ಇನ್ನು ಬಾರದ ಸಿಬಿಎಸ್ಇ ಫಲಿತಾಂಶ

ಸಿಬಿಎಸ್ಇ ಹನ್ನೆರಡನೇ ತರಗತಿಯ ಫಲಿತಾಂಶ ಮುಂದೂಡಲಾಗಿದೆ. ಈ ಹಿಂದೆ ತಿಳಿಸಿದ್ದಂತೆ ಮೇ 24 ಕ್ಕೆ ಫಲಿತಾಂಶಗಳು ಪ್ರಕಟಗೊಳ್ಳಬೇಕಿತ್ತು, ಆದರೆ ದೆಹಲಿ ಹೈ ಕೋರ್ಟ್ ತೀರ್ಪಿನನ್ವಯ ಫಲಿತಾಂಶವು ವಿಳಂಬವಾಗಿದೆ.

ಸಿಬಿಎಸ್ಇ ಹನ್ನೆರಡನೇ ತರಗತಿಯ ಫಲಿತಾಂಶ ಮುಂದೂಡಲಾಗಿದೆ. ಈ ಹಿಂದೆ ತಿಳಿಸಿದ್ದಂತೆ ಮೇ 24 ಕ್ಕೆ ಫಲಿತಾಂಶಗಳು ಪ್ರಕಟಗೊಳ್ಳಬೇಕಿತ್ತು, ಆದರೆ ದೆಹಲಿ ಹೈ ಕೋರ್ಟ್ ತೀರ್ಪಿನನ್ವಯ ಫಲಿತಾಂಶವು ವಿಳಂಬವಾಗಿದೆ.

ಕೃಪಾಂಕ ಇಲ್ಲದೆಯೇ ಈ ವಾರ ಫಲಿತಾಂಶ ಪ್ರಕಟಿಸಲು ಸಿಬಿಎಸ್‌ಇ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಈ ವರ್ಷ ಕೃಪಾಂಕ ಪದ್ಧತಿ ಮುಂದುವರಿಸಬೇಕು ಎಂದು ಹೈಕೋರ್ಟ್‌ ತೀರ್ಪಿನಿಂದಾಗಿ ಕೃಪಾಂಕ ನೀಡಿ ಫಲಿತಾಂಶ ಪ್ರಕಟಿಸಬೇಕಾದ ಅನಿವಾರ್ಯಕ್ಕೆ ಸಿಬಿಎಸ್‌ಇ ಸಿಲುಕಿದೆ

ವಿಳಂಬಕ್ಕೆ ಕಾರಣ

ಕ್ಲಿಷ್ಟ ಪ್ರಶ್ನೆಗಳಿಗೆ ಕೃಪಾಂಕ ನೀಡುವ ಪದ್ಧತಿ ರದ್ದತಿಗೆ ದೆಹಲಿ ಹೈಕೋರ್ಟ್‌ ತಡೆ ನೀಡಿದೆ. ಅದನ್ನು ತೆರವುಗೊಳಿಸಲು ಇರುವ ಅವಕಾಶಗಳ ಬಗ್ಗೆ ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಪರಿಶೀಲನೆ ನಡೆಸುತ್ತಿದೆ. ಹಾಗಾಗಿ ಈ ಬಾರಿ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ವಿಳಂಬವಾಗುವ ಸಾಧ್ಯತೆ ಇದೆ.

 ಸಿಬಿಎಸ್ಇ ಫಲಿತಾಂಶ ವಿಳಂಬ

ಮೇ 23ರಂದು ಸಿಬಿಎಸ್ಇಗೆ ನಿರ್ದೇಶನ ನೀಡಿರುವ ದೆಹಲಿ ಹೈಕೋರ್ಟ್, ಸಿಬಿಎಸ್ ಸಿ ಸಂಸ್ಥೆಯು ಈ ಹಿಂದೆ ಅನುಸರಿಸುತ್ತಿದ್ದ ಅಂಕ ಮಿತಿ ನಿಯಮವನ್ನು ಪುನಃ ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಲಯದ ನಿರ್ದೇಶನದ ಮೇರೆಗೆ ಫಲಿತಾಂಶ ಪಟ್ಟಿಯನ್ನು ಪರಿಷ್ಕರಿಸಬೇಕಾಗಿರುವ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಮುಂದೂಡಲು ಸಿಬಿಎಸ್ಇ ಸಂಸ್ಥೆ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಇದನ್ನು ಗಮನಿಸಿ:ಸಿಬಿಎಸ್ಇ ಕೃಪಾಂಕ ಮುಂದುವರಿಕೆಗೆ ದೆಹಲಿ ಹೈ ಕೋರ್ಟ್ ಆದೇಶ

ಗ್ರೇಸ್ ಮಾರ್ಕ್ಸ್ ವಿವರ ಕಠಿಣ ಪ್ರಶ್ನೆಗಳಿದ್ದ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಕೆಲವೇ ಅಂಕಗಳಿಂದ ಪಾಸಾಗುವಂತಿದ್ದರೆ ಅಂತಹ ವಿದ್ಯಾರ್ಥಿಗೆ ಸಾಮಾನ್ಯವಾಗಿ ಗರಿಷ್ಠ ಶೇ. 15ರಷ್ಟು ಹೆಚ್ಚುವರಿ ಅಂಕವನ್ನು ಗ್ರೇಸ್ ಅಂಕವನ್ನಾಗಿ ನೀಡಲಾಗುತ್ತಿತ್ತು. ಇದರ ಪರಿಣಾಮವಾಗಿ ಕಾಲೇಜುಗಳೂ ಅನಿವಾರ್ಯವಾಗಿ ಕಟಾಫ್ ಅಂಕಗಳನ್ನು ನಿಗದಿ ಮಾಡುತ್ತಿದ್ದವು. ಇದರಿಂದ ಸಿಬಿಎಸ್​ಇ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳು 12ನೇ ತರಗತಿ ನಂತರ ಪದವಿ ಕಾಲೇಜಿಗಳ ಪ್ರವೇಶಾತಿ ಸಂಬಂಧ ಗ್ರೇಸ್ ಅಂಕಗಳಿಂದಾಗಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗುತ್ತಿತ್ತು ಅದಕ್ಕೆಲ್ಲ ಪರಿಹಾರವೆಂಬಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವವರು cbseresults.nic.in ಜಾಲತಾಣಕ್ಕೆ ಭೇಟಿ ನೀಡಬಹುದು.

For Quick Alerts
ALLOW NOTIFICATIONS  
For Daily Alerts

English summary
An announcement on the CBSE Class 12 Results 2017 is expected to be delayed further as the board is thinking of challenging the Delhi High Court verdict on moderation policy before the Supreme Court of India.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X