ಎನ್​ಐಆರ್​ಎಫ್ ರ್ಯಾಂಕಿಂಗ್ ಪಟ್ಟಿಯಲ್ಲಿ ರಾಜ್ಯದ 27 ಕಾಲೇಜುಗಳು

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಎನ್​ಐಆರ್​ಎಫ್ ವಿಭಾಗವು ಸೋಮವಾರ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ. ಒಟ್ಟು ಆರು ವಿಭಾಗದಲ್ಲಿ ರ್ಯಾಂಕಿಂಗ್ ಪಟ್ಟಿ ತಯಾರಿಸಿದ್ದು, ಬೆಂಗಳೂರಿನ ಐ ಐ ಎಸ್ ಸಿ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಅಲಂಕರಿಸಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಎನ್​ಐಆರ್​ಎಫ್ ವಿಭಾಗವು ಸೋಮವಾರ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ. ಒಟ್ಟು ಆರು ವಿಭಾಗದಲ್ಲಿ ರ್ಯಾಂಕಿಂಗ್ ಪಟ್ಟಿ ತಯಾರಿಸಿದ್ದು, ಬೆಂಗಳೂರಿನ ಐ ಐ ಎಸ್ ಸಿ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಅಲಂಕರಿಸಿದೆ.

ನ್ಯಾಷನಲ್ ಇನ್ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಂವರ್ಕ್ (ಎನ್ ಐ ಆರ್ ಫ್) ಮೂಲಕ ದೇಶದಲ್ಲಿನ ಶಿಕ್ಷಣ ಸಂಖ್ಯೆಗಳು ಮತ್ತು ವಿಶ್ವವಿದ್ಯಾಲಯಗಳ ಅಧ್ಯಯನ ನಡೆಸಿ ಎರಡನೇ ಬಾರಿಗೆ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಿದೆ

ಆರು ವಿಭಾಗಗಳಲ್ಲಿ ರ್ಯಾಂಕ್

ದೇಶದಲ್ಲಿನ ಉನ್ನತ ಶಿಕ್ಷಣವನ್ನು ಆರು ವಿಭಾಗಗಳನ್ನಾಗಿ ವಿಂಗಡಿಸಿ ಪ್ರತಿ ವಿಭಾಗದಲ್ಲೂ ಪ್ರತ್ಯೇಕ ರ್ಯಾಂಕ್ ನೀಡಲಾಗಿದೆ. ಸಮಗ್ರ, ಇಂಜಿನಿಯರಿಂಗ್, ಸಾಮಾನ್ಯ ಪದವಿ ಕಾಲೇಜು, ಮ್ಯಾನೇಜ್​ವೆುಂಟ್ ಸಂಸ್ಥೆಗಳು, ಫಾರ್ಮಸಿ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯ ಎಂಬ 6 ಪ್ರತ್ಯೇಕ ವಿಭಾಗಗಳಲ್ಲಿ ತಲಾ 100 ರ‍್ಯಾಂಕಿಂಗ್ ನೀಡಲಾಗಿದೆ.

ರಾಜ್ಯದ 27 ಕಾಲೇಜುಗಳಿಗೆ ರ್ಯಾಂಕ್

ಕಲಿಕಾ ವಿಧಾನ, ಕಲಿಕಾ ಸಂಪನ್ಮೂಲ, ಸಂಶೋಧನೆ, ಪದವೀಧರರ ಸಂಖ್ಯೆ, ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಹಾಗೂ ಸಂಸ್ಥೆ ಬಗೆಗಿನ ಅಭಿಪ್ರಾಯ ಆಧರಿಸಿ ರ‍್ಯಾಂಕಿಂಗ್ ನೀಡಲಾಗಿದೆ.

ದೇಶದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಶಿಕ್ಷಣ ಸಂಸ್ಥೆಗಳು

  1. ಸಮಗ್ರ: ಐ ಐ ಎಸ್ ಸಿ, ಬೆಂಗಳೂರು
  2. ಕಾಲೇಜುಗಳು: ಮಿರಾಂಡ ಹೌಸ್, ದೆಹಲಿ
  3. ವಿಶ್ವವಿದ್ಯಾಲಯಗಳು: ಐಐಎಸ್​ಸಿ, ಬೆಂಗಳೂರು
  4. ಮ್ಯಾನೇಜ್‌ಮೆಂಟ್: ಐಐಎಂ ಅಹಮದಾಬಾದ್, ಗುಜರಾತ್
  5. ಎಂಜಿನಿಯರಿಂಗ್‌: ಐಐಟಿ ಮದ್ರಾಸ್, ಚೆನ್ನೈ
  6. ಫಾರ್ಮಸಿ: ಜಮಿಯಾ ಕಾಲೇಜ್, ದೆಹಲಿ

ವಾರ್ಷಿಕ ರ್ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಹೆಚ್ಚು ಅನುದಾನ, ಹೆಚ್ಚಿನ ಸ್ವಾಯತ್ತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಿದೆ ಎಂದು ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ರಾಜ್ಯದ ಶಿಕ್ಷಣ ಸಂಸ್ಥೆ ಮತ್ತು ರ್ಯಾಂಕಿಂಗ್ ವಿವರ

ಕಳೆದ ಬಾರಿಯ ರ್ಯಾಂಕಿಂಗ್ ಪಟ್ಟಿಯಲ್ಲಿ ರಾಜ್ಯದ 25 ಶಿಕ್ಷಣ ಸಂಸ್ಥೆಗಳು ರ್ಯಾಂಕ್ ಪಡೆದಿದ್ದವು. ಈ ಬಾರಿ 2 ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದೆ.

ಒಟ್ಟಾರೆ ಶೈಕ್ಷಣಿಕ ಸಂಸ್ಥೆಗಳು

1. ಐಐಎಸ್​ಸಿ, ಬೆಂಗಳೂರು
11. ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್, ಬೆಂಗಳೂರು
25. ಐಐಎಂ, ಬೆಂಗಳೂರು
30. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್
57. ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾಲಯ
60. ಎನ್​ಐಟಿ, ಸುರತ್ಕಲ್
74. ಜೆಎಸ್​ಎಸ್ ವಿಶ್ವವಿದ್ಯಾಲಯ, ಮೈಸೂರು
100. ಕೆಎಲ್​ಇ ಅಕಾಡೆಮಿ ಫಾರ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್, ಬೆಳಗಾವಿ

ಪದವಿ ಕಾಲೇಜುಗಳು

29. ಸೇಂಟ್ ಜೋಸೆಫ್ ಕಾಲೇಜು, ಬೆಂಗಳೂರು
44. ಸೇಂಟ್ ಅಲೋಶಿಯಸ್ ಕಾಲೇಜು, ಮಂಗಳೂರು
71. ಎಸ್​ಡಿಎಂ ಕಾಲೇಜು, ಉಜಿರೆ
89. ಪಿ.ಸಿ.ಜಾಬಿನ್ ಕಾಲೇಜು, ಹುಬ್ಬಳ್ಳಿ
94. ಜೆ.ಜಿ.ವಾಣಿಜ್ಯ ಕಾಲೇಜು, ಧಾರವಾಡ
96. ಪ್ರೆಸಿಡೆನ್ಸಿ ಕಾಲೇಜು, ಬೆಂಗಳೂರು

ಇಂಜಿನಿಯರಿಂಗ್ ಕಾಲೇಜು

22. ಎನ್​ಐಟಿ, ಸುರತ್ಕಲ್ 43. ಮಣಿಪಾಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ್
45. ಎಂ.ಎಸ್.ರಾಮಯ್ಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
49. ಆರ್.ವಿ.ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು 52. ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು
72. ಸಿದ್ದಗಂಗಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು
86. ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು
95. ಬಿಎಂಎಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್, ಬೆಂಗಳೂರು

ಮ್ಯಾನೇಜ್ಮೆಂಟ್ ಶೈಕ್ಷಣಿಕ ಸಂಸ್ಥೆಗಳು

2. ಐಐಎಂ, ಬೆಂಗಳೂರು

3. ಕ್ಸೇವೀಯರ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ವೆುಂಟ್ ಆಂಡ್ ಎಂಟರ್​ಪ್ರಿನರ್​ಶಿಪ್, ಬೆಂಗಳೂರು

ವಿಶ್ವವಿದ್ಯಾಲಯಗಳು

1.ಐಐಎಸ್​ಸಿ, ಬೆಂಗಳೂರು
4. ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್, ಬೆಂಗಳೂರು
18. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್
36. ಮಾನಸ ಮೈಸೂರು ಗಂಗೋತ್ರಿ ವಿಶ್ವವಿದ್ಯಾಲಯ
45. ಜೆಎಸ್​ಎಸ್ ವಿಶ್ವವಿದ್ಯಾಲಯ, ಮೈಸೂರು
62. ಕೆಎಲ್​ಇ ಅಕಾಡೆಮಿ ಫಾರ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್, ಬೆಳಗಾವಿ
83. ನಿಟ್ಟೆ ವಿಶ್ವವಿದ್ಯಾಲಯ, ನಿಟ್ಟೆ
94. ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು

ಫಾರ್ಮಸಿ ಕಾಲೇಜುಗಳು

7. ಮಣಿಪಾಲ್ ಕಾಲೇಜ್ ಆಫ್ ಫಾರ್ವಸುಟಿಕಲ್ ಸೈನ್ಸ್, ಮಣಿಪಾಲ್
10. ಜೆಎಸ್​ಎಸ್ ಕಾಲೇಜ್ ಫಾರ್ಮಸಿ, ಮೈಸೂರು
27. ಎನ್​ಜಿಎಸ್​ಎಂ ಇನ್​ಸ್ಟಿಟ್ಯೂಟ್ ಆಫ್ ಫಾರ್ವಸುಟಿಕಲ್ ಸೈನ್ಸ್, ಮಂಗಳೂರು
37. ಕೆಎಲ್​ಇ ಅಕಾಡೆಮಿ ಫಾರ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್, ಬೆಳಗಾವಿ

ಇದನ್ನು ಗಮನಿಸಿ: ಬೆಂಗಳೂರಿನ ಐ ಐ ಎಸ್ ಸಿ ನಂಬರ್ ಒನ್

For Quick Alerts
ALLOW NOTIFICATIONS  
For Daily Alerts

English summary
The ranking of 100 institutes was conducted by the National Institutional Ranking Framework (NIRF) which comes under the MHRD.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X