ಐನ್ ಸ್ಟೈನ್ ಹಾಗೂ ಹಾಕಿಂಗ್ ರನ್ನು ಮೀರಿಸಿದ ರಾಜಗೌರಿ ಐಕ್ಯೂ

ಅತ್ಯಂತ ಬುದ್ಧಿವಂತೆ ಎಂದು ಗುರುತಿಸಿಕೊಂಡಿರುವ ಭಾರತೀಯ ಮೂಲಕ ರಾಜಗೌರಿ ಪವಾರ್ ಐಕ್ಯೂ ಪರೀಕ್ಷೆಯಲ್ಲಿ ವಿಜ್ಞಾನಿಗಳಾದ ಆಲ್ಬರ್ಟ್ ಐನ್ ಸ್ಟೈನ್ ಹಾಗೂ ಸ್ಟೀಫನ್ ಹಾಕಿಂಗ್ ರನ್ನು ಹಿಂದಿಕ್ಕಿದ್ದಾಳೆ.

ಭಾರತದ ಪೋರಿ ಈಗ ಜಗತ್ತಿನ ಗಮನ ಸೆಳೆದಿದ್ದಾಳೆ. ಅತ್ಯಂತ ಬುದ್ಧಿವಂತೆ ಎಂದು ಗುರುತಿಸಿಕೊಂಡಿರುವ ಭಾರತೀಯ ಮೂಲಕ ರಾಜಗೌರಿ ಪವಾರ್ ಐಕ್ಯೂ ಪರೀಕ್ಷೆಯಲ್ಲಿ ವಿಜ್ಞಾನಿಗಳಾದ ಆಲ್ಬರ್ಟ್ ಐನ್ ಸ್ಟೈನ್ ಹಾಗೂ ಸ್ಟೀಫನ್ ಹಾಕಿಂಗ್ ರನ್ನು ಹಿಂದಿಕ್ಕಿದ್ದಾಳೆ.

ಮ್ಯಾಂಚೆಸ್ಟರ್‍ ನಲ್ಲಿ ನಡೆದ ಬ್ರಿಟಿಷ್ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ, ಇಂಗ್ಲೆಂಡ್‍ ನ ಚೆಶೈರ್ ನಿವಾಸಿಯಾಗಿರೋ ಭಾರತೀಯ ಮೂಲದ ರಾಜಗೌರಿ ಪವಾರ್ ಬರೋಬ್ಬರಿ 162 ಅಂಕ ಪಡೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

18 ವರ್ಷಕ್ಕಿಂತ ಕೆಳಗಿನ ವಯೋಮಾನದವರಿಗೆ ಇದು ಅತ್ಯಂತ ದೊಡ್ಡ ಐಕ್ಯೂ ಪರೀಕ್ಷೆಯಾಗಿದೆ. ಪತ್ರಿಕೆಯೊಂದರ ವರದಿಯ ಪ್ರಕಾರ ಈ ಪರೀಕ್ಷೆ ತೆಗೆದುಕೊಂಡು ಹೆಚ್ಚಿನ ಅಂಕ ಗಳಿಸುವ ಶೇ. 1ರಷ್ಟು ಜನರಲ್ಲಿ ರಾಜಗೌರಿ ಒಬ್ಬಳಾಗಿದ್ದಾಳೆ. ಇಡೀ ವಿಶ್ವದಲ್ಲಿ ಹೆಚ್ಚಿನ ಅಂಕ ಪಡೆದ 20 ಸಾವಿರ ಜನರಲ್ಲಿ ಈಗ ರಾಜಗೌರಿಯೂ ಒಬ್ಬಳಾಗಿದ್ದಾಳೆ.

ಈಕೆ ಜಗತ್ತಿನ ಅತ್ಯಂತ ಬುದ್ಧಿಶಾಲಿ ಬಾಲಕಿ

ಮೆನ್ಸಾ ಪರೀಕ್ಷೆಯಲ್ಲಿ 140 ಅಂಕ ಪಡೆದರೆ ಅವರನ್ನ ಜೀನಿಯಸ್(ಅತ್ಯಂತ ಬುದ್ಧಿಶಾಲಿಗಳು) ಎಂದು ಪರಿಗಣಿಸಲಾಗುತ್ತದೆ. ಬ್ರಿಟಿಷ್ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಯಾರು ಬೇಕಾದರೂ ಭಾಗವಹಿಸಿ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಬಹುದು. ಐಕ್ಯೂ ಪರೀಕ್ಷೆ ಪ್ರಕ್ರಿಯೆಯ ಪ್ರಕಾರ ಒಬ್ಬರ ಬುದ್ಧಿವಂತಿಕೆಯನ್ನ ಅಳೆಯಲಾಗುತ್ತದೆ.

ವಿಶ್ವದ ಗಮನ ಸೆಳೆದಿರುವ ರಾಜಗೌರಿಯನ್ನು ಇದೀಗ ಹೈ-ಐಕ್ಯೂ ಸೊಸೈಟಿಯ ಸದಸ್ಯೆಯಾಗಲು ಆಹ್ವಾನಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ರಾಜಗೌರಿ, "ನನಗಾಗ್ತಿರೋ ಸಂತೋಷವನ್ನು ಪದಗಳಲ್ಲಿ ಹೇಳೋಕೆ ಆಗುತ್ತಿಲ್ಲ. ವಿದೇಶಿ ನೆಲದಲ್ಲಿ ಭಾರತವನ್ನ ಪ್ರತಿನಿಧಿಸಿ ಇಂತಹ ಸಾಧನೆ ಮಾಡಿರುವುದು ನನಗೆ ಹೆಮ್ಮೆ ಎನಿಸುತ್ತಿದೆ" ಎಂದಿದ್ದಾಳೆ

ರಾಜಗೌರಿಯ ತಂದೆ ಡಾ. ಸೂರಜ್‍ಕುಮಾರ್ ಪವಾರ್ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿಜ್ಞಾನಿಯಾಗಿದ್ದಾರೆ. ಇವರು ಪುಣೆಯ ಬಾರಾಮತಿ ಮೂಲದವರಾಗಿದ್ದು, ಮಗಳ ಸಾಧನೆಯ ಬಗ್ಗೆ ಕೇಳಿ ಸಂತಸಪಟ್ಟಿದ್ದಾರೆ.

ಮೆನ್ಸಾ ಪರಿಚಯ

ತೀಕ್ಷಣ ಬುದ್ಧಿಮತ್ತೆ ಪರೀಕ್ಷಿಸಲೆಂದೇ ಹುಟ್ಟಿಕೊಂಡಿರುವ ಅತಿ ಹಳೆಯ ಹಾಗೂ ಪ್ರಭಾವಿ ಐಕ್ಯೂ ಸಂಶೋಧನಾ ಸಂಸ್ಥೆ ಮೆನ್ಸಾ (MENSA). ಇದರ ಮೂಲ ಬ್ರಿಟನ್. ಮಾನವನ ಬುದ್ಧಿಮತ್ತೆಯನ್ನು ಮನುಕುಲದ ಒಳಿತಿಗಾಗಿ ಬಳಕೆ ಮಾಡುವುದೇ ಇದರ ಪ್ರಮುಖ ಗುರಿ.

ಆಸ್ಟ್ರೇಲಿಯಾದ ಬ್ಯಾರಿಸ್ಟರ್ ರೊನಾಲ್ಡ್ ಬೆರಿಲ್ ಹಾಗೂ ಬ್ರಿಟನ್ ಮೂಲದ ವಿಜ್ಞಾನಿ ಡಾ. ಲ್ಯಾನ್‌ಕ್ಲಾಟ್ ವೇರ್ 1946ಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಭಾರತ, ಅಮೆರಿಕ, ಕೆನಡಾ ಸೇರಿದಂತೆ ವಿಶ್ವದ ವಿವಿಧೆಡೆ ಶಾಖಾ ಕಚೇರಿಗಳನ್ನು ಹೊಂದಿದೆ.

ಮೆನ್ಸಾಗೆ ಸದಸ್ಯತ್ವ ಪಡೆಯಬೇಕೆಂದರೆ ಮೆನ್ಸಾ ಆಯೋಜಿಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಹೆಚ್ಚು ಬುದ್ದಿಮತ್ತೆ ಇರುವ ಸದಸ್ಯರು ಇದರ ಸದಸ್ಯರಾಗಲು ಅರ್ಹರು. ಈ ಸದಸ್ಯರಿಗೆ ಬೌದ್ಧಿಕ ಹಾಗೂ ಸಾಮಾಜಿಕ ಅವಕಾಶ ಸಿಗುವಂತೆ ಮಾಡುವುದು ಆ ಮೂಲಕ ಸಮಾಜದ ಏಳಿಗೆಗೆ ಅವರನ್ನು ದುಡಿಸುವುದು ಅದರ ಕರ್ತವ್ಯ.

ಬೆಂಗಳೂರಿನಲ್ಲೂ ಮೆನ್ಸಾ ಅಸ್ತಿತ್ವದಲ್ಲಿದ್ದು ನಿಮ್ಮಲ್ಲೂ ಯಾರಾದರೂ ಹೆಚ್ಚಿನ ಐಕ್ಯೂ ಹೊಂದಿದ್ದರೆ ನೀವು ಕೂಡ ಸ್ಪರ್ಧಿಸಬಹುದು.

ಮೆನ್ಸಾ ಬಗ್ಗೆ ಮತ್ತಷ್ಟು ತಿಳಿಯಲು ಈ ವೆಬ್ಸೈಟ್ ಗಮನಿಸಿ www.mensa.org

For Quick Alerts
ALLOW NOTIFICATIONS  
For Daily Alerts

English summary
Twelve-year-old Rajgauri Pawar secured two points higher than scientists Albert Einstein and Stephen Hawking in the British Mensa IQ test.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X