ನೀಟ್ ಪ್ರವೇಶಾತಿ: ಅಂಗವಿಕಲತೆಗೆ ಎಂಸಿಐ ನಿಯಮಗಳು

ಪ್ರಸಕ್ತ ವರ್ಷದಿಂದ ವೈದ್ಯಕೀಯ ಕೋರ್ಸ್‌ಗಳಿಗೆ ಏಕರೂಪದ ಪರೀಕ್ಷೆ ಮತ್ತು ಕೌನ್ಸೆಲಿಂಗ್ ವ್ಯವಸ್ಥೆ ಜಾರಿಯಾಗಿದ್ದು, ವೈದ್ಯಕೀಯ ಮಂಡಳಿ (ಎಂಸಿಐ) ಅಂಗವಿಕಲ ಕೋಟಾದ ನಿಯಮಗಳನ್ನು ಬದಲಿಸಿದೆ.

ನೀಟ್ ಪ್ರವೇಶಾತಿಗೆ ಅಂಗವಿಕಲತೆ ಕೋಟಾದಡಿಯಲ್ಲಿ ಸೀಟು ಪಡೆಯುವವರಿಗೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಪರಿಷ್ಕೃತ ನಿಯಮ ಹೊರಡಿಸಿದೆ.

ಪ್ರಸಕ್ತ ವರ್ಷದಿಂದ ವೈದ್ಯಕೀಯ ಕೋರ್ಸ್‌ಗಳಿಗೆ ಏಕರೂಪದ ಪರೀಕ್ಷೆ ಮತ್ತು ಕೌನ್ಸೆಲಿಂಗ್ ವ್ಯವಸ್ಥೆ ಜಾರಿಯಾಗಿದ್ದು, ವೈದ್ಯಕೀಯ ಮಂಡಳಿ (ಎಂಸಿಐ) ಅಂಗವಿಕಲ ಕೋಟಾದ ನಿಯಮಗಳನ್ನು ಬದಲಿಸಿದೆ. ವೈದ್ಯಕೀಯ ಪ್ರವೇಶ ಕೌನ್ಸೆಲಿಂಗ್‌ನ ಮಾಹಿತಿ ಪುಸ್ತಕದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದನ್ನು ಸ್ಪಷ್ಟಪಡಿಸಿದೆ.

ನೀಟ್‌' ಮೆರಿಟ್‌ ಪಡೆದು ಅಂಗವಿಕಲರ ಕೋಟಾದಡಿ ಸೀಟು ಪಡೆಯುವುದಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ನಿಯಮಗಳಿಂದ ಗೊಂದಲಕ್ಕೆ ಒಳಗಾಗಿದ್ದಾರೆ.

ಅಂಗವಿಕಲತೆಗೆ ಎಂಸಿಐ ನಿಯಮಗಳು

ಅಂಗವಿಕಲ ನಿಯಮಗಳು

ಮೊಣಕಾಲು ಕೆಳಗಿನ ಭಾಗ (ಲೋಯರ್ ಲಿಂಬ್) ಶೇ 40ಕ್ಕಿಂತ ಹೆಚ್ಚು ನಿಷ್ಕ್ರಿಯವಾಗಿದ್ದರಷ್ಟೇ ಅಂಗವಿಕಲ ಕೋಟಾದಡಿ ಅಭ್ಯರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ ಸೀಟು ಪಡೆಯಲು ಅರ್ಹರಾಗಿರುತ್ತಾರೆ.

ಮೊಣಕಾಲು ಕೆಳಗಿನ ಭಾಗ ಶೇ 50ರಿಂದ ಶೇ 70ರಷ್ಟು ನಿಷ್ಕ್ರಿಯ ಇರುವ ಅಭ್ಯರ್ಥಿಗಳನ್ನು ಸೀಟು ಹಂಚಿಕೆಯಲ್ಲಿ ಮೊದಲು ಪರಿಗಣಿಸಲಾಗುತ್ತದೆ. ಬಳಿಕ ಶೇ 40ರಿಂದ ಶೇ 50ರಷ್ಟು ನ್ಯೂನತೆ ಇರುವವರನ್ನು ಪರಿಗಣಿಸಲಾಗುತ್ತದೆ. ಶೇ 40ಕ್ಕಿಂತ ಕಡಿಮೆ ನಿಷ್ಕ್ರಿಯತೆ ಇದ್ದರೆ ಅವರು ಅಂಗವಿಕಲ ಕೋಟಾದಡಿ ಬರುವುದಿಲ್ಲ.

ದೃಷ್ಟಿ, ಶ್ರವಣ, ಮತ್ತು ವಾಕ್‌ ದೋಷ ಇರುವವರಿಗೆ ಈ ಕೋಟಾದಡಿ ಪ್ರವೇಶ ಲಭ್ಯವಿಲ್ಲ.

ರಾಜ್ಯದ ಮಾನದಂಡ ಬದಲಾಗಿಲ್ಲ: ಈ ಹಿಂದೆ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳನ್ನು ಸಿಇಟಿ ಮೆರಿಟ್ ಮೂಲಕ ಹಂಚಿಕೆ ಮಾಡುವಾಗ ಯಾವುದೇ ರೀತಿಯ ಅಂಗವಿಕಲತೆ ಇದ್ದರೂ ಪರಿಗಣಿಸಲಾಗುತ್ತಿತ್ತು. ಈ ವರ್ಷದ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳಿಗೂ ಇದನ್ನು ಅನುಸರಿಸಲಾಗುತ್ತಿದೆ.

ಏಕರೂಪದ ಪರೀಕ್ಷೆ ಮತ್ತು ಕೌನ್ಸೆಲಿಂಗ್ ವ್ಯವಸ್ಥೆ ಜಾರಿಯಾಗಿರುವುದರಿಂದ ಎಂಸಿಐ ನಿಯಮವನ್ನು ಎಲ್ಲ ರಾಜ್ಯಗಳೂ ಅನುಸರಿಸುತ್ತವೆ. ಅದರಂತೆ ನಾವೂ ಪಾಲಿಸುವುದು ಅನಿವಾರ್ಯ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎಸ್. ಮಂಜುನಾಥ್ ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Candidates who come under the category of Physically Handicapped are eligible for a reservation of 3%. This is done on a horizontal basis and is available only to the applicants with locomotor disabilities of lower limbs ranging from 50% to 70%.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X