ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಉಡುಪಿ ನಂಬರ್ ಒನ್

ಎಸ್ ಎಸ್ ಎಲ್ ಸಿಯಲ್ಲಿ ಈ ಭಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ 2ನೇ ಸ್ಥಾನ, ಚಿಕ್ಕೂಡಿ 3ನೇ ಸ್ಥಾನ, ಶಿರಸಿ ನಾಲ್ಕನೇ ಸ್ಥಾನ ಉತ್ತರ ಕನ್ನಡ 5ನೇ ಸ್ಥಾನ ಪಡೆದಿದೆ.

2016-17 ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶವು ಪ್ರಕಟಗೊಂಡಿದೆ. ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.

ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಭಾರಿ ಕುಸಿತ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ಶೇ67.87ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿಗಿಂತ ಈ ಬಾರಿ 8ರಷ್ಟೂ ಕುಸಿತ ಕಂಡಿದೆ.

ಎಸ್ ಎಸ್ ಎಲ್ ಸಿಯಲ್ಲಿ ಈ ಭಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ 2ನೇ ಸ್ಥಾನ, ಚಿಕ್ಕೂಡಿ 3ನೇ ಸ್ಥಾನ, ಶಿರಸಿ ನಾಲ್ಕನೇ ಸ್ಥಾನ ಉತ್ತರ ಕನ್ನಡ 5ನೇ ಸ್ಥಾನ ಪಡೆದಿದೆ. ಇನ್ನು ಬೀದರ್ ಕೊನೆ ಸ್ಥಾನ ಪಡೆದಿದೆ.

ಎಸ್ ಎಸ್ ಎಲ್ ಸಿ ಉಡುಪಿ ನಂಬರ್ ಒನ್

ಎಸ್ ಎಸ್ ಎಲ್ ಸಿ ಟಾಪರ್ಸ್

ಇಂದು ಹೊರಬಿದ್ದ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಮೂವರು ವಿದ್ಯಾರ್ಥಿಗಳು 100% ಅಂಕ ಗಳಿಸಿ, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ದಾಖಲೆ ಬರೆದಿದ್ದಾರೆ. ಒಟ್ಟು 625(625) ಅಂಕ ಗಳಿಸುವ ಮೂಲಕ ಮೂವರೂ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ.

  • ಬೆಂಗಳೂರಿನ, ಮಲ್ಲೇಶ್ವರಂ ನ ಎಂ ಇ ಎಸ್ ಕಿಶೊರ್ ಕೇಂದ್ರ ಪ್ರೌಢ ಶಾಲೆಯ ಸುಮಂತ್ ಹೆಗಡೆ 625 (625)
  • ಮಂಗಳೂರಿನ ಪುತ್ತೂರಿನ ಸೇಂಟ್ ಜೋಶಿಮ್ಸ್ ಹೈಸ್ಕೂಲಿನ ಪೂರ್ಣಾನಂದ ಎಚ್
  • ಬಾಗಲಕೋಟೆ ಜಿಲ್ಲೆ ಜಮಖಂಡಿಯ ಎಸ್ ಆರ್ ಎ ಕಾಂಪೊಸಿಟ್ ಕಾಲೇಜಿನ ಪಲ್ಲವಿ ಶಿರಹಟ್ಟಿ ಇವರೂ 625 (625)

ಒಟ್ಟು ಆರು ಜನ 624 (625) ಅಂಕ ಗಳಿಸಿದ್ದು, 13 ಜನ 623 (625) ಅಂಕ ಗಳಿಸಿದ್ದಾರೆ.

ವಚನ್ ರಾಘವೇಂದ್ರ , ಜಯನಿ ಆರ್ ನಾಥ್, ಹೇಮಂತ್ ಶಾಸ್ತ್ರಿ, ನಂದಿನಿ ಎಂ. ನಾಯ್ಕ್, ಈಶ್ವರ್ ಸೀತಾರಾಮ್ ಜೋಶಿ, ಸೋನಾಲಿ ಈ ಆರು ಜನ 624 (625) ಅಂಕ ಗಳಿಸಿ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ

For Quick Alerts
ALLOW NOTIFICATIONS  
For Daily Alerts

English summary
The much- awaited Karnataka SSLC result is finally declared by Karnataka Secondary Education Examination Board (KSEEB). Candidates can check their result on the official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X