ಕಾನೂನಿನಲ್ಲಿರುವ 'ಒ ಬಿ ಸಿ' ಕಾನೂನು ಕಾಲೇಜಿನಲ್ಲೇ ಇಲ್ಲ!

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಕೈಪಿಡಿಯಲ್ಲಿ ಕಾಲೇಜು ಪ್ರವೇಶಾತಿಗೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿ ನೀಡಿದ್ದು ಆ ಪಟ್ಟಿಯಲ್ಲಿ ಒಬಿಸಿ ಇಲ್ಲದಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಇದು ಆಶ್ಚರ್ಯವೆನಿಸಿದರು ನಿಜ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದಲ್ಲಿ ಒಬಿಸಿ ಮೀಸಲಾತಿ ಇಲ್ಲದಿರುವುದು ಈಗ ಬೆಳಕಿಗೆ ಬಂದಿದೆ.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಕೈಪಿಡಿಯಲ್ಲಿ ಕಾಲೇಜು ಪ್ರವೇಶಾತಿಗೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿ ನೀಡಿದ್ದು ಆ ಪಟ್ಟಿಯಲ್ಲಿ ಒಬಿಸಿ ಇಲ್ಲದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಕೇವಲ ಮೀಸಲಾತಿ ಪಟ್ಟಿಯಲಲ್ಲದೇ ಶುಲ್ಕದ ವಿವಿರ ನೀಡಿರುವ ಪಟ್ಟಿಯಿಂದಲು ಒಬಿಸಿಯನ್ನು ಕೈಬಿಡಲಾಗಿದೆ.

ಭಾರತೀಯ ಸಂವಿಧಾನದ ಪ್ರಕಾರ ಒಬಿಸಿಗೆ ಶೇ.27 ರಷ್ಟು ಮೀಸಲಾತಿ ನೀಡಬೇಕು. ಆದರೆ ಇಲ್ಲಿ ಒಬಿಸಿ ಪದವನ್ನೇ ಕೈಬಿಡಲಾಗಿದೆ.

ಒ ಬಿ ಸಿ ಪದ ಮರೆತ ಕಾನೂನು ಕಾಲೇಜು

ವಿಶ್ವವಿದ್ಯಾಲಯದ ಮೀಸಲಾತಿಗೆ ಸಂಬಂಧಪಟ್ಟಂತೆ ಕೈಪಿಡಿಯಲ್ಲಿ ಈ ಕೆಳಕಂಡಂತೆ ಮುದ್ರಿತವಾಗಿದೆ

ಸಾಮಾನ್ಯ: 57
ಪ.ಜಾ:12
ಪ.ಪಂ: 06
ವಿದೇಶಿಗರು: 05

ಶುಲ್ಕದ ಪಟ್ಟಿ

ಸಾಮಾನ್ಯ: ರೂ.187700 /-
ಪ.ಜಾ/ಪ.ಪಂ: ರೂ.185200 /-
ವಿದೇಶಿಗರಿಗೆ: 7809 ಯು ಎಸ್ ಡಾಲರ್

ಸೀಟು ಹಂಚಿಕೆ ಪಟ್ಟಿ

ವಿವಿಯ ಸಿ ಎಲ್ ಎ ಟಿ ಪರೀಕ್ಷೆಯ ಮೂಲಕ ನೀಡಲಾಗುವ ಪದವಿಗಳಲ್ಲಿ ಒಟ್ಟು ಬಿಸಿನೆಸ್ ಲಾ ವಿಷಯಕ್ಕೆ 35 ಸೀಟುಗಳು ಮತ್ತು ಹ್ಯುಮನ್ ರೈಟ್ಸ್ ಲಾ ವಿಷಯಕ್ಕೆ 15 ಸೀಟುಗಳನ್ನು ನೀಡಲಾಗಿದೆ. ಅದರಲ್ಲಿನ ಹಂಚಿಕೆ ಈ ಕೆಳಕಂಡಂತಿದೆ.

ಸಾಮಾನ್ಯ: 28 (ಬಿಸಿನೆಸ್ ಲಾ), 12 (ಹ್ಯುಮನ್ ರೈಟ್ಸ್ ಲಾ)
ಪ.ಜಾ: 05 (ಬಿಸಿನೆಸ್ ಲಾ), 02 (ಹ್ಯುಮನ್ ರೈಟ್ಸ್ ಲಾ)
ಪ.ಪಂ: 02 (ಹ್ಯುಮನ್ ರೈಟ್ಸ್ ಲಾ), 01 (ಹ್ಯುಮನ್ ರೈಟ್ಸ್ ಲಾ)

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ (ಎನ್ ಎಲ್ ಎಸ್ ಐ ಯು)

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯವು ಭಾರತದ ಪ್ರತಿಷ್ಠತಿ ಕಾಲೇಜುಗಳಲ್ಲಿ ಒಂದಾಗಿದ್ದು ಭಾರತದಲ್ಲಿ ಕಾನೂನು ಅಧ್ಯಯನದ ಮುಂಚೂಣಿಯಲ್ಲಿರುವ ಕಾಲೇಜು ಇದಾಗಿದೆ. 1987 ರಲ್ಲಿ ಈ ಕಾಲೇಜು ಪ್ರಾರಂಭವಾಗಿದ್ದು ಭಾರತದ ಮೊದಲ ಲಾ ಕಾಲೇಜು ಎಂಬ ಹೆಗ್ಗಳಿಕೆ ಈ ಕಾಲೇಜಿಗೆ ಸಲ್ಲುತ್ತದೆ. ಅಲ್ಲದೇ 5 ವರ್ಷ ಅವಧಿಯ ಕಾನೂನು ಶಿಕ್ಷಣವನ್ನು ಪ್ರಾರಂಭಿಸಿದ ಹೆಗ್ಗಳಿಕೆ ಕೂಡ ಈ ಸಂಸ್ಥೆಗೆ ಸಲ್ಲುತ್ತದೆ. ಪ್ರತಿವರ್ಷ 80 ವಿದ್ಯಾರ್ಥಿಗಳಿಗೆ ಸಿ ಎಲ್ ಎ ಟಿ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶಾತಿ ನೀಡಲಾಗುತ್ತದೆ.

ಸಿ ಎಲ್ ಎ ಟಿ

ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ಎಟಿ) ಕಾನೂನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆಂದೇ ನಡೆಯುವ ಪರೀಕ್ಷೆ ಇದಾಗಿದೆ. ಈ ಪ್ರಶ್ನೆಪತ್ರಿಕೆಯು ಆಬ್ಜೆಕ್ಟಿವ್ ಮಾದರಿಯದಾಗಿದ್ದು ಇದರಲ್ಲಿ ಇಂಗ್ಲಿಷ್, ಸಾಮಾನ್ಯ ಜ್ಞಾನ, ಗಣಿತ, ಕಾನೂನು ಸೇರಿದಂತೆ ಕಾನೂನಿಗೆ ಸಂಬಂಧಪಟ್ಟ ಇತರೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ www.nls.ac.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
National Law School of India University, Bangalore, one of the popular law colleges in Bangalore does not have a separate quota allocated for OBC students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X