ಸಿಇಟಿ ಪ್ರವೇಶ ಪತ್ರ ಪಡೆಯಲು ಇಂದೇ ಕೊನೆ ದಿನ

ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಿಂದ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಮೇ 2 ಮತ್ತು 3 ನೇ ತಾರೀಖು ಸಿಇಟಿ ಪರೀಕ್ಷೆಗಳು ನಡೆಯಲಿದ್ದು ಪ್ರವೇಶ ಪತ್ರಗಳನ್ನು ಇಂದು ರಾತ್ರಿಯೊಳಗೆ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.

ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2017'ರ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಇಂದೇ ಕೊನೆಯ ದಿನವಾಗಿದೆ.

ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಿಂದ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಮೇ 2 ಮತ್ತು 3 ನೇ ತಾರೀಖು ಸಿಇಟಿ ಪರೀಕ್ಷೆಗಳು ನಡೆಯಲಿದ್ದು ಪ್ರವೇಶ ಪತ್ರಗಳನ್ನು ಇಂದು ರಾತ್ರಿಯೊಳಗೆ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಬಾರಿಯ ಸಿಇಟಿ ಪರೀಕ್ಷೆಯನ್ನು 1.85 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಡೌನ್ಲೋಡ್ ಮಾಡಿಕೊಳ್ಳುವ ವಿಧಾನ

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರ 'ಕೆಇಎ' kea.kar.nic.in ವೆಬ್ಸೈಟ್ ಗೆ ಭೇಟಿ ನೀಡಿ
  • ಬಲಭಾಗದಲ್ಲಿ ಕಾಣುವ ಸಿಇಟಿ 2017 ಕ್ಲಿಕ್ ಮಾಡಿ
  • 'CET-2017 Download Hall Ticket' ಕ್ಲಿಕ್ ಮಾಡಿ
  • ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ
  • ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ

ಇದನ್ನು ಗಮನಿಸಿ: ಕೆಸಿಇಟಿ ಪರೀಕ್ಷಾ ವಿಧಾನ, ವೇಳಾಪಟ್ಟಿ ಮತ್ತು ಪಠ್ಯಕ್ರಮ

ಸಿಇಟಿ ಪ್ರವೇಶ ಪತ್ರಕ್ಕೆ ಕೊನೆ ದಿನ

ಪರೀಕ್ಷೆ ನಡೆಯುವ ದಿನಾಂಕಗಳು

ಮೇ 02 , 2017 ಮೇ 03 , 2017 ಮೇ 2ರಂದು ಬೆಳಗ್ಗೆ ಜೀವಶಾಸ್ತ್ರ ನಡೆದರೆ, ಮಧ್ಯಾಹ್ನದ ಬಳಿಕ ಗಣಿತ ಪರೀಕ್ಷೆ ನಡೆಯಲಿದೆ. ಮೇ 3ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದೆ. ಈ ನಾಲ್ಕು ವಿಷಯಗಳಿಗೆ 60 ಅಂಕಗಳನ್ನು ನಿಗದಿಪಡಿಸಲಾಗಿದೆ.

ಕನ್ನಡದಲ್ಲಿ ಪ್ರಶ್ನೆಪತ್ರಿಕೆ

ಇದೇ ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಮುದ್ರಿಸಲಾಗುತ್ತಿದೆ. ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ನೀಡಲು ನೀಟ್ ಒಪ್ಪಿಗೆ ಸೂಚಿರುವ ಹಿನ್ನೆಲೆಯಲ್ಲಿ ಇಂಗ್ಲಿಷ್ ಜತೆ ಕನ್ನಡ ಪ್ರಶ್ನೆ ಪತ್ರಿಕೆಯನ್ನೂ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಿರ್ಧರಿಸಿದೆ. ಆದರೆ ಇಂಗ್ಲಿಷ್ ಪ್ರಶ್ನೆಪತ್ರಿಕೆಯನ್ನೇ ಅಂತಿಮವೆಂದು ಪರಿಗಣಿಸಲು ತೀರ್ಮಾನಿಸಲಾಗಿದೆ.

ವಿಜ್ಞಾನದ ಕೆಲವು ಪದಗಳು ಅನುವಾದಕ್ಕೆ ಕಷ್ಟವಾಗಿರುವುದರಿಂದ ವಿದ್ಯಾರ್ಥಿಗಳು ಆಂಗ್ಲಭಾಷೆಯಲ್ಲಿರುವ ಪ್ರಶ್ನೆಗಳನ್ನೇ ಓದಿಕೊಂಡು ಉತ್ತರಿಸಬೇಕು. ಆಂಗ್ಲಭಾಷೆಯಲ್ಲಿ ಪ್ರಶ್ನೆ ಸರಿಯಿದ್ದು, ಕನ್ನಡ ಅನುವಾದ ತಪ್ಪಿದ್ದರೆ ಆಕ್ಷೇಪಣೆ ಸಲ್ಲಿಸಲು ಸಾಧ್ಯವಿಲ್ಲ. ಮೌಲ್ಯಮಾಪನಕ್ಕೆ ಇಂಗ್ಲಿಷ್ ಪ್ರಶ್ನೆಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಕೆಇಎ ಮೂಲಗಳು ತಿಳಿಸಿವೆ. ಎರಡು ಭಾಷೆಯಲ್ಲಿ ಪ್ರಶ್ನೆಗಳಿದ್ದರೂ ಪ್ರಶ್ನೆಗಳ ಶ್ರೇಣಿ, ಸಂಖ್ಯೆ ಒಂದೇ ಆಗಿರುತ್ತವೆ.

ವಿದ್ಯಾರ್ಥಿಗಳು ಒಎಂಆರ್ ಪತ್ರಿಕೆಯಲ್ಲಿ ಸರಿಯಾದ ಉತ್ತರವನ್ನು ಶೇಡ್ ಮಾಡುವುದನ್ನು ಹೊರತುಪಡಿಸಿದರೆ ಬರವಣಿಗೆಯಲ್ಲಿ ಉತ್ತರಿಸುವಂತಹ ಯಾವುದೇ ಪ್ರಶ್ನೆಗಳು ಇರುವುದಿಲ್ಲ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರ ಅನುಕೂಲಕ್ಕಾಗಿ ಪ್ರಶ್ನೆಗಳನ್ನು ಕನ್ನಡದಲ್ಲಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಕಿ ಅಂಶ

ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. 404 ವೀಕ್ಷಕರು, 808 ವಿಶೇಷ ಜಾಗೃತಿ ದಳದ ಸದಸ್ಯರು, 404 ಪ್ರಶ್ನೆ ಪತ್ರಿಕೆ ಪಾಲಕರು, 11,625 ಕೊಠಡಿ ಮೇಲ್ವಿಚಾರಕರು ಹಾಗೂ 32 ಸಾವಿರ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಕ ಮಾಡಲಾಗಿದೆ. ಕನ್ನಡ ಭಾಷಾ ಪರೀಕ್ಷೆಗೆ ಹೊರನಾಡು ಮತ್ತು ಗಡಿನಾಡಿನ 1,800 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Today is the last day to download kcet 2017 admission ticket. KCET 2017 is scheduled to be conducted on May 2 and May 3, 2017 in offline mode.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X