ಬೆಂಗಳೂರು ಎನ್ ಎಸ್ ಡಿ ಸರ್ಟಿಫಿಕೇಷನ್ ಕೋರ್ಸ್ ಅರ್ಜಿ ಆಹ್ವಾನ

ಬೆಂಗಳೂರು ಕೇಂದ್ರದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಅಭಿನಯದಲ್ಲಿ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಶಿಕ್ಷಣ ನೀಡುತ್ತಿದ್ದು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ ಜೊತೆಗೆ ವೇತನ ನೀಡಲಾಗುವುದು. ಆಸಕ್ತರು ಜೂನ್ 30, 2017 ರೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಜುಲೈ 25 ರಿಂದ ತರಬೇತಿ ಆರಂಭವಾಗಲಿದ್ದು ಭಾರತದ ಯಾವುದೇ ಪ್ರದೇಶಕ್ಕೆ ಸಂಬಂಧಪಟ್ಟ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ದಕ್ಷಿಣ ಭಾರತದ (ಕರ್ನಾಟಕ, ಸೀಮಾಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಕೇಂದ್ರಾಢಳಿತ ಪ್ರದೇಶವಾದ ಲಕ್ಷದ್ವೀಪ, ಪುದುಚೆರಿ) ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಒಟ್ಟು ಸೀಟುಗಳು : 20

ಕಲಿಕಾ ಮಾಧ್ಯಮ

ದಕ್ಷಿಣ ಭಾರತದ ಭಾಷೆ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತರಬೇತಿ ನೀಡಲಾಗುವುದು. ಅಭ್ಯರ್ಥಿಗಳು ಪರೀಕ್ಷೆಯನ್ನು ಇಂಗ್ಲಿಷ್ ಅಥವಾ ಯಾವುದಾದರು ಒಂದು ದಕ್ಷಿಣ ಭಾರತದ ಭಾಷೆಯಲ್ಲಿ ಬರೆಯತಕ್ಕದ್ದು.

ಬೆಂಗಳೂರು ಎನ್ ಎಸ್ ಡಿ ಪ್ರವೇಶಾತಿ

 

ಅರ್ಹತೆ

ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರು ಪದವಿ ಹೊಂದಿರಬೇಕು ಕನಿಷ್ಠ ನಾಲ್ಕು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು ಜಾನಪದ, ಸಮುದಾಯ ಅಥವಾ ಇನ್ನಿತರೆ ಯಾವುದೇ ಕಲಾ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಆದ್ಯತೆ ನೀಡಲಾಗುವುದು

ವಯೋಮಿತಿ ಕನಿಷ್ಠ 18 ವರ್ಷ ಮತ್ತು ದಿನಾಂಕ 1-06-2017 ಕ್ಕೆ 30 ವರ್ಷ ಮೀರಿರಬಾರದು.

ಅರ್ಜಿ ಪ್ರಕ್ರಿಯೆ

ಅರ್ಜಿಗಳನ್ನು ಆನ್ಲೈನ್ ಆಥವಾ ಆಫ್ಲೈನ್ ಮೂಲಕ ಪಡೆಯಬಹುದಾಗಿದೆ. ಆನ್-ಲೈನ್ ಮುಲಕ ಅರ್ಜಿ ಸಲ್ಲಿಸುವವರು ವೆಬ್ಸೈಟ್ ವಿಳಾಸದ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು ಅಂಚೆ ಮೂಲಕ ಸಲ್ಲಿಸಬಹುದು. ಅಥವಾ ಆನ್-ಲೈನ್ ಅಡ್ಮಿಷನ್ ಮೂಲಕವೇ ಸಲ್ಲಿಸಬಹುದಾಗಿದೆ.

ಆನ್-ಲೈನ್ ಮೂಲಕ ಡೌನ್ಲೋಡ್ ಸಾಧ್ಯವಾಗದೇ ಇದ್ದಲ್ಲಿ ಬೆಂಗಳೂರಿನ ಎನ್ ಎಸ್ ಡಿ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ ಇಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:00 ರವರೆಗೂ ಪಡೆಯಬಹುದಾಗಿದೆ.

ಅರ್ಜಿ ಶುಲ್ಕ

ಅಭ್ಯರ್ಥಿಗಳು ಎನ್ ಎಸ್ ಡಿ ಬೆಂಗಳೂರು ಇವರ ಹೆಸರಿಗೆ ರೂ.150/- ರ ಡಿಡಿಯನ್ನು ಪಡೆದು ಧೃಡೀಕರಿಸಿದ ದಾಖಲೆಯ ಪ್ರತಿಗಳೊಂದಿಗೆ ದಿನಾಂಕ 30-06-2017 ರೊಳಗೆ ಎನ್ ಎಸ್ ಡಿ ವಿಳಾಸಕ್ಕೆ ಕಳುಹಿಸತಕ್ಕದ್ದು.

ಅರ್ಜಿ ಸಲ್ಲಿಸುವ ವಿಳಾಸ

ಭರ್ತಿ ಮಾಡಿದ ಅರ್ಜಿಗಳನ್ನು ಅಂಚೆ ಮೂಲಕ ಈ ವಿಳಾಸಕ್ಕೆ ಕಳುಹಿಸತಕ್ಕದ್ದು. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ ಕಲಾಗ್ರಾಮ, ಮಲ್ಲತ್ತಹಳ್ಳಿ (ಬೆಂಗಳೂರು ವಿಶ್ವವಿದ್ಯಾಲಯ ಹಿಂಬದಿ) ಬೆಂಗಳೂರು-56 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-06-2017

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಳ ಕಾರ್ಯಾಗಾರದ ಮೂಲಕ ಎರಡು ಹಂತಗಳಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು.

ಜುಲೈ 10,11 ಮತ್ತು 12ನೇ ತಾರೀಖಿನಂದು ಆಯ್ಕೆಗೆ ಆಡಿಷನ್ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು. ಕಾರ್ಯಾಗಾರದ ವೇಳೆ ಅಭ್ಯರ್ಥಿಗಳು ಮೂಲ ದಾಖಲಾತಿಗಳನ್ನು ಹಾಜರುಪಡಿಸತಕ್ಕದ್ದು.

 

ದೆಹಲಿಯ ಎನ್ ಎಸ್ ಡಿ ಯ ತಜ್ಞರ ಸಮಿತಿ ಅಭ್ಯರ್ಥಿಯ ಸಾಮರ್ಥ್ಯ ಪರೀಕ್ಷೆ ನಡೆಸಿ ಆಯ್ಕೆಮಾಡುತ್ತದೆ.

ವಿದ್ಯಾರ್ಥಿ ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.4500/- ವೇತನ ನೀಡಲಾಗುವುದು.

ದೈಹಿಕ ಸಾಮರ್ಥ್ಯ

ಆಯ್ಕೆಯಾದ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ nsd.gov.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
National school of Drama Bengaluru Centre invites application for admission to its residential one year certificate course in acting.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X