗೀತ ದಿನ ಗೌರವ ಸೂಚಕವೆಂದು ಭಾವಿಸಲಾಗಿದೆ. ಈ ವಿಶೇಷ ದಿನದಂದು ಎಷ್ಟೇ ಜೋರಾಗಿ ಹಾಡಿದರೂ, ವಾದ್ಯ ನುಡಿಸಿದರೂ ಶಾಂತಿ ಭಂಗವಾಯಿತು ಎಂದು ನೆರೆಮನೆಯವರು ಪೊಲೀಸರಿಗೆ ದೂರು ನೀಡುವಂತಿಲ್ಲ.

For Quick Alerts
ALLOW NOTIFICATIONS  
For Daily Alerts

English summary
The first World Music Day or Fete de la Musique took place on June 21, 1982 - the year's summer solstice in the North hemisphere. Thousands of citizens came out to part in the initiative all across France, till late at night.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X