ಸಿಎಸಿಪಿಟಿ ಪರೀಕ್ಷೆ: ಮಡಿಕೇರಿಯ ತವಿಶಿ ರಾಜ್ಯಕ್ಕೆ ಪ್ರಥಮ, ದೇಶಕ್ಕೆ ದ್ವಿತಿಯ

ಕಳೆದ ಜೂನ್ ತಿಂಗಳಿನಲ್ಲಿ ಸಿಎಸಿಪಿಟಿ ಪರೀಕ್ಷೆ ನಡೆಸಲಾಗಿತ್ತು. ಆಳ್ವಾಸ್ ಕಾಲೇಜಿನ ತವಿಶಿ ದೇಚಮ್ಮ 191 ಅಂಕದೊಂದಿಗೆ ದೇಶಕ್ಕೆ ದ್ವಿತೀಯ ಹಾಗೂ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.

ಚಾರ್ಟರ್ಡ್‌ ಅಕೌಂಟೆನ್ಸಿ ಕಾಮನ್‌ ಪ್ರೊಫಿಶಿಯನ್ಸಿ ಟೆಸ್ಟ್‌ (ಸಿಎಸಿಪಿಟಿ) ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ರಾಜ್ಯದ ವಿದ್ಯಾರ್ಥಿನಿ ದೇಶಕ್ಕೆ ದ್ವೀತೀಯ ಸ್ಥಾನ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ.

ಕಳೆದ ಜೂನ್ ತಿಂಗಳಿನಲ್ಲಿ ಸಿಎಸಿಪಿಟಿ ಪರೀಕ್ಷೆ ನಡೆಸಲಾಗಿತ್ತು. ಆಳ್ವಾಸ್ ಕಾಲೇಜಿನ ತವಿಶಿ ದೇಚಮ್ಮ 200 ಕ್ಕೆ 191 ಅಂಕ ಗಳಿಸುವುದರ ಮೂಲಕ ದೇಶಕ್ಕೆ ದ್ವಿತೀಯ ಹಾಗೂ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.

ತವಿಶಿ ದೇಚಮ್ಮ ಪರಿಚಯ

ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಸಿಎ ಅಭ್ಯಾಸ ಮಾಡುತ್ತಿರುವ ತವಿಶಿ ದೇಚಮ್ಮ ಆಳ್ವಾಸ್‌ನ ಉಚಿತ ಶಿಕ್ಷಣ ಯೋಜನೆಯಡಿ ದ್ವಿತೀಯ ಪಿಯುಸಿ (ವಾಣಿಜ್ಯ) ವ್ಯಾಸಂಗ ಪೂರೈಸಿದ್ದರು. ಈಗ ಸಿಎ ಜೊತೆಗೆ ಸಂಜೆ ಬಿ.ಕಾಂ ಪದವಿ ಓದುತ್ತಿದ್ದಾರೆ.

ಸಿಎಸಿಪಿಟಿ ಪರೀಕ್ಷೆಯಲ್ಲಿ ತವಿಶಿ ಟಾಪರ್

ಮಡಿಕೇರಿಯವರಾದ ತವಿಶಿ ಅವರ ತಂದೆ ಪ್ರೀತಂ ವಕೀಲರು, ತಾಯಿ ಹೇಮಾ ಸ್ಥಳೀಯ ಟಿ.ವಿ ಚಾನೆಲ್‌ನಲ್ಲಿ ಉದ್ಯೋಗಿ.

'ಆಳ್ವಾಸ್‌ ಕಾಲೇಜಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಾತಾವರಣ ನನ್ನ ಫಲಿತಾಂಶಕ್ಕೆ ಪ್ರೇರಣೆಯಾಯಿತು. ಮೋಹನ ಆಳ್ವ ಅವರ ಕೊಡುಗೆ ದೊಡ್ಡದು' ಎಂದು ತವಿಶಿ ತಿಳಿಸಿದರು.

ಫಲಿತಾಂಶದ ವಿವರ

ಸಿಎಸಿಪಿಟಿ ಪರೀಕ್ಷೆ ಫಲಿತಾಂಶವು ಜುಲೈ 16 ರಂದು ಪ್ರಕಟಗೊಂಡಿದ್ದು ಒಟ್ಟು 36028 ಮಂದಿ ತೇರ್ಗಡೆಯಾಗಿದ್ದಾರೆ. 56 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದ್ದು, 58 ಮಂದಿ ಅನುತ್ತೀರ್ಣರಾಗಿದ್ದಾರೆ.

ಮೇಕಾ ನರೇಶ್ ಕುಮಾರ್ ದೇಶಕ್ಕೆ ಪ್ರಥಮ

ಇಂದೋರ್ ನ ಮೇಕಾ ನರೇಶ್ ಕುಮಾರ್ 192 ಅಂಕ ಪಧಿಡೆಧಿದು ದೇಶದ ಟಾಪರ್ ಆಗಿದ್ದಾರೆ. ಬಡ ಕುಟುಂಬದಿಂದ ಬಂದಿರುವ ಮೇಕಾ ನರೇಶ್ ತಂದೆ ದಿನಗೂಲಿ ನೌಕರರಾಗಿದ್ದು, ತಾಯಿ ಬೀಡಿ-ಸಿಗರೇಟ್ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಪ್ರಥಮ ಸ್ಥಾನ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಮೇಕಾ ನರೇಶ್ ಕುಮಾರ್ ತಂದೆ ತಾಯಿಯನ್ನು ಸಂತೋಷದಿಂದ ನೋಡಿಕೊಳ್ಳಬೇಕು ಎಂಬ ಆಸೆ ವ್ಯಕ್ತ ಪಡಿಸಿದ್ದಾರೆ. ದೇಶಕ್ಕೆ ಪ್ರಥಮ ಸ್ಥಾನ ಗಳಸಿರುವ ಮೇಕಾ ಐಪಿಸಿಸಿ ಪರೀಕ್ಷೆಯನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಆಳ್ವಾಸ್ ಸಂಸ್ಥೆಯ ಸಾಧನೆ

ಆಳ್ವಾಸ್ ಪದವಿಪೂರ್ವ ಕಾಲೇಜಿನಿಂದ 130 ಮಂದಿ ಈ ಪರೀಕ್ಷೆಗೆ ಹಾಜರಾಗಿದ್ದು, 105 ಮಂದಿ ಉತ್ತೀರ್ಣರಾಗುವ ಮೂಲಕ ಶೇ.80.76 ಫಲಿತಾಂಶ ಲಭಿಸಿದೆ. 61 ಮಂದಿ ಡಿಸ್ಟಿಂಕ್ಷ ನ್ ನಲ್ಲಿ ಉತ್ತೀರ್ಣರಾಗುವ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ. ಈ ಪೈಕಿ 40 ಮಂದಿ 170ಕ್ಕೂ ಅಧಿಕ ಅಂಕ ಗಳಿಸಿದ್ದಾರೆ.

ಆಳ್ವಾಸ್ ಪದವಿ ಕಾಲೇಜಿನಿಂದ 45 ವಿಧಿದ್ಯಾರ್ಥಿಧಿಗಧಿಳು ಪರೀಕ್ಷೆಗೆ ಹಾಜರಾಗಿದ್ದು 24 ಮಂದಿ ತೇರ್ಗಡೆ ಹೊಂದಿದ್ದಾರೆ. ಈ ಪರೀಕ್ಷೆಯಲ್ಲಿ ದೇಶದಲ್ಲಿ ಶೇ.40.52 ಮಾತ್ರ ಫಲಿತಾಂಶ ಲಭಿಸಿದ್ದು, ಆಳ್ವಾಸ್ ನ ವಿದ್ಯಾರ್ಥಿಗಳು ಶೇ.80.76 ಫಲಿತಾಂಶ ಗಳಿಸಿರುವುದು ವಿಶಿಷ್ಠ ದಾಖಲೆಯಾಗಿದೆ ಎಂದು ಆಳ್ವಾಸ್ ಶಿಕ್ಷ ಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಂಗಳವಾರ ಫಲಿತಾಂಶದ ಕುರಿತು ವಿವರ ನೀಡಿದ್ದಾರೆ.

ಸ್ವಾತಿ ಹೆಗ್ಡೆ 186 ಅಂಕ(ಶೇ.93), ಶ್ರದ್ಧಾ ಎಂ.ಎಸ್. 185 ಅಂಕ (ಶೇ.92.5) ಹಾಗೂ ಭಾಗ್ಯಶ್ರೀ ಎಸ್. ಹೆಗ್ಡೆ 184 ಅಂಕ(ಶೇ.92), ಸುರೇಶ್ ಟಿ. ಎಸ್. 176(ಶೇ.88), ಅಭಯ್ ಕಾಂತ್ ಡಿ.ಎಲ್. 175(ಶೇ.87.5), ಪ್ರಖ್ಯಾತ್ ಶೆಟ್ಟಿ 174(ಶೇ.87), ಅದಿತಿ ಎಸ್. ಹೆಗ್ಡೆ 174(ಶೇ.87), ನಿಖಿಲ್ ಎ. ಆಶ್ರೀತ್ 172(ಶೇ.86), ಅನಿತಾ ಕೆ. ಹೆಗ್ಡೆ 172(ಶೇ.86), ದೀಕ್ಷಿತ್ ಶೆಟ್ಟಿ 127(ಶೇ.82.55) ಫಲಿತಾಂಶ ಪಡೆದಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Karnataka student Tavishi Dechhamma has secured second rank in the charted accountancy Common Proficiency Test (CACPT) by getting 191 out of 200.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X