ಮೈಸೂರಿನ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮ

ಮೈಸೂರಿನ ರುಡ್ ಸೆಟ್ ಕೇಂದ್ರದಲ್ಲಿ 18 ರಿಂದ 45 ವರ್ಷ ವಯೋಮಿತಿಯುಳ್ಳ ನಿರುದ್ಯೋಗ ಯುವಕ-ಯುವತಿಯರ ಕೌಶಲ್ಯಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮ

ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನಾರ ಬ್ಯಾಂಕ್ ಹಾಗೂ ಶ್ರೀ ಕ್ಷತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಯುಕ್ತಶ್ರಾದಲ್ಲಿ ಸ್ಥಾಪಿತವಾಗಿರು ರುಡ್ ಸೆಟ್ ಸಂಸ್ಥೆ ಸ್ವ-ಉದ್ಯೋಗ ಮಾಡಲು ಆಸಕ್ತ ನಿರುದ್ಯೋಗಿ ಯುವಕ/ಯುವತಿಯರಿಗೆ ರುಡ್ ಸೆಟ್ ಅರ್ಜಿ ಆಹ್ವಾನಿಸಿದೆ.

ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಉಚಿತ ತರಬೇತಿ

ರುಡ್ ಸೆಟ್

ದಕ್ಷಿಣ ಕನ್ನಡ ಜಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷತ್ರ ಧರ್ಮಸ್ಥಳ ಮಾರ್ಗದ ಮಧ್ಯ ಇರುವ ಸಿದ್ದವನದ ಈ ರುಡ್ ಸೇಟ್ ಸಂಸ್ಥೆ ಇದುವರಿಗೆ ಸರಿ ಸುಮಾರು ಇಪ್ಪತ್ತು ಸಾವಿರ ನಿರುದೋಗಿ ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ ಅದರಲ್ಲಿ ಹದಿನೇಳು ಸಾವಿರ ನಿರುದ್ಯೋಗಿ ಯುವಕರಿಗೆ ಬದಕು ಕಟ್ಟಿ ಕೊಟ್ಟಿದೆ. 1982 ರಲ್ಲಿ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನಾರ ಬ್ಯಾಂಕ್ ಹಾಗೂ ಶ್ರೀ ಕ್ಷತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಯುಕ್ತಶ್ರಾದಲ್ಲಿ ಕಾರ್ಯ ನಿರ್ವಾಹಿಸುವ ಈ ಸಂಸ್ಥೆ ಗ್ರಾಮೀಣ ಯುವಕರಿಗೆ ಸ್ವಯಂ ಉದ್ದೋಗ ಕಲ್ಪಿಸುವ ಜೀವ ಸಂಜೀವಿನಿಯಾಗಿ ಕಾರ್ಯ ನಿರ್ವಾಹಿಸುತ್ತಿದ್ದೆ. ಇಂದು ಕರ್ನಾಟದಲ್ಲಿ ಆರು ಕೇಂದ್ರಗಳು ಸೇರಿದಂತ್ತೆ 17 ರಾಜ್ಯಗಳಲ್ಲಿ ಒಟ್ಟು 27 ಅಂಗಸಂಸ್ಥೆಗಳನ್ನು ಹೊಂದಿ ನಿರುದ್ಯೋಗವನ್ನು ಬುಡಸಹಿತ ಕಿತ್ತ್ತೆಯಸೆವುದಕ್ಕೆ ಶ್ರಮಿಸುತ್ತಿದೆ.

ಪೋಟೊ ಗ್ರಾಫಿ , ವಿಡಿಯೋ ಗ್ರಾಫಿ, ಹೊಲಿಗೆ ಯಂತ್ರ ತರಬೇತಿ ,ಗಣಕ ಯಂತ್ರ ತರಬೇತಿ ಎರೆಹುಳು ಗೊಬ್ಬರ ತಯಾರಿಕೆ ಸೇರಿದಂತೆ 55-60 ವಿವಿಧ ಬಗೆಯ ತರಬೇತಿಗಳನ್ನು ಯುವಕ-ಯುವತಿಯರ ಕೌಶಲ್ಯಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ. ಇದರಿಂದ ತರಬೇತಿ ಪಡೆದ ನಂತರದಲ್ಲಿ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನಾರ ಬ್ಯಾಂಕ್ ಗಳಿಂದ ಸಬ್ಸಿಡಿ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದ್ದೆ.

ರುಡ್ ಸೆಟ್ ಉದ್ದೇಶ

ಸ್ವಾವಲಂಬಿ ಜೀವನ ನಡೆಸಲು ಸಹಯವಾಗುವಂತೆ ಯುವಕ-ಯುವತಿಯರನ್ನು ಗುರುತಿಸಿ ಪ್ರೇರೆಪಿಸಿ ಸ್ವಯಂ ಉದ್ದೋಗ ತರಬೇತಿ ನೀಡುವುದು.
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಗಳನ್ನು ಅಭಿವೃದ್ಧಿ ಪಡಿಸುವುದು. ಸ್ವಯಂ ಉದ್ಯೋಗ ಆರಂಭಿಸಲು ಸಮಾಲೋಚನೆ,ನೇರವು ಹಾಗೂ ಮಾರ್ಗದರ್ಶನ ನೀಡುವುದು ರುಡ್ ಸೆಟ್ ಮೂಲ ಉದ್ದೇಶವಾಗಿದೆ.

ಸಂಸ್ಥಯಲ್ಲಿನ ಕಾರ್ಯಕ್ರಮಗಳು

ಸಂಸ್ಥೆಯಲ್ಲಿ 60ಕ್ಕೂ ಹೆಚ್ಚು ಸ್ವಯಂ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು.ತರಬೇತಿಗಳು ಅಲ್ಪವಧಿಯವುಗಳಾಗಿವೆ.

ಸೂಕ್ತ ಅಭ್ಯಾರ್ಥಿಗಳನ್ನು ಗುರುತ್ತಿಸಿ ತರಬೇತಿಗೆ ಆಯ್ಕೆ ಮಾಡುವುದು.

ಕ್ಯಾಂಪಸ್ ಹಾಗೂ ಪ್ರಾಯೋಗಿಕ ತರಬೇತಿಗೆ ಒತ್ತು.

ವರ್ಥನಭ್ಯಾಸ ಗುಂಪು ಚರ್ಚೆಗಳಿಗೆ ಅವಕಾಶ

ಬ್ಯಾಂಕ್ ಮತ್ತು ಸರ್ಕಾರಿ ಅಧಿಕಾರಿಗಳೂಂದಿಗೆ ಚರ್ಚೆ

ಸಂಸ್ಥಯಲ್ಲಿನ ಸೌಲಭ್ಯಗಳು

ಸುಸಜ್ಜಿತ ತರಬೇತಿ ಸಂರ್ಕೀಣ ಮತ್ತು ಗ್ರಂಥಾಲಯ

ತರಬೇತಿ ಸಲಕರಣೆಗಳು ಮತ್ತು ದೃಶ್ಯ, ಶ್ರವ್ಯ ಮಾಧ್ಯಮಗಳ ಬಳಕೆ

ಪ್ರಾಯೋಗಿಕ ಕಲಿಕೆ ಕಾರ್ಯಗಾರ

ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ

ಇಲ್ಲಿ ತರಬೇತಿ ಪಡೆದವರಲ್ಲಿ ಶಿಸ್ತು, ಬಾಂಧವ್ಯ, ಸದ್ಗುಣ, ವ್ಯವಹಾರ ಧರ್ಮ, ಸಂಸ್ಕಾರಗಳು ಬೆಳೆಯುತ್ತದೆ. ಇದನ್ನು ಗುರುತಿಸಿಯೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತರಬೇತಿ ಕೇಂದ್ರ ನಡೆಸಲು ಸ್ವಂತ ಕಟ್ಟಡಕ್ಕಾಗಿ ನಿವೇಶನ ಒದಗಿಸುತ್ತಾ ಬಂದಿದೆ.

ಅರ್ಜಿ ಸಲ್ಲಿಸಲು ಅರ್ಹತೆ

18 ರಿಂದ 45 ವರ್ಷ ವಯೋಮಿತಿಯೊಳಗಿರುವ ಯಾವುದೇ ವರ್ಗಕ್ಕೆ ಸೇರಿದ, ಸ್ವ ಉದ್ಯೋಗ ಮಾಡಲು ಆಸಕ್ತ ನಿರುದ್ಯೋಗಿ ಯುವಕ/ಯುವತಿಯರು ಅರ್ಜಿ ಸಲ್ಲಿಸಬಹುದು.

ತರಬೇತಿ

ದಿನಾಂಕ .20.02.2017 ರಿಂದ 21.03.17 ರ ವರೆಗೆ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್ಸೆಟ್ ರಿಪೇರಿ ಹಾಗೂ, 17.02.17 ರಿಂದ 22. 2 17 ರ ವರೆಗೆ ಹೈನುಗಾರಿಕೆ ತರಬೇತಿ ಉಚಿತ ಊಟ ಹಾಗೂ ವಸತಿಯೊಂದಿಗೆ ರುಡ್ಸೆಟ್ ಸಂಸ್ಥೆ ಹಿನಕಲ್ ಮೈಸೂರಿನಲ್ಲಿ ನಡೆಯಲಿದೆ. ತರಬೇತಿಯಲ್ಲಿ ಸಂಬಂಧ ಪಟ್ಟ ವಿಷಯದ ಜತೆಗೆ ಉದ್ಯಮ ನಿರ್ವಹಣೆ ಹಾಗೂ ಬ್ಯಾಂಕಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಲಾಗುವುದು.

ತರಬೇತಿಗಳು ಸಂಪೂರ್ಣ ಉಚಿತವಾಗಿದ್ದು, ವಸತಿಯುತವಾಗಿವೆ. ಆಸಕ್ತರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ ಅನುಭವಗಳ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ಹೆಸರನ್ನು ನೋಂದಾಯಿಸಬಹುದು
ಆಸಕ್ತರು ,4 ಭಾವಚಿತ್ರ. , APL /BPl ಕಾರ್ಡ್, ಆಧಾರ್ ಕಾರ್ಡ್, SC,/ST ಸರ್ಟಿಫಿಕೇಟ್ ಇದ್ದಲ್ಲಿ ಇವುಗಳ ಜೆರಾಕ್ಸ್ ಪ್ರತಿಗಳೊಂದಿಗೆ ನಿರ್ದೇಶಕರು ರುಡ್ ಸೆಟ್ ಸಂಸ್ಥೆ ಹಿನಕಲ್ ಮುಖ್ಯ ರಸ್ತೆ ಮೈಸೂರು. ಇಲ್ಲಿಗೆ ನೇ ರವಾಗಿ ಬಂದು ಸಂಪರ್ಕಿಸ ಬಹುದು.

ಅಗತ್ಯವಿದ್ದಲ್ಲಿ ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ ಹಾಗು ಕಛೇರಿ ಸಮಯ ಬೆಳಗಿನ 10 ರಿಂದ ಸಂಜೆ 5.30 ವರೆಗೆ 0821-25519663,9449860466

For Quick Alerts
ALLOW NOTIFICATIONS  
For Daily Alerts

English summary
rudset mysuru organising self employment training for unemployed men and women
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X