ಸೋಷಿಯಲ್ ಮೀಡಿಯಾ + ಮಲ್ಟಿಮೀಡಿಯಾ = ರಾಜಕೀಯ

ಜನರಿಗೆ ವಿಷಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಮುಟ್ಟಿಸುವ ಮಾಧ್ಯಮವಾಗಿ ಗುರುತಿಸಿಕೊಂಡಿರುವ ಸೋಷಿಯಲ್ ಮೀಡಿಯಾಗಳು ಹೇಗೆಲ್ಲ ಬಳಕೆಯಾಗುವುದಕ್ಕೆ ಎನ್ನುವುದಕ್ಕೆ ಇಂದಿನ ರಾಜಕೀಯದ ಬೆಳವಣಿಗೆಯೇ ಬಹುದೊಡ್ಡ ಉದಾಹರಣೆ.

ಸಾಮಾಜಿಕ ಜಾಲತಾಣಗಳು ಇಂದು ಉದ್ಯೋಗ ಸೃಷ್ಟಿಸುವ ತಾಣಗಳಾಗಿ ಮಾರ್ಪಡುತ್ತಿವೆ. ಜಾಲತಾಣಗಳು ಹೇಗೆಲ್ಲ ಕಾರ್ಯ ನಿರ್ವಹಿಸುತ್ತವೆ, ಅವುಗಳನ್ನ ಹೇಗೆಲ್ಲ ಉಪಯೋಗಿಸಿಕೊಳ್ಳಬಹುದು ಎಂದು ತಿಳಿದುಕೊಂಡರೆ ಸಾಕು ನಿಮಗೆ ಉದ್ಯೋಗ ಗ್ಯಾರಂಟಿ.

ಇಂದು ಜನಸಾಮಾನ್ರಯ ಜೀವನದ ಬಹು ಮುಖ್ಯವೆನಿಸಿರುವ ಹಾಗೂ ಡಿಜಿಟಲ್ ಯುಗದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಫೇಸ್ ಬುಕ್, ಟ್ವಿಟರ್, ಲಿಂಕ್ಡ್ ಇನ್, ಗೂಗಲ್ ಪ್ಲಸ್ ನಂತಹ ಸಮಾಜಿಕ ತಾಣಗಳು ಕೇವಲ ವಿಷಯಗಳ ವಿನಿಮಯ ಮಾಡುವ ತಾಣವಾಗಿಲ್ಲ ಬದಲಾಗಿ ಸಮಾಜದ ದಿಕ್ಕನ್ನೇ ಬದಲಿಸುವಷ್ಟು ಶಕ್ತಿಯನ್ನು ಹೊಂದಿವೆ.

ಸೋಷಿಯಲ್ ಮೀಡಿಯಾ ಜೊತೆಗೆ ಒಂದಿಷ್ಟು ಮಲ್ಟಿಮೀಡಿಯಾ ಬಗ್ಗೆ ತಿಳಿದಿದ್ದರೆ ಸಾಕು ನೀವೂ ಕುಳಿತಲ್ಲಿಯೇ ಕ್ರಾಂತಿ ಮಾಡಬಹುದು. ಜನರಿಗೆ ವಿಷಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಮುಟ್ಟಿಸುವ ಮಾಧ್ಯಮವಾಗಿ ಗುರುತಿಸಿಕೊಂಡಿರುವ ಸೋಷಿಯಲ್ ಮೀಡಿಯಾಗಳು ಹೇಗೆಲ್ಲ ಬಳಕೆಯಾಗುವುದಕ್ಕೆ ಎನ್ನುವುದಕ್ಕೆ ಇಂದಿನ ರಾಜಕೀಯದ ಬೆಳವಣಿಗೆಯೇ ಬಹುದೊಡ್ಡ ಉದಾಹರಣೆ.

ರಾಜಕೀಯಕ್ಕೆ ಸೋಷಿಯಲ್ ಮೀಡಿಯಾ ಬಳಕೆ

ಸಾಮಾನ್ಯವಾಗಿ ರಾಜಕಾರಣಿಗಳಿ ಅಧಿಕಾರಕ್ಕೆ ಬಂದರೆ ಉದ್ಯೋಗ ಕೊಡುವುದಾಗಿ ಭರವಸೆಗಳನ್ನು ನೀಡತ್ತಾರೆ. ಆದರೆ ನಮ್ಮ ಕನ್ನಡದ ನಟಿ ಕಂ ರಾಜಕಾರಿಣಿ ರಮ್ಯಾ ಸ್ಚಲ್ಪ ಸ್ಪೆಷಲ್. ರಮ್ಯಾ ಈಗ ರಾಜಕೀಯದಲ್ಲಿ ಡಿಜಿಟಲ್ ಯುದ್ಧ ಪ್ರಾರಂಭಿಸಲು ಸೈನ್ಯ ಕಟ್ಟುತ್ತಿದ್ದಾರೆ. ಅವರ ಡಿಜಿಟಲ್ ಸೇನೆಗೆ ಬೇಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪೋಸ್ಟ್ ಗಳನ್ನು ಹಾಕಿ ಯುದ್ದ ಮಾಡುವವರು.

ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮ ಘಟಕಕ್ಕೆ ಅಧ್ಯಕ್ಷೆಯಾಗಿರುವ ರಮ್ಯಾ, ಮೋದಿ ಸರ್ಕಾರದ ವಿರುದ್ಧ 'ಡಿಜಿಟಲ್ ಯುದ್ಧ' ಸಾರಲು ನಿರ್ಧರಿಸಿದ್ದಾರೆ. ಅದಕ್ಕೆಂದೇ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಘಟಕವು 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ. ಉದ್ಯೋಗಾವಕಾಶಕ್ಕೆ ಸಂಬಂಧಿಸಿದಂತೆ ಲಿಂಕ್ಡ್ ಇನ್ ಆನ್‌ಲೈನ್ ತಾಣದಲ್ಲಿ ವಿವಿಧ ಹುದ್ದೆಗಳಿಗೆ ಕಾಂಗ್ರೆಸ್ ಅರ್ಜಿ ಕರೆಯಲಾಗಿದೆ.

ವಿಶ್ಲೇಷಣಾ ವ್ಯವಸ್ಥಾಪಕ, ಡಿಜಿಟಲ್ ಮೀಡಿಯಾ ಪ್ಲ್ಯಾನರ್, ಡಾಟಾ ಅನಲಿಸ್ಟ್, ಎನಿಮೇಟರ್, ವಿಡಿಯೋ ಎಡಿಟರ್, ಕ್ಯಾರಿಕೇಚರ್ ಚಿತ್ರಕಾರ, ಅಕೌಂಟ್ ಡೈರೆಕ್ಟರ್ ಸೇರಿದಂತೆ 25 ಹುದ್ದೆಗಳ ನೇಮಕಗಳು ಇದರಲ್ಲಿ ಸೇರಿವೆ. ಅಲ್ಲದೇ ಕನ್ನಡ, ತಮಿಳು, ಕನ್ನಡ ಹಾಗೂ ಗುಜರಾತಿ ಲೇಖನಗಳು ಹಾಗೂ ಭಾಷಣಗಳನ್ನು ತರ್ಜುಮೆ ಮಾಡುವವರಿಗೂ ಅರ್ಜಿ ಆಹ್ವಾನಿಸಲಾಗಿದೆ.

ಉತ್ತಮವಾಗಿ ಸಮಾಜಿಕ ಜಾಲತಾಣಗಳನ್ನು ನಿರ್ವಹಿಸಿವುದನ್ನು ತಿಳಿದಿದ್ದರೆ ನೀವೂ ಕೂಡ ಅರ್ಜಿ ಸಲ್ಲಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
The Congress posted as many as 25 openings on its LinkedIn page, apparently for the first time the party has come up with so many openings for its social media team.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X