ಮಕ್ಕಳ ಬಗ್ಗೆ ಇರಲಿ ಹೆಚ್ಚು ಕಾಳಜಿ!

ನಿಮ್ಮಿಷ್ಟದ ಪ್ರಕಾರ ಮಕ್ಕಳನ್ನು ರೂಪಿಸುವ ಬದಲು ಅವರಿಗೆ ಯಾವ ವಿಷಯದಲ್ಲಿ ಆಸಕ್ತಿ ಹೆಚ್ಚು ಎನ್ನುವುದನ್ನು ಗಮನಿಸಿ ಅವರ ಭವಿಷ್ಯ ರೂಪಿಸಬೇಕು

ಇಂದಿನ ಸ್ಮಾರ್ಟ್ ಯುಗದಲ್ಲಿ ಎಲ್ಲರು ತಮಗರಿವಿಲ್ಲದಂತೆಯೇ ಕಳೆದು ಹೋಗುತ್ತಿದ್ದಾರೆ. ಅದರಲ್ಲೂ ಪೋಷಕರು ಮತ್ತು ಮಕ್ಕಳ ನಡುವೆ ದೊಡ್ಡದೊಂದು ಗೋಡೆಯೇ ನಿರ್ಮಾಣವಾಗುತ್ತಿದೆ. ಮಕ್ಕಳ ಜೊತೆ ತಂದೆ ತಾಯಿ ಬೆರೆಯುವುದೇ ಕಡಿಮೆಯಾಗುತ್ತಿದೆ. ಇದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ತಂದೆ ತಾಯಿ ಮೇಲಿನ ಪ್ರೀತಿಯನ್ನು ಕಡಿಮೆ ಮಾಡುತ್ತಿದೆ. ನೀವು ನಿಮ್ಮ ಮಗುವಿನ ಹೆಚ್ಚು ಕಾಳಜಿ ವಹಿಸಲು ನಿಮ್ಮ ಮತ್ತು ಮಗುವಿನ ನಡುವೆ ಮತ್ತಷ್ಟು ವಾತ್ಸಲ್ಯ ನಿರ್ಮಾಣ ಮಾಡಲು ಇಲ್ಲಿದೆ ಕೆಲವು ಸಲಹೆಗಳು.

ಮಕ್ಕಳ ಬಗ್ಗೆ ಇರಲಿ ಹೆಚ್ಚು ಕಾಳಜಿ

ಮಕ್ಕಳಿಗೆ ನಿಮ್ಮ ಕಥೆಗಳನ್ನು ಹೇಳಿ

ಮಕ್ಕಳ ಜೊತೆ ಮಾತಾಡಲು ಅವರೊಂದಿಗೆ ಕಾಲಕಳೆಯಲು ಒಂದಿಷ್ಟು ಸಮಯ ತೆಗೆದಿಡಿ. ಆ ಸಂದರ್ಭದಲ್ಲಿ ಅವರಿಗೆ ಇಷ್ಟವಾಗುವ ರೀತಿ ಮಾತನಾಡುತ್ತ ನಿಮ್ಮ ಬಾಲ್ಯದ ಕತೆಗಳನ್ನು ರಂಜನೀಯವಾಗಿ ಹೇಳಿ, ಇದರಿಂದ ಮಕ್ಕಳಿಗೆ ನಿಮ್ಮ ಬಾಲ್ಯದ ದಿನಗಳ ಅರಿವಾಗುವುದರ ಜೊತೆಗೆ ತಮ್ಮ ಬಾಲ್ಯದ ಮಹತ್ವ ತಿಳಿಯುವುದು. ಕತೆ ಕೇಳುವ ಅಭ್ಯಾಸ ಬೆಳೆಯುವುದರ ಜೊತೆಗೆ ಅವರ ಕಲ್ಪನಾ ಶಕ್ತಿ ಕೂಡ ಹೆಚ್ಚುತ್ತದೆ. ಇನ್ನು ನೀವು ಮಕ್ಕಳೊಂದಿಗೆ ಈ ರೀತಿ ಬೆರೆಯುವುದರಿಂದ ಅವರಿಗೆ ನಿಮ್ಮ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚುತ್ತದೆ.

ನಿಮ್ಮ ಮಗುವಿಗೆ ನೀವೆ ಸಾಂತಾ

ಸಾಂತಾ ಕ್ಲಾಸ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಏಕೆಂದರೆ ಆತ ಮಕ್ಕಳಿಗೆ ಇಷ್ಟವಾಗುವ ಉಡುಗೊರೆ ನೀಡುತ್ತಾನೆಂದು.
ಅದೇ ರೀತಿ ನೀವೂ ಕೂಡ ನಿಮ್ಮ ಮಗುವಿನ ಪಾಲಿಗೆ ಸಾಂತಾ ಕ್ಲಾಸ್ ಆಗಬೇಕು. ಹಾಗೆಂದ ಮಾತ್ರಕ್ಕೆ ಎಲ್ಲವನ್ನು ಕೊಡಿಸಬೇಕೆಂದಿಲ್ಲ ನಿಮ್ಮ ಕೈಲಾದಷ್ಟನ್ನು ಅವರಿಗೆ ಸಮಯಕ್ಕೆ ತಕ್ಕ ಹಾಗೆ ನೀಡಿದರೆ ಮಕ್ಕಳನ್ನು ಸಂತೋಷದಿಂದ ಇಡಬಹುದು.
ಇನ್ನು ಉಡುಗೊರೆಗಳನ್ನು ಅವರಿಗೆ ತಿಳಿಯದಂತೆ ಅನಿರೀಕ್ಷಿತವಾಗಿ ನೀಡಿದರೆ ಮಕ್ಕಳ ಖುಷಿ ಹೇಳತೀರದು. ಅದರಲ್ಲೂ ಹುಟ್ಟುಹಬ್ಬ ಮತ್ತು ಇತರೆ ಪ್ರಮುಖ ದಿನಗಳಲ್ಲಿ ಅವರಿಗಿಷ್ಟವಾಗುವ ಉಡುಗೊರೆಗಳು ಅವರಿಗೆ ಹೆಚ್ಚು ಖುಷಿ ನೀಡುತ್ತವೆ.

ಜ್ಞಾನವೇ ಭಾಗ್ಯ

ನೀವು ನಿಮ್ಮ ಮಗುವಿನ ಭವಿಷ್ಯ ಹೇಗಿರಬೇಕೆಂದು ಬಯಸುತ್ತೀರೋ ಅದರ ಬಗ್ಗೆ ಹೆಚ್ಚಿನ ಜ್ಞಾನವನ್ನು ಅವರಲ್ಲಿ ತುಂಬುತ್ತ ಹೋಗಬೇಕು. ಆದರೆ ನಿಮ್ಮಿಷ್ಟದ ಪ್ರಕಾರ ಮಕ್ಕಳನ್ನು ರೂಪಿಸುವ ಬದಲು ಅವರಿಗೆ ಯಾವ ವಿಷಯದಲ್ಲಿ ಆಸಕ್ತಿ ಹೆಚ್ಚು ಎನ್ನುವುದನ್ನು ಗಮನಿಸಿ ಅವರ ಭವಿಷ್ಯ ರೂಪಿಸಬೇಕು. ಹಾಗೆ ಅವರಿಗೆ ಮಾಹಿತಿ ನೀಡಬೇಕೆಂದರೆ ಮೊದಲು ನಿಮ್ಮಲ್ಲಿ ಆ ವಿಷಯದ ಕುರಿತಾಗಿ ಹೆಚ್ಚು ಜ್ಞಾನವಿರಬೇಕಾಗುತ್ತದೆ. ಇದರಿಂದ ಮಕ್ಕಳ ಕಲಿಕೆ ಮತ್ತಷ್ಟು ಉತ್ತಮವಾಗುವುದು.

ಹೊರಗಿನ ಪ್ರಪಂಚದ ಪರಿಚಯವಿರಲಿ

ಕೋಣೆ ಮಕ್ಕಳು ಕೊಳೆತ್ವು.. ಬೀದಿ ಮಕ್ಕಳು ಬೆಳೆದ್ವು.. ಎನ್ನೋ ಗಾದೆ ಮಾತಿನಂತೆ ಮಕ್ಕಳು ಹೊರಗಿನ ಪ್ರಪಂಚದಲ್ಲಿ ಬೆಳೆದಷ್ಟು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಕ್ಕಳನ್ನು ಆಗಿಂದಾಗ್ಗೆ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಿ ಅವರಿಗೆ ಬಾಹ್ಯ ಪ್ರಪಂಚದ ಅರಿವನ್ನು ಮೂಡಿಸಬೇಕು. ಇದರಿಂದ ಅವರಿಗೆ ಬದುಕಿನ ವಾಸ್ತವದ ಅರಿವು ಮೂಡುವುದರ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚುತ್ತದೆ.

ನೀವೆ ನಿಮ್ಮ ಮಕ್ಕಳ ಬೆಸ್ಟ್ ಫ್ರೆಂಡ್

ಸಾಧ್ಯವಾದಷ್ಟು ನಿಮ್ಮ ಮಕ್ಕಳ ಜೊತೆ ಸಲಹೆಯಿಂದಲೇ ವರ್ತಿಸಿ. ಅವರ ಆಟಾಟೋಪಗಳಲ್ಲಿ ಭಾಗವಹಿಸಿ, ಅವರನ್ನು ಪ್ರತಿ ಬಾರಿಯು ಪ್ರೋತ್ಸಾಹಿಸಿ. ಒಬ್ಬ ಸ್ನೇಹಿತನಾಗಿ ಅವರ ಮನಸ್ಸನ್ನು ಅರಿಯುವ ಪ್ರಯತ್ನ ಮಾಡಿ. ಇದರಿಂದ ನಿಮ್ಮ ಮತ್ತು ನಿಮ್ಮ ಮಗುವಿನ ನಡುವೆ ಮುಕ್ತ ಹಾಗೂ ಆರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತದೆ.

ಅವರಿಗಿಷ್ಟವಾದ ಅಡುಗೆ ಮಾಡಿ

ಮಕ್ಕಳು ರುಚಿರುಚಿಯಾಗಿ ತಿನ್ನುವುದನ್ನು ಹೆಚ್ಚು ಬಯಸುತ್ತವೆ. ನೀವು ಅವರ ಮನಸ್ಸನ್ನು ಖುಷಿ ಪಡಿಸಲು ರುಚಿಯಾದ ಅವರಿಗಿಷ್ಟವಾದ ತಿನಿಸುಗಳನ್ನು ಮಾಡಿ, ಸಾಧ್ಯವಾದರೆ ಅವರಿಗಿಷ್ಟವಾದ ಅಡುಗೆ ಮಾಡುವಾಗ ಅವರನ್ನು ಜೊತೆಯಲ್ಲೇ ಇರಿಸಿಕೊಳ್ಳಿ. ಇದರಿಂದ ಅವರಿಗೂ ಅಡುಗೆ ಬಗ್ಗೆ ಆಸಕ್ತಿ ಹೆಚ್ಚಾಗುವುದು. ಹೊರಗಿನ ತಿಂಡಿಗಿಂತ ಮನೆಯಲ್ಲೇ ಅವರಿಗಿಷ್ಟವಾದದನ್ನು ತಯಾರಿಸುವುದು ಉತ್ತಮ.

ಈ ರೀತಿಯ ಅಭ್ಯಾಸವನ್ನು ನಿಮ್ಮ ಮಗುವಿನ ಜೊತೆಗೆ ನೀವು ಇರಿಸಿಕೊಂಡಿರಾದರೆ ನಿಜಕ್ಕೂ ನಿಮ್ಮದು ಸುಖಿ ಕುಟುಂಬ.
ನಿಮ್ಮ ಮತ್ತು ಮಗುವಿನ ನಡುವಿನ ಭಾಂದವ್ಯ ಎಂದೆಂದಿಗೂ ಉತ್ತಮವಾಗಿರುತ್ತದೆ. ಇಂದಿನ ಯಾಂತ್ರಿಕ ಜೀವನದಲ್ಲೂ ನೆಮ್ಮದಿಯಿಂದ ಇರಬಹುದು.

For Quick Alerts
ALLOW NOTIFICATIONS  
For Daily Alerts

English summary
Tips to build affection between you and your kids and to bring positive attitude in them.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X