ಯುಪಿಎಸ್​ಸಿ ಪರೀಕ್ಷೆಗಳ ಮಾರ್ಕ್ಸ್ ಲಿಸ್ಟ್ ಬಿಡುಗಡೆ: ಪ್ರಥಮ ರ್ಯಾಂಕ್ ಗಳಿಸಿದ ನಂದಿನಿ ಕೆ.ಆರ್ ಗಳಿಸಿದೆಷ್ಟು ಗೊತ್ತಾ?

ಐಎಎಸ್‌, ಐಎಫ್‌ಎಸ್, ಐಪಿಎಸ್‌ ಸೇರಿದಂತೆ ಕೇಂದ್ರ ನಾಗರಿಕ ಸೇವಾ ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿ ಪರೀಕ್ಷೆ ನಡೆಸುತ್ತದೆ. 2016ರ ಆಗಸ್ಟ್‌ನಲ್ಲಿ ಪೂರ್ವಭಾವಿ ಪರೀಕ್ಷೆ ನಡೆದಿತ್ತು.

2016ನೇ ಸಾಲಿನ ನಾಗರಿಕ ಸೇವೆಗಳಿಗಾಗಿ ನಡೆಸಿದ ಪರೀಕ್ಷೆಯ ಯಶಸ್ವಿ ಅಭ್ಯರ್ಥಿಗಳ ಅಂಕಗಳನ್ನು ಕೇಂದ್ರ ಲೋಕ ಸೇವಾ ಆಯೋಗ ಪ್ರಕಟಿಸಿದೆ. ಕಳೆದ ತಿಂಗಳು 31 ರಂದು ಪ್ರಕಟಗೊಂಡಿದ್ದ ಫಲಿತಾಂಶದಲ್ಲಿ ಕರ್ನಾಟಕದ ನಂದಿನಿ ಕೆ.ಆರ್ ಪ್ರಥಮ ರ್ಯಾಂಕ್ ಪಡೆದಿದ್ದರು.

ಒಟ್ಟು 2,025 ಅಂಕಗಳಲ್ಲಿ ನಂದಿನಿಯವರು 1,120 (927 ಮುಖ್ಯ ಪರೀಕ್ಷೆ ಮತ್ತು 193 ಸಂದರ್ಶನ) ಅಂಕಗಳನ್ನು ಗಳಿಸುವ ಮೂಲಕ ಶೇಕಡಾ 55.3 ಗಳಿಸಿದ್ದಾರೆ. ಎರಡನೇ ರ್ಯಾಂಕ್ ಗಳಿಸಿದ ಅನ್ಮೋಲ್ ಶೆರ್ ಸಿಂಗ್ ಬೇಡಿ 1,105 ಅಂಕಗಳು(ಶೇಕಡಾ 54.56), ಮೂರನೇ ರ್ಯಾಂಕ್ ಗಳಿಸಿದ ಗೋಪಾಲಕೃಷ್ಣ ರೊನಂಕಿ 1,101(ಶೇಕಡಾ 54.37) ಅಂಕಗಳನ್ನು ಪಡೆದಿದ್ದಾರೆ ಎಂದು ಯುಪಿಎಸ್ ಸಿ ತಿಳಿಸಿದೆ.

ಉನ್ನತ ರ್ಯಾಂಕ್ ಗಳಿಸಿದ ಅಭ್ಯರ್ಥಿಗಳಲ್ಲಿ ಕೊನೆಯವರು ಅಭಿಶೇಕ್ ಶ್ರೀವಾಸ್ತವ. ಅವರಿಗೆ 1,099 ಅಂಕಗಳು ದೊರಕಿವೆ. ಅವರಿಗೆ ಒಟ್ಟು 817 ಅಂದರೆ ಶೇಕಡಾ 40.34 ಅಂಕಗಳು ಲಭಿಸಿವೆ.

ಯುಪಿಎಸ್​ಸಿ ಪರೀಕ್ಷೆಗಳ ಮಾರ್ಕ್ಸ್ ಲಿಸ್ಟ್ ಬಿಡುಗಡೆ

ಈ ವರ್ಷ ಮೊದಲಿಗರಾಗಿ ಹೊರಹೊಮ್ಮಿದ ಕನ್ನಡತಿ ನಂದಿನಿ ಕೆ.ಆರ್ ಅವರಿಗೆ ಶೇಕಡಾ 55.3 ಅಂಕ ದೊರಕಿದೆ. ಅಂದರೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಎಷ್ಟು ಕಠಿಣ ನಿಲುವು ತಳೆಯಲಾಗುತ್ತದೆ ಎಂಬುದನ್ನು ತೋರಿಸುತ್ತದೆ.

ಮಾರ್ಕ್ಸ್ ಲಿಸ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಪರೀಕ್ಷಾ ವಿವರ

ಐಎಎಸ್‌, ಐಎಫ್‌ಎಸ್, ಐಪಿಎಸ್‌ ಸೇರಿದಂತೆ ಕೇಂದ್ರ ನಾಗರಿಕ ಸೇವಾ ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿ ಪರೀಕ್ಷೆ ನಡೆಸುತ್ತದೆ. 2016ರ ಆಗಸ್ಟ್‌ನಲ್ಲಿ ಪೂರ್ವಭಾವಿ ಪರೀಕ್ಷೆ ನಡೆದಿತ್ತು. 11,35,943 ಅಭ್ಯರ್ಥಿಗಳು ಪರೀಕ್ಷೆ ನೋಂದಾಯಿಸಿದ್ದರು. ಆದರೆ 4,59,659 ಜನರು ಪರೀಕ್ಷೆ ಬರೆದಿದ್ದರು. ಅದರಲ್ಲಿ 15,452 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. 2016ರ ಡಿಸೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಇದರಲ್ಲಿ ಅರ್ಹತೆ ಪಡೆದ 2,961 ಅಭ್ಯರ್ಥಿಗಳಿಗೆ 2017ರ ಮಾರ್ಚ್‌ ಮತ್ತು ಮೇ ತಿಂಗಳಿನಲ್ಲಿ ವ್ಯಕ್ತಿತ್ವ ಪರೀಕ್ಷೆ ನಡೆದಿತ್ತು.
www.upsc.gov.in ವೆಬ್​ಸೈಟ್​ನಲ್ಲಿ ಫಲಿತಾಂಶ ವೀಕ್ಷಿಸಬಹುದು.

ನಾಗರಿಕ ಸೇವೆಗಳಿಗೆ ಯುಪಿಎಸ್ ಸಿ ವರ್ಷದಲ್ಲಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸುತ್ತದೆ. ಪ್ರಾಥಮಿಕ, ಮುಖ್ಯ ಮತ್ತು ಸಂದರ್ಶನ. ಇಲ್ಲಿ ತೇರ್ಗಡೆಯಾದವರನ್ನು ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ವಿದೇಶಿ ಸೇವೆ(ಐಎಫ್ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಗಳಿಗೆ ನೇಮಕ ಮಾಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
The marks list for the recommended candidates into the civil services 2016 has been released by the UPSC. K R Nandini who has topped the exam has got 55.3 per cent marks, revealing the toughness of the exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X