ಡಿಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳಿಗೆ ದಾಖಲಾತಿ ಪ್ರಾರಂಭ

ಅಭ್ಯರ್ಥಿಗಳಿಂದ ಸ್ವೀಕೃತಿಯಾದ ಎಲ್ಲಾ ಆನ್ ಲೈನ್ ಅರ್ಜಿಗಳನ್ನು ವಿಶೇಷಾಧಿಕಾರಿಗಳ ಕಛೇರಿಯಲ್ಲಿ ಪರಿಶೀಲಿಸಿ ಅಭ್ಯರ್ಥಿಗಳು ಅರ್ಜಿಗಳಲ್ಲಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಮೆರಿಟ್ ಮತ್ತು ಮೀಸಲಾತಿ ಅನ್ವಯ ಆಯ್ಕೆ ಮಾಡಲಾಗುವುದು.

2017-18ನೇ ಸಾಲಿನ ಡಿಎಲ್.ಇಡಿ/ಡಿ.ಪಿ.ಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕೋರ್ಸ್ ವಿವರ

  • ಡಿಎಲ್.ಇಡಿ: ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಷನ್
  • ಡಿ.ಪಿ.ಇಡಿ: ಡಿಪ್ಲೊಮಾ ಇನ್ ಪಿಸಿಕಲ್ ಎಜುಕೇಷನ್

ವಿದ್ಯಾರ್ಹತೆ

  • ಡಿ.ಎಲ್.ಇಡಿ ಕೋರ್ಸಿಗೆ: ದ್ವಿತೀಯ ಪಿಯುಸಿ ಅಥವಾ ಹನ್ನೆರಡನೇ ತರಗತಿಯ ಪರೀಕ್ಷೆಯಲ್ಲಿ ಎಸ್.ಸಿ/ಎಸ್.ಟಿ/ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ 45% ಮತ್ತು ಇತರೆ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.
  • ಡಿ.ಪಿ.ಇಡಿ ಕೋರ್ಸಿಗೆ ಸೇರುವ ಎಲ್ಲಾ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ಹನ್ನೆರಡನೇ ತರಗತಿಯ ಪರೀಕ್ಷೆಯಲ್ಲಿ ಕನಿಷ್ಠ 45% ಅಂಕಗಳನ್ನು ಹಾಗೂ ಶಿಕ್ಷಣ ಇಲಾಖೆ ಅಥವಾ ವಿಶ್ವವಿದ್ಯಾಲಯ ಅಥವಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯೋಜಿಸಿರುವ ರಾಜ್ಯ ಅಥವಾ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಕನಿಷ್ಠ 40% ಅಂಕಗಳನ್ನು ಪಡೆದಿರಬೇಕು.

ಡಿಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸ್ ಪ್ರವೇಶಾತಿ

ಅರ್ಜಿ ಸಲ್ಲಿಕೆ

  • ಅಭ್ಯರ್ಥಿಗಳು ಆನ್-ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
  • ಅಭ್ಯರ್ಥಿಗಳು www.schooleducation.kar.nic.in ವೆಬ್ಸೈಟ್ ನಲ್ಲಿ ಕಾಣುವ "ONLINE APPLICATION FOR D.EL.Ed /DP.Ed ADMISSIONS FOR GOVERNMENT QUOTA SEATS: 2017-18" ಲಿಂಕನ್ನು ಕ್ಲಿಕ್ ಮಾಡಿ ಅದರಲ್ಲಿ ಭಿತ್ತರಿಸಲಾಗಿರುವ ಅರ್ಜಿ ನಮೂನೆಯಲ್ಲಿಯೇ ಅವರ ವಿವರಗಳನ್ನು ಭರ್ತಿ ಮಾಡಬೇಕು. ಈ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮುನ್ನ ಮೇಲ್ಕಂಡ ವೆಬ್ ಸೈಟ್‍ನಲ್ಲಿರುವ "Instruction" ಶೀರ್ಷಿಕೆಯಡಿಯಲ್ಲಿ ನೀಡಿರುವ ಸೂಚನೆಗಳನ್ನು ತಪ್ಪದೇ ಓದಿಕೊಂಡು ಜಾಗರೂಕತೆಯಿಂದ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಗಳು "ONLINE" ಮೂಲಕ ಅರ್ಜಿಗಳನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಭರ್ತಿ ಮಾಡತಕ್ಕದ್ದು. ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿಗಳನ್ನು ಭರ್ತಿ ಮಾಡುವುದು.
  • ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಸೂಚನೆ: ಅರ್ಜಿಗಳು ಈ ಹಿಂದಿನಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ ಲಭ್ಯವಿರುವುದಿಲ್ಲ.

ಪ್ರಮುಖ ದಿನಾಂಕಗಳು

  • ಆನ್ ಲ್ಯೆನ್ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕ ದಿನಾಂಕ: 26-05-2017 ರಿಂದ 18-06-2017ರ ರಾತ್ರಿ 12.00 ಗಂಟೆಯವರೆಗೆ.
  • ಅರ್ಜಿ ಶುಲ್ಕವನ್ನು ಬ್ಯಾಂಕ್‍ನಲ್ಲಿ ಪಾವತಿಸುವ ಕೊನೆಯ ದಿನಾಂಕ ದಿನಾಂಕ: 20-06-2017

ಅರ್ಜಿ ಶುಲ್ಕ

  • ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ.50-00
  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳು ರೂ.150-00

ಆಯ್ಕೆಯ ವಿಧಾನ

ಅಭ್ಯರ್ಥಿಗಳಿಂದ ಸ್ವೀಕೃತಿಯಾದ ಎಲ್ಲಾ ಆನ್ ಲೈನ್ ಅರ್ಜಿಗಳನ್ನು ವಿಶೇಷಾಧಿಕಾರಿಗಳ ಕಛೇರಿಯಲ್ಲಿ ಪರಿಶೀಲಿಸಿ ಅಭ್ಯರ್ಥಿಗಳು ಅರ್ಜಿಗಳಲ್ಲಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಮೆರಿಟ್ ಮತ್ತು ಮೀಸಲಾತಿ ಅನ್ವಯ ಆಯ್ಕೆಪಟ್ಟಿಗಳನ್ನು ಸಂಬಂಧಪಟ್ಟ ವ್ಯವಸ್ಥಾಪಕ ಕೇಂದ್ರಗಳಲ್ಲಿ ಪ್ರಕಟಿಸಲಾಗುವುದು ಹಾಗೂ ಇಲಾಖಾ ವೆಬ್ ಸೈಟ್ ವಿಳಾಸ www.schooleducation.kar.nic.in ರಲ್ಲಿ ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
ADMISSION PROCESS FOR DIPLOMA IN ELEMENTARY EDUCATION (D.EL.Ed) / DIPLOMA IN PHYSICAL EDUCATION ( D.P.Ed) COURSES FOR 2017-18
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+