2017 -18 ಸಾಲಿನ ಖಾಸಗಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ 8ನೇ ತರಗತಿಯ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಖಾಸಗಿ ಕಿರಿಯ ತಾಂತ್ರಿಕ ಶಾಲೆಗಳ ಪಟ್ಟಿ
- ಶ್ರೀ.ವಿಶ್ವಕರ್ಮ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್. ಶ್ರೀ ಕಾಳಿಕಾಂಬ ಕಿರಿಯ ತಾಂತ್ರಿಕ ಶಾಲೆ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ.
- ಬೆಳಗಾಂ ಇಂಟಿಗ್ರೇಟೆಡ್ ರೂರಲ್ ಡೆವೆಲಪ್ಮೆಂಟ್ ಸೊಸೈಟಿ ಕಿರಿಯ ತಾಂತ್ರಿಕ ಶಾಲೆ, ತುಕ್ಕಾನಹಟ್ಟಿ, ಗೋಕಾಕ್ ತಾಲ್ಲೂಕು, ಬೆಳಗಾವಿ ಜಿಲ್ಲೆ.
- ಶ್ರೀ ರೆವಣ್ಣಸಿದ್ದೇಶ್ವರ ಸೊಸೈಟಿ ಡಾ.ಎಂ.ಪಿ.ನಾಡಗೌಡ ಕಿರಿಯ ತಾಂತ್ರಿಕ ಶಾಲೆ, ಘಟಪ್ರಭ, ಗೋಕಾಕ್ ತಾಲ್ಲೂಕು, ಬೆಳಗಾಂ ಜಿಲ್ಲೆ.
- ಪ್ರಗತಿ ಎಜುಕೇಶನ್ ಟ್ರಸ್ಟ್ ಕಿರಿಯ ತಾಂತ್ರಿಕ ಶಾಲೆ , ಕಂಪ್ಲಿ, ಬಳ್ಳಾರಿ ಜಿಲ್ಲೆ.
- ಶ್ರೀದುರ್ಗಾಮಾತಾ ವಿದ್ಯಾಸಂಸ್ಥೆ ಕಿರಿಯ ತಾಂತ್ರಿಕ ಶಾಲೆ, ಹಿರೇಕೆರೂರು, ಹಾವೇರಿ ಜಿಲ್ಲೆ.
- ಕೆ.ಎಸ್ ಗೌಡ ಎಜುಕೇಷನ್ ಟ್ರಸ್ಟ್ ಕಿರಿಯ ತಾಂತ್ರಿಕ ಶಾಲೆ, ನಿಂತಿಕಲ್ಲ, ಸೂಳ್ಯ, ದ.ಕ.ಜಿಲ್ಲೆ.

ಖಾಸಗಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳ ವೈಶಿಷ್ಟ್ಯಗಳು
ಪ್ರೌಢಶಾಲೆಗಳಲ್ಲಿ ಬೋಧಿಸಲಾಗುವ ವಿಷಯಗಳೊಂದಿಗೆ ತಾಂತ್ರಿಕ ವಿಷಯಗಳನ್ನು ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ ಬೋಧಿಸಲಾಗುತ್ತದೆ.
- ತಾಂತ್ರಿಕ ವಿಷಯಗಳು
- ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
- ಇಂಜಿನಿಯರಿಂಗ್ ಡ್ರಾಯಿಂಗ್
- ಕಾರ್ಪೆಂಟ್ರಿ, ಫಿಟ್ಟಿಂಗ್ ಅಂಡ್ ಮೆಷಿನ್ ಶಾಪ್
- ಎಲೆಕ್ಟ್ರಿಕಲ್ ವೈರಿಂಗ್ ಅಂಡ್ ಫಿಟ್ಟಿಂಗ್
ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವ್ಯಾಸಂಗ ಮಾಡಿ ಎಸ್ ಎಸ್ ಎಲ್ ಸಿಯಲ್ಲಿ ಉತ್ತೀರ್ಣ ಹೊಂದಿದ ಅಭ್ಯರ್ಥಿಗಳಿಗಾಗಿಯೇ ಡಿಪ್ಲೊಮಾ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಮೀಸಲಾತಿ ದೊರೆಯಲಿದೆ. ಈ ಅಭ್ಯರ್ಥಿಗಳು ಪಿಯುಸಿ ವ್ಯಾಸಂಗಕ್ಕೂ ಅರ್ಹರಾಗಿರುತ್ತಾರೆ.
ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿನ ಶಿಕ್ಷಣ ಮಾಧ್ಯಮ
ಸಾಮಾನ್ಯ ವಿಷಯಗಳನ್ನು ಕನ್ನಡದಲ್ಲೂ ಹಾಗೂ ತಾಂತ್ರಿಕ ವಿಷಯಗಳನ್ನು ಇಂಗ್ಲಿಷ್ ನಲ್ಲಿ ಬೋಧಿಸಲಾಗುವುದು.
ಪ್ರವೇಶಕ್ಕಾಗಿ ಶಿಕ್ಷಣಾರ್ಹತೆ
ಅಭ್ಯರ್ಥಿಯು ಕರ್ನಾಟಕದ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಶಾಲೆಗಳಲ್ಲಿ 7ನೇ ತರಗತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ, ಇಂಗ್ಲಿಷ್ ಅಥವಾ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.
ಪ್ರವೇಶಕ್ಕಾಗಿ ಇತರೆ ಅರ್ಹತೆಗಳು
- ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು
- ಅರ್ಜಿ ಸ್ವೀಕರಿಸುವ ಹಿಂದಿನ ದಿನಾಂಕಕ್ಕೆ ಅಭ್ಯರ್ಥಿಯು ಕರ್ನಾಟಕದ ಯಾವುದೇ ಅಂಗೀಕೃತ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕನಿಷ್ಠ 5 ವರ್ಷಗಳ ವ್ಯಾಸಂಗ ಮಾಡಿರಬೇಕು.
ಪ್ರವೇಶ ಮುಗಿಸುವ ಅಂತಿಮ ದಿನಾಂಕ
- ಪ್ರವೇಶ ನಿಯಮಗಳು ಮತ್ತು ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಅನುಸರಿಸಿ ಅರ್ಹ ಅಭ್ಯರ್ಥಿಗಳಿಗೆ ದಿನಾಂಕ 31-05-2017 ರ ಒಳಗೆ ಪ್ರವೇಶ ಮುಗಿಯುವುದು.
- ಪ್ರವೇಶ ಮುಗಿದ ನಂತರ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ಮೂಲ ದಾಖಲೆಗಳು ಹಾಗೂ ಒಂದು ಝೆರಾಕ್ಸ್ ಪ್ರತಿಯೊಂದಿಗೆ ದಿನಾಂಕ 05-06-2017 ರೊಳಗೆ ಅನುಮೋದನೆಗಾಗಿ ನಿರ್ದೇಶನಾಲಯಕ್ಕೆ ಸಲ್ಲಿಸುವುದು.
ಅರ್ಜಿ ಸಲ್ಲಿಕೆ
ಅರ್ಜಿ ನಮೂನೆಯನ್ನು ಆಯಾ ಖಾಸಗಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಯ ಪ್ರಿನ್ಸಿಪಾಲರಿಂದ ಪಡೆಯಬಹುದಾಗಿದೆ.
ಎಂಟನೇ ತರಗತಿಗಳ ಪ್ರಾರಂಭ
ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿಗದಿಪಡಿಸಿರವ ಶೈಕ್ಷಣಿಕ ಕಾರ್ಯಕ್ರಮದನ್ವಯ ತರಗತಿಗಳನ್ನು ಪ್ರಾರಂಭವಾಗಲಿವೆ.
ಹೆಚ್ಚಿನ ವಿವಿರಗಳನ್ನು ಸಂಬಂಧಿಸಿದ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಯ ಪ್ರಿನ್ಸಿಪಾಲರಿಂದ ಪಡೆಯತಕ್ಕದ್ದು.


Click it and Unblock the Notifications











