ಸಿಇಟಿ ಪರೀಕ್ಷೆಗೆ ಹೋಗುವ ಮುನ್ನ ಎಚ್ಚರ ವಹಿಸಿ

ಪರೀಕ್ಷೆಗೆ ತೆರಳುವ ಮುನ್ನ ನೀವು ಹೇಗೆಲ್ಲ ತಯಾರಿ ಮಾಡಿಕೊಳ್ಳಬೇಕು, ಪರೀಕ್ಷಾ ಕೇಂದ್ರದಲ್ಲಿನ ವ್ಯವಸ್ಥೆ, ಪ್ರಶ್ನೆಪತ್ರಿಕೆ ಓದುವುದು ಬಗೆ, ಸರಿಯಾದ ಉತ್ತರ ಬರೆಯುವುದರ ಕುರಿತು ಒಂದಿಷ್ಟು ಸಲಹೆಗಳು ನಿಮಗಾಗಿ.

By Kavya

ಸಿಇಟಿ ಪರೀಕ್ಷೆಗಳು ಜುಲೈ 30 ಮತ್ತು 31 ರಂದು ರಾಜ್ಯಾದ್ಯಂತ ಆರಂಭವಾಗಲಿವೆ. ಇನ್ನು ಒಂದು ತಿಂಗಳು
ಉಳಿದಿದ್ದು ಪರೀಕ್ಷೆಯ ತಯಾರಿಯಲ್ಲಿರುವ ವಿದ್ಯಾರ್ಥಿಗಳಿಗಾಗಿ ಇಲ್ಲೊಂದಿಷ್ಟು ಕಿವಿಮಾತು.

ಪರೀಕ್ಷೆಗೆ ತೆರಳುವ ಮುನ್ನ ನೀವು ಹೇಗೆಲ್ಲ ತಯಾರಿ ಮಾಡಿಕೊಳ್ಳಬೇಕು, ಪರೀಕ್ಷಾ ಕೇಂದ್ರದಲ್ಲಿನ ವ್ಯವಸ್ಥೆ, ಪ್ರಶ್ನೆಪತ್ರಿಕೆ ಓದುವುದು ಬಗೆ, ಸರಿಯಾದ ಉತ್ತರ ಬರೆಯುವುದರ ಕುರಿತು ಒಂದಿಷ್ಟು ಸಲಹೆಗಳು ನಿಮಗಾಗಿ.

ಪರೀಕ್ಷೆಗೆ ಹೋಗುವ ಮುನ್ನ ಎಚ್ಚರ

ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರ ತಲುಪಲು ಸೂಚನೆ

ಪರೀಕ್ಷೆಗಳು 10:30ಕ್ಕೆ ಪ್ರಾರಂಭವಾಗಿಲಿದ್ದು ವಿದ್ಯಾರ್ಥಿಗಳು ಹತ್ತು ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸೂಚಿಸಲಾಗಿದೆ. ಪರೀಕ್ಷೆ ಪ್ರಾರಂಭಗೊಳ್ಳುವ ಮೊದಲನೇ ಬೆಲ್ ಆದ ತಕ್ಷಣ ಪರೀಕ್ಷಾ ಕೊಠಡಿ ಪ್ರವೇಶಿಸಿ ತಮ್ಮ ನಿಗದಿತ ಆಸನಗಳಲ್ಲಿ ಕುಳಿತುಕೊಳ್ಳಬೇಕು. ವಿಳಂಬವಾಗಿ ಬರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ.

KCET Exam 2020: ಪರೀಕ್ಷಾ ವೇಳಾಪಟ್ಟಿ ರಿಲೀಸ್KCET Exam 2020: ಪರೀಕ್ಷಾ ವೇಳಾಪಟ್ಟಿ ರಿಲೀಸ್

ಸಿಇಟಿ ಜುಲೈ 2020 ಪರೀಕ್ಷೆಯ ವೇಳಾಪಟ್ಟಿ:

*30/7/2020 ಗುರುವಾರ ಬೆಳಗ್ಗೆ 10.30ರಿಂದ 11.50ರ ವರೆಗೆ ಜೀವಶಾಸ್ತ್ರ (60 ಅಂಕ), ಮಧ್ಯಾಹ್ನ 2.30ರಿಂದ 3.50ರ ವರೆಗೆ ಗಣಿತ (60 ಅಂಕ).

*31/7/2020 ಶುಕ್ರವಾರ ಬೆಳಗ್ಗೆ 10.30ರಿಂದ 11.50ರ ವರೆಗೆ ಭೌತಶಾಸ್ತ್ರ (60 ಅಂಕ), ಮಧ್ಯಾಹ್ನ 2.30ರಿಂದ 3.50ರ ವರೆಗೆ ರಸಾಯನ ಶಾಸ್ತ್ರ (60 ಅಂಕಗಳು)

* 1/8/2020 ಶನಿವಾರ ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರ ವರೆಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ (50 ಅಂಕಗಳು)

ಈ ಮುಂಚೆ ಏಪ್ರಿಲ್ 22 ಮತ್ತು 23,2020ರಂದು ಸಿಇಟಿ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ ಮಾಡಲಾಗಿತ್ತು. ಆದರೆ ದೇಶದೆಲ್ಲೆಡೆ ಕೊರೋನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಕಾರಣ ಪರೀಕ್ಷೆಯನ್ನು ಮೂಂದೂಡಲಾಗಿತ್ತು. ಆದರೆ ಇದೀಗ ಹೊಸ ವೇಳಾಪಟ್ಟಿ ಪ್ರಕಟವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ ಅನ್ನು ಚೆಕ್ ಮಾಡತಕ್ಕದ್ದು.

ಇವುಗಳಿಗೆ ನಿಷೇಧ

ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಯಾವುದೇ ಆಧುನಿಕ ಇಲೆಕ್ಟ್ರಾನಿಕ್ಸ್ ಉಪಕರಣ, ಮೊಬೈಲ್ ಫೋನ್, ಬ್ಲೂಟೂಥ್, ಸ್ಲೈಡ್ ರೋಲ್ಸ್, ಕ್ಯಾಲ್‌ಕ್ಯೂಲೇಟರ್, ವಯರ್‌ಲೆಸ್‌ಸೆಟ್, ಪೇಪರ್‌ಚೀಟಿ, ಪುಸ್ತಕಗಳನ್ನು ತರುವುದನ್ನು ನಿಷೇಧಿಸಲಾಗಿದೆ.

ಗುರುತಿನ ಚೀಟಿ ಕಡ್ಡಾಯ

ಪ್ರವೇಶ ಪತ್ರದ ಜೊತೆಗೆ ಕಡ್ಡಾಯವಾಗಿ ಮಾನ್ಯತೆ ಇರುವ ಗುರುತು ಚೀಟಿ (ಕಾಲೇಜಿನ ಗುರುತುಚೀಟಿ, ಬಸ್‌ಪಾಸ್, ಡಿಎಲ್, ಪಾಸ್‌ಪೋರ್ಟ್, ಆಧಾರಕಾರ್ಡ್, ಪಾನ್‌ಕಾರ್ಡ್ ಇತ್ಯಾದಿ)ಯನ್ನು ತರಬೇಕು.

ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು

ಸಿಇಟಿ ಮಾತ್ರವಲ್ಲ ಯಾವುದೇ ಪರೀಕ್ಷೆಗಳನ್ನು ತೆಗೆದುಕೊಂಡರು ಮೊದಲು ಕೇಳಿರುವ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಗಳನ್ನು ಎರಡು ಮೂರು ಬಾರಿ ಓದಿ ಅರ್ಥೈಸಿಕೊಳ್ಳಬೇಕಾಗುತ್ತದೆ.
ಏಕೆಂದರೆ ಇಲ್ಲಿ ಪ್ರಶ್ನೆಗಳು ನೇರವಾಗಿರದೆ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲೆಂದೇ ವಿಶೇಷವಾಗಿ ರೂಪಿಸಲಾಗಿರುತ್ತದೆ. ಯಾರು ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಓದುತ್ತಾರೋ ಅವರಿಗೆ ಉತ್ತರಿಸುವುದು ಸುಲಭ. [ಒಎಂಆರ್ ಬಗ್ಗೆ ತಿಳಿಯಿರಿ]

ಉತ್ತರಗಳ ಆಯ್ಕೆಯಲ್ಲಿ ಎಚ್ಚರವಹಿಸಿ

ಪ್ರಶ್ನೆಗಳನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿರೋ ಅದರಷ್ಟೇ ಎಚ್ಚರವಾಗಿ ಉತ್ತರಗಳನ್ನು ಕೂಡ ಗಮನಿಸಬೇಕಾಗುತ್ತದೆ. ಬಹು ಆಯ್ಕೆಯ ವಿಧಾನವಾಗಿರುವುದರಿಂದ ನೋಡಲು ಒಂದೇ ರೀತಿ ಎನಿಸುವ ಆಯ್ಕೆಗಳನ್ನು ನೀಡಿರುತ್ತಾರೆ. ಅನೇಕ ಮಂದಿ ಎಡವುದು ಈ ಹಂತದಲ್ಲಿ ಮೇಲ್ನೋಟಕ್ಕೆ ಅವರಿಗೆ ತೋಚುವ ಉತ್ತರವನ್ನು ಗುರುತು ಮಾಡುತ್ತಾರೆ ಆದರೆ ಆ ಉತ್ತರದ ಸೂಕ್ಷ್ಮತೆಗಳನ್ನು ಅರಿಯುವುದಿಲ್ಲ, ಸ್ಪೆಲ್ಲಿಂಗ್ ವ್ಯತ್ಯಾಸ, ಒಂದೇ ರೀತಿಯ ಅರ್ಥ ನೀಡುವ ಪದಗಳು, ಸರಿ ಉತ್ತರಕ್ಕೆ ಹತ್ತಿರವಾದ ಶಬ್ದಗಳು ಹೀಗೆ ಎಲ್ಲವು ವಿದ್ಯಾರ್ಥಿಗಳ ದಾರಿ ತಪ್ಪಿಸಲೆಂದೇ ಕಾದಿರುತ್ತವೆ.

ಸರಿಯಾಗಿ ಗಮನಿಸದೆ ಆತುರದಲ್ಲಿ ಎಷ್ಟೋ ಬಾರಿ ಅನೇಕ ವಿದ್ಯಾರ್ಥಿಗಳು ಗೊತ್ತಿದ್ದು ಕೂಡ ತಪ್ಪು ಉತ್ತರ ಅಯ್ಕೆ ಮಾಡಿರುತ್ತಾರೆ. ಹೀಗಾಗಬಾರದೆಂದರೆ ಎರಡೆರಡು ಬಾರಿ ಉತ್ತರಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು.

For Quick Alerts
ALLOW NOTIFICATIONS  
For Daily Alerts

English summary
Here some useful tips to cet students before entering the exam hall.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X