ಒಂದರಿಂದ ಹತ್ತನೇ ತರಗತಿ ಶಾಲಾ ಪಠ್ಯಪುಸ್ತಕ ವೆಬ್ಸೈಟ್ ನಲ್ಲಿ ಲಭ್ಯ

ಒಟ್ಟು 511 ಪುಸ್ತಕಗಳ (ಟೈಟಲ್ಸ್) ಪೈಕಿ ಈಗಾಗಲೇ ಶೇ 50ರಷ್ಟು ಆನ್‌ಲೈನ್‌ನಲ್ಲಿ ಲಭ್ಯ ಇವೆ. ಕೆಲವು ದಿನಗಳಲ್ಲೇ ಎಲ್ಲ ಪಠ್ಯಪುಸ್ತಕಗಳನ್ನು ವೆಬ್‌ಸೈಟ್‌ಗೆ ಅಳವಡಿಸಲಾಗುತ್ತದೆ.

ಶಾಲಾ ಪಠ್ಯಪುಸ್ತಕಗಳನ್ನು ವೆಬ್ಸೈಟ್ ನಲ್ಲಿ ಹಾಕುವ ಕಾರ್ಯ ಭರದಿಂದ ಸಾಗಿದ್ದು ಶಾಲೆಗಳು ಪ್ರಾರಂಭವಾಗುವ ಮೊದಲೇ ಎಲ್ಲಾ ಪಠ್ಯಪುಸ್ತಕಗಳು ಪಿಡಿಎಫ್ ರೂಪದಲ್ಲಿ ಆನ್-ಲೈನ್ ನಲ್ಲಿ ಲಭ್ಯವಾಗಲಿದೆ.

2017-18ನೇ ಸಾಲಿನ ಶೈಕ್ಷಣಿಕ ವರ್ಷ ಜೂನ್‌ 1ರಿಂದ ಆರಂಭವಾಗಲಿದ್ದು, ಅದಕ್ಕೆ ಮೊದಲೇ ಎಲ್ಲ ಪುಸ್ತಕಗಳು ವೆಬ್‌ಸೈಟ್‌ನಲ್ಲಿ ಸಿಗಲಿವೆ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ನರಸಿಂಹಯ್ಯ ತಿಳಿಸಿದ್ದಾರೆ.

ಒಟ್ಟು 511 ಪುಸ್ತಕಗಳ (ಟೈಟಲ್ಸ್) ಪೈಕಿ ಈಗಾಗಲೇ ಶೇ 50ರಷ್ಟು ಆನ್‌ಲೈನ್‌ನಲ್ಲಿ ಲಭ್ಯ ಇವೆ. ಕೆಲವು ದಿನಗಳಲ್ಲೇ ಎಲ್ಲ ಪಠ್ಯಪುಸ್ತಕಗಳನ್ನು ವೆಬ್‌ಸೈಟ್‌ಗೆ ಅಳವಡಿಸಲಾಗುತ್ತದೆ.

ರಾಜ್ಯ ಪಠ್ಯಕ್ರಮದ ಒಂದರಿಂದ ಹತ್ತನೇ ತರಗತಿವರೆಗಿನ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿ www.ktbs.kar.nic.in ಹಾಕಲಾಗುತ್ತಿದೆ. ಸಾರ್ವಜಿನಿಕರು ಲಭ್ಯವಿರುವ ಪುಸ್ತಕಗಳನ್ನು ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಶಾಲಾ ಪಠ್ಯಪುಸ್ತಕ  ವೆಬ್ಸೈಟ್ ನಲ್ಲಿ ಲಭ್ಯ

ಪುಸ್ತಕ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ

  • ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಪಠ್ಯಪುಸ್ತಕ ಆನ್-ಲೈನ್ ಎಂಬ ಬಟನ್ ಕ್ಲಿಕ್ ಮಾಡಿ.
  • ಟೆಕ್ಸ್ಟ್ ಬುಕ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ತರಗತಿ, ಮಾಧ್ಯಮ ಮತ್ತು ವಿಷಯಗಳನ್ನು ಆಯ್ಕೆ ಮಾಡಿ ಪುಸ್ತಕ ಡೌನ್ಲೋಡ್ ಮಾಡಿಕೊಳ್ಳಿ.

ಲಭ್ಯವಿರುವ ಪುಸ್ತಕಗಳು

ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ, ತೆಲುಗು, ಮರಾಠಿ, ತುಳು, ಅರೇಬಿಕ್‌, ಪರ್ಷಿಯನ್‌ ಭಾಷಾ ಪುಸ್ತಕಗಳು, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಸ್ತಕಗಳು ಲಭ್ಯವಿವೆ.

ಪುಸ್ತಕಗಳಲ್ಲಿ ತಪ್ಪು ಮಾಹಿತಿ

1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳಲ್ಲಿ ಸಾಕಷ್ಟು ತಪ್ಪು ಮಾಹಿತಿಗಳಿವೆ ಎಂದು ದೂರು ಬಂದಿದ್ದವು. ಹೀಗಾಗಿ ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣೆಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪರಿಷ್ಕರಣಾ ಸಮಿತಿ ರಚಿಸಿತ್ತು. ಸಮಿತಿಯು ಸಿ.ಡಿಗಳ ಮೂಲಕ ಪರಿಷ್ಕೃತ ಪಠ್ಯಪುಸ್ತಕಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅದೇ ಪುಸ್ತಕಗಳು ಮುದ್ರಣ ಆಗುತ್ತಿವೆ, ವೆಬ್‌ಸೈಟ್‌ಗೂ ಅಪ್‌ಲೋಡ್‌ ಮಾಡಲಾಗುತ್ತಿದೆ.

ಎರಡು ಭಾಗದಲ್ಲಿ ಮುದ್ರಣ

ಈ ಬಾರಿ ಪಠ್ಯಪುಸ್ತಕಗಳನ್ನು ಎರಡು ಭಾಗವಾಗಿ ಮಾಡಿ ಮುದ್ರಣ ಮಾಡಲಾಗುತ್ತದೆ. ಅದೇ ರೀತಿ ವೆಬ್‌ಸೈಟ್‌ನಲ್ಲೂ ಭಾಗ-1 ಮತ್ತು ಭಾಗ-2 ಲಭ್ಯವಾಗಲಿವೆ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘ ತಿಳಿಸಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘ

ಕರ್ನಾಟಕ ಪಠ್ಯಪುಸ್ತಕ ಸಂಘವು ದಿನಾಂಕ 01.04.2006 ರಂದು ಅಸ್ತಿತ್ವಕ್ಕೆ ಬಂದಿತು. ಸಂಘವುಸರ್ಕಾರಿ ಆದೇಶ ಸಂಖ್ಯೆ ಇಡಿ 95 ಡಿಜಿಒ 2005, ಬೆಂಗಳೂರು ದಿನಾಂಕ 04.01.2006 ರ ಅನ್ವಯ ಸರ್ಕಾರ ಅನುಮೋದಿಸಿದ ಶಾಲಾ ಪಠ್ಯಪುಸ್ತಕಗಳ ತಯಾರಿಕೆ, ಮುದ್ರಣ ಹಾಗೂ ಸರಬರಾಜಿಗೆ ಸಂಬಂಧಿಸಿದಂತೆ ಒಂದು ಅಂಗ ಸಂಸ್ಥೆಯೆಂದು ಘೋಷಿಸಲ್ಪಟ್ಟಿದೆ. ಇದನ್ನು ಸಂಘದ ರೂಪದಲ್ಲಿ ಒಂದು ಸ್ವಾಯತ್ತ ಸಂಸ್ಥೆ ಇರಬೇಕೆಂಬ ಕೆ. ಪಿ .ಸುರೇಂದ್ರನಾಥ ಸಮಿತಿ ಶಿಫಾರಸ್ಸಿನಂತೆ ರಚಿಸಲಾಗಿದೆ. ಸಂಘಗಳ ನೊಂದಣಿ ಕಾಯಿದೆ 1966 ನ ಪ್ರಕಾರ ಸಂಗವನ್ನು ದಿನಾಂಕ 12.05.2006 ರಂದು ನೊಂದಾಯಿಸಲಾಗಿದೆ.

ಈ ಸಂಘವು ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಗಳ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ತ್ವರಿತವಾದ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಉಚಿತ ಮತ್ತು ಮಾರಾಟದ ಪುಸ್ತಕಗಳನ್ನು ಸಮರ್ಥವಾಗಿ ವಿತರಿಸಲು ಅನೂಕೂಲವಾಗಿದೆ .

For Quick Alerts
ALLOW NOTIFICATIONS  
For Daily Alerts

English summary
All textbooks of Class I to X for Kannada, English, Hindi, Urdu, Marathi, Tamil and Telugu medium of instruction for all the subjects in the pdf format.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X