ಒಎಂಆರ್ ತುಂಬಲು ಬಾಲ್ ಪೆನ್ ಬಳಸುವುದೇಕೆ?

ನಿಬ್ ಪೆನ್ ಬದಲಾಗಿ, ಬಾಲ್‍ಪಾಯಿಂಟ್ ಪೆನ್‍ಅನ್ನು ಬಳಸಿದಾಗ, ಅದು ಕೆಳಗಿನ ಹಾಳೆಯಲ್ಲಿರುವ ರಾಸಾಯನಿಕವನ್ನು ಕಪ್ಪು ಬಣ್ಣದ ಗುರುತಾಗಿ ಬದಲಾಯಿಸುವುದಕ್ಕೆ ಬೇಕಿರುವಷ್ಟು ಒತ್ತಡವನ್ನು ಹಾಕುತ್ತದೆ.

ಸಿಇಟಿ ಎಂದರೆ ಥಟ್ಟನೆ ನೆನಪಾಗುವುದು ಬಹು ಆಯ್ಕೆಯ ಪ್ರಶ್ನೆಗಳು ಮತ್ತು ಒಎಂಆರ್ ಪತ್ರಿಕೆ. ಒಎಂಆರ್ ಪತ್ರಿಕೆಯನ್ನು ತುಂಬುವುದು ಹೇಗೆ, ಬಾಲ್ ಪೆನ್ ಬಳಸುವ ಉದ್ದೇಶವೇನು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಬಾಲ್ ಪೆನ್ ಬಳಸುವ ಉದ್ದೇಶ

ವಿದ್ಯಾರ್ಥಿಗಳು, ಒಎಂಆರ್ ಉತ್ತರದ ಹಾಳೆಯ ಪಡಿಯಚ್ಚು ಅಥವಾ ಯಥಾಪ್ರತಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ನೀಡಲಾಗಿದೆ ಮತ್ತು ಒಎಂಆರ್ ಉತ್ತರ ಪತ್ರಿಕೆಯು ಎರಡು ಹಾಳೆಗಳ ಒಂದು ಸೆಟ್ ಆಗಿರುತ್ತದೆ.

ಮೇಲಿನ ಹಾಳೆಯಲ್ಲಿರುವ ವೃತ್ತದ ಮೇಲೆ ನೀವು ಷೇಡ್ ಮಾಡಿದಾಗ, ಅದರಿಂದ ಬೀಳುವ ಒತ್ತಡದಿಂದಾಗಿ, ಕೆಳಗಿನ ಹಾಳೆಯಲ್ಲಿರುವ ಅದೇ ವೃತ್ತದಲ್ಲಿ ಕಪ್ಪು ಬಣ್ಣದ ಗುರುತು ಮೂಡುತ್ತದೆ. ನಿಬ್‍ಪೆನ್ನನ್ನು ಬಳಸಿದರೆ, ಮೇಲಿನ ಹಾಳೆಯ ಮೇಲೆ ಬೀಳುವ ಒತ್ತಡದ ಪ್ರಮಾಣವು ಕೆಳಗಿನ ಹಾಳೆಯ ಮೇಲಿರುವ ರಾಸಾಯನಿಕವನ್ನು ಪಟು(ಆಕ್ಟಿವ್)ಗೊಳಿಸುವುದಕ್ಕೆ ಸಾಕಾಗುವುದಿಲ್ಲ.

ನಿಬ್ ಪೆನ್ ಬದಲಾಗಿ, ಬಾಲ್‍ಪಾಯಿಂಟ್ ಪೆನ್‍ಅನ್ನು ಬಳಸಿದಾಗ, ಅದು ಕೆಳಗಿನ ಹಾಳೆಯಲ್ಲಿರುವ ರಾಸಾಯನಿಕವನ್ನು ಕಪ್ಪು ಬಣ್ಣದ ಗುರುತಾಗಿ ಬದಲಾಯಿಸುವುದಕ್ಕೆ ಬೇಕಿರುವಷ್ಟು ಒತ್ತಡವನ್ನು ಹಾಕುತ್ತದೆ. ಈ ಕಾರಣಕ್ಕಾಗಿಯೇ, ನೀವು ನೀಲಿ/ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್‍ಅನ್ನು ಮಾತ್ರ ಬಳಸಬೇಕು.

ಬಾಲ್ ಪೆನ್ ಬಳಸುವುದೇಕೆ?

ಒಎಂಆರ್ ಉತ್ತರದ ಹಾಳೆಯ ಮೇಲ್ಭಾಗದಲ್ಲಿ ಬರೆಯುವಾಗ/ಷೇಡ್ ಮಾಡುವಾಗ ವಹಿಸಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು

ಪರೀಕ್ಷೆಯ ಎಲ್ಲಾ ನಾಲ್ಕು ಅವಧಿಗಳಲ್ಲಿ, ಮೊದಲ ಹತ್ತು ನಿಮಿಷಗಳನ್ನು, ಒಎಂಆರ್ ಉತ್ತರ ಹಾಳೆಗಳ ಮೇಲ್ಭಾಗದಲ್ಲಿ ಕೊಟ್ಟಿರುವ ಅಂಕಣಗಳಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರು, ಸಿಇಟಿ ಸಂಖ್ಯೆ, ಪ್ರಶ್ನೆ ಪುಸ್ತಿಕೆಯ ಆವೃತ್ತಿ ಸಂಕೇತ ಮತ್ತು ಕ್ರಮ ಸಂಖ್ಯೆಯಂಥ ವಿವರಗಳನ್ನು ಬರೆಯುವುದಕ್ಕಾಗಿ/ಷೇಡ್ ಮಾಡುವುದಕ್ಕಾಗಿ ನೀಡಲಾಗುವುದು.

ತಮ್ಮ ಸರಿಯಾದ ಸಿಇಟಿ ಸಂಖ್ಯೆ ಮತ್ತು ವರ್ಷನ್ ಕೋಡ್‍ಅನ್ನು ಬರೆಯದಿರುವ/ಷೇಡ್ ಮಾಡದಿರುವ ವಿದ್ಯಾರ್ಥಿಗಳ ಒಎಂಆರ್ ಉತ್ತರ ಹಾಳೆಗಳನ್ನು ಸ್ಕ್ಯಾನ್ ಮಾಡಲಾಗುವುದಿಲ್ಲ ಹಾಗೂ ಅಂಥ ವಿದ್ಯಾರ್ಥಿಗಳಿಗೆ ಯಾವುದೇ ರ್ಯಾಂಕನ್ನು ನೀಡಲಾಗುವುದಿಲ್ಲ.

ಹೆಸರು, ಸಿಇಟಿ ಸಂಖ್ಯೆ ಮತ್ತು ಪ್ರಶ್ನೆ ಪುಸ್ತಿಕೆಯ ವರ್ಷನ್ ಕೋಡ್‍ಗೆ ಸಂಬಂಧಪಟ್ಟ ನಮೂದುಗಳು ಅತ್ಯಂತ ನಿರ್ಣಾಯಕವಾದವುಗಳಾಗಿವೆ. ಆದ್ದರಿಂದ, ಒಎಂಆರ್ ಉತ್ತರದ ಹಾಳೆಯ ಮೇಲ್ಭಾಗದಲ್ಲಿ ಈ ಮೂರು ಬಾಬ್ತುಗಳನ್ನು ಬರೆಯುವಾಗ ಮತ್ತು ಷೇಡ್ ಮಾಡುವಾಗ ವಿದ್ಯಾರ್ಥಿಗಳು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.

ವಿದ್ಯಾರ್ಥಿಗಳು ಪರೀಕ್ಷೆಯ ಪ್ರತಿಯೊಂದು ಅವಧಿಯ ಆರಂಭದಲ್ಲಿ ನೀಡಲಾಗುವ ಆಪ್ಟಿಕಲ್ ಮಾರ್ಕ್ ರೀಡರ್ (ಒಎಂಆರ್) ಉತ್ತರ ಹಾಳೆಯ ಮೇಲೆ, ಸರಿಯಾದ ಉತ್ತರವನ್ನು ಗುರುತು ಮಾಡಬೇಕಿರುತ್ತದೆ. ಪ್ರತಿ ಪ್ರಶ್ನೆಯು, ಒಂದೇ ಒಂದು ಸರಿಯಾದ ಉತ್ತರವನ್ನು ಮಾತ್ರ ಹೊಂದಿರುತ್ತದೆ. ವಿದ್ಯಾರ್ಥಿಗಳು ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ನನ್ನು ಮಾತ್ರ ಬಳಸಿ, ಪ್ರಶ್ನೆ ಸಂಖ್ಯೆಗೆ ಸಂಬಂಧಿಸಿದಂತೆ ನೀಡಿರುವ ವೃತ್ತಗಳಲ್ಲಿ ಒಂದು ವೃತ್ತವನ್ನು ಮಾತ್ರ ಸಂಪೂರ್ಣವಾಗಿ ಷೇಡ್ ಮಾಡುವ ಮೂಲಕ ಸರಿಯಾದ ಉತ್ತರವನ್ನು ಗುರುತು ಮಾಡಬೇಕು.

ಕಪ್ಪು ಮತ್ತು ನೀಲಿ ಶಾಯಿಯ ಷೇಡ್‍ಗಳಿಗೆ ಸ್ಕ್ಯಾನರ್ ಎಷ್ಟರಮಟ್ಟಿಗೆ ಸೂಕ್ಷ್ಮ ಸಂವೇದಿಯಾಗಿರುತ್ತದೆ ಎಂದರೆ, ಒಎಂಆರ್ ಉತ್ತರ ಹಾಳೆಯ ವೃತ್ತದೊಳಗೆ ಅಪ್ಪಿತಪ್ಪಿ ಮಾಡಿರುವ ಸಣ್ಣಪುಟ್ಟ ಶಾಯಿ ಗುರುತನ್ನು ಅಥವಾ ನಿರುದ್ದೇಶವಾಗಿ ಆಗಿರುವ ಶಾಯಿಯ ಚುಕ್ಕಿಯನ್ನು ಸಹ, ಸ್ಕ್ಯಾನಿಂಗ್ ಸಮಯದಲ್ಲಿ, ತುಂಬಿರುವ/ ಷೇಡ್ ಮಾಡಿರುವ ಗುರುತು ಎಂದೇ ಪರಿಗಣಿಸುತ್ತದೆ. ಇದರಿಂದಾಗಿ, ವಿದ್ಯಾರ್ಥಿಯು ಅಂಕಗಳನ್ನು ಕಳೆದುಕೊಳ್ಳಬಹುದು. ಹಾಗಾಗಿ ಉತ್ತರ ಪತ್ರಿಕೆ ತುಂಬುವಾಗ ಎಚ್ಚರವಿರಲಿ. ಅನಗತ್ಯವಾಗಿ ಗುರುತು ಮಾಡಬೇಡಿ.

ಇದನ್ನು ಗಮನಿಸಿ: ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಪತ್ರಿಕೆ ಬಗ್ಗೆ ನಿಮಗೆಷ್ಟು ಗೊತ್ತು ?

For Quick Alerts
ALLOW NOTIFICATIONS  
For Daily Alerts

English summary
If a pen with a nib is used, the pressure on the top sheet will not be sufficient to activate the chemical on the bottom sheet. On the other hand, a ballpoint pen exerts sufficient pressure to convert the bottom sheet chemical into a dark spot.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X