ಗಣಿತ ಎಂಬ ಸಬ್ಜೆಕ್ಟ್ ಬಹಳ ಪುರಾತನವಾದ ಸಬ್ಜೆಕ್ಟ್. ಇದರ ಐತಿಹಾಸಿಕ ಬೇರು ತುಂಬಾ ಸ್ಟ್ರಾಂಗ್ ಕೂಡಾ ಆಗಿದೆ. ನೀವು ಈ ಸಬ್ಜೆಕ್ಟ್ ನಲ್ಲಿ ಕೆರಿಯರ್ ಕೂಡಾ ರೂಪಿಸಿಕೊಳ್ಳಬಹುದು. ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಈ ಸಬ್ಜೆಕ್ಟ್ ನಲ್ಲಿ ಕೋರ್ಸ್ ಗಳು ಲಭ್ಯವಿದೆ.
ಅಮೆರಿಕಾದಲ್ಲಿ ಗಣಿತ ವಿಷಯದಲ್ಲಿ ನೀವು ಕೋರ್ಸ್ ಮಾಡಬೇಕು ಎಂದು ಅಂದುಕೊಂಡಿದ್ದರೆ ನಿಮಗೆ ಇದೀಗ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ. ಮ್ಯಾಥಮ್ಯಾಟಿಕ್ಸ್ ಕೋರ್ಸ್ ನೀಡುವ ಅಮೆರಿಕಾದ ಟಾಪ್ 10 ಕಾಲೇಜುಗಳ ಲಿಸ್ಟ್ ಇಲ್ಲಿದೆ ಮುಂದಕ್ಕೆ ಓದಿ.
ಈ ಕೋರ್ಸ್ ನೀವು ಮಾಡಿದ್ದಲ್ಲಿ ಕೆಲಸ ಗ್ಯಾರಂಟಿ...!?
ಮ್ಯಾಥಮ್ಯಾಟಿಕ್ಸ್ ಕೋರ್ಸ್ ನೀಡುವ ಅಮೆರಿಕಾದ ಟಾಪ್ 10 ಕಾಲೇಜುಗಳ ಲಿಸ್ಟ್:
- ಮ್ಯಾಸಚೂಸೆಟ್ಸ್ನ ತಂತ್ರಜ್ಞಾನ ಸಂಸ್ಥೆ (ಎಂಐಟಿ)
- ಹಾರ್ವರ್ಡ್ ವಿಶ್ವವಿದ್ಯಾಲಯ
- ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ
- ಪ್ರಿಂಸ್ಟನ್ ವಿಶ್ವವಿದ್ಯಾನಿಲಯ
- ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಬೆರ್ಕೆಲೇ (ಯುಸಿಬಿ)
- ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ. ಲಾಸ್ ಏಂಜೆಲಸ್
- ನ್ಯೂಯಾರ್ಕ್ ವಿಶ್ವವಿದ್ಯಾನಿಲಯ
- ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ
- ಕೊಲಂಬಿಯಾ ವಿಶ್ವವಿದ್ಯಾನಿಲಯ
- ಯಾಲೆ ವಿಶ್ವವಿದ್ಯಾನಿಲಯ
ಹೊಮಿಯೋಪತಿ ಕೆರಿಯರ್... ಏನೆಲ್ಲಾ ಲಾಭವಿದೆ ಗೊತ್ತಾ?
ಕಾಲೇಜುಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ:
ಮ್ಯಾಸಚೂಸೆಟ್ಸ್ನ ತಂತ್ರಜ್ಞಾನ ಸಂಸ್ಥೆ (ಎಂಐಟಿ):
ಮ್ಯಾಸಚೂಸೆಟ್ಸ್ನ ತಂತ್ರಜ್ಞಾನ ಸಂಸ್ಥೆಯು 1861 ರಲ್ಲಿ ಸ್ಥಾಪನೆಗೊಂಡಿದೆ. ಮ್ಯಾಸಚೂಸೆಟ್ಸ್ ನ ಕ್ಯಾಂಬ್ರಿಡ್ಜ್ ನಲ್ಲಿ ಈ ಸಂಸ್ಥೆ ನಿರ್ಮಾಣಗೊಂಡಿದೆ. ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2018 ರಲ್ಲಿ ಈ ಕಾಲೇಜು 7 ಬಾರಿ ಬೆಸ್ಟ್ ಯೂನಿವರ್ಸಿಟಿ ಎಂಬ ಕಿರೀಟ ತನ್ನದಾಗಿಸಿಕೊಂಡಿದೆ.
ಹಾರ್ವರ್ಡ್ ವಿಶ್ವವಿದ್ಯಾಲಯ:
ಈ ವಿಶ್ವವಿದ್ಯಾನಿಲಯ ಜಗತ್ತಿನ ಪುರಾನತ ವಿಶ್ವವಿದ್ಯಾನಿಯ ಮಾತ್ರವಲ್ಲ, ಇಲ್ಲಿನ ಶಿಕ್ಷಣ ಗುಣಮಟ್ಟದಿಂದ ಜನಪ್ರಿಯ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆ ಕೂಡಾ ಪಡೆದಿದೆ.
ಅಷ್ಟೇ ಅಲ್ಲ 1636 ರಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡಿದ್ದು, ಅತೀ ದೊಡ್ಡ ಕ್ಯಾಂಪಸ್ ಹೊಂದಿರುವ ಕಾಲೇಜು ಎಂಬ ಹೆಗ್ಗಳಿಕೆ ಕೂಡಾ ಪಡೆದಿದೆ.
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ:
ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2018 ರಲ್ಲಿ ಈ ಕಾಲೇಜು ಎರಡನೇ ಬೆಸ್ಟ್ ಕಾಲೇಜು ಎಂಬ ಹೆಸರು ಪಡೆದುಕೊಂಡಿದೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು 1885 ರಲ್ಲಿ ಸ್ಥಾಪನೆಗೊಂಡಿದ್ದು, ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ನಿರ್ಮಾಣಗೊಂಡಿದೆ.
ಪ್ರಿಂಸ್ಟನ್ ವಿಶ್ವವಿದ್ಯಾನಿಲಯ:
ಪ್ರಿಂಸ್ಟನ್ ವಿಶ್ವವಿದ್ಯಾನಿಲಯ ಅಮೇರಿಕಾದ ಪುರಾತನ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. 1976 ರಲ್ಲಿ ಈ ಕಾಲೇಜು ನಿರ್ಮಾಣಗೊಂಡಿದ್ದು, ಈ ಶಿಕ್ಷಣ ಸಂಸ್ಥೆಯಲ್ಲಿ ಗಣಿತ ಸಬ್ಜೆಕ್ಟ್ ಜತೆ ಇನ್ನಿತ್ತರ ಫೇಮಸ್ ಕೋರ್ಸ್ ಗಳಾದ ಆರ್ಟ್ಸ್, ಹುಮಾನಿಟೀಸ್ ಸಬ್ಜೆಕ್ಟ್ ಗಳು ಕೂಡಾ ಇವೆ.
ಟೂರಿಸ್ಟ್ ಗೈಡ್ ಆಗಿ ಕೆರಿಯರ್ ಹೇಗೆ ರೂಪಿಸಿಕೊಳ್ಳಬಹುದು!
ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಬೆರ್ಕೆಲೇ (ಯುಸಿಬಿ):
ಈ ಪಬ್ಲಿಕ್ ರಿಸರ್ಚ್ ವಿಶ್ವವಿದ್ಯಾನಿಲಯು 1868ರಲ್ಲಿ ಸ್ಥಾಪನೆಗೊಂಡಿದೆ. ಈ ಶಿಕ್ಷಣ ಸಂಸ್ಥೆಯಲ್ಲೂ ಕೂಡಾ ಗಣಿತ ಸಬ್ಜೆಕ್ಟ್ ಗೆ ಸಂಬಂಧಪಟ್ಟಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.
ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ. ಲಾಸ್ ಏಂಜೆಲಸ್:
ಈ ಯೂನಿವರ್ಸಿಟಿ ಲಾಸ್ ಏಂಜೆಲಸ್ ನಲ್ಲಿ ನಿರ್ಮಾಣಗೊಂಡಿದ್ದು, ಗಣಿತ ಸೇರಿದಂತೆ ಹಲವಾರು ಪ್ರಮುಖ ಸಬ್ಜೆಕ್ಟ್ ಗಳ ಉತ್ತಮ ಗುಣಮಟ್ಟದ ಕೋರ್ಸ್ ಇಲ್ಲಿ ನೀಡಲಾಗುತ್ತದೆ. ಸದ್ಯ 40,000 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ನ್ಯೂಯಾರ್ಕ್ ವಿಶ್ವವಿದ್ಯಾನಿಲಯ:
ನ್ಯೂಯಾರ್ಕ್ ನಲ್ಲಿ ನಿರ್ಮಿಸಲಾಗಿರುವ ಈ ವಿಶ್ವವಿದ್ಯಾನಿಲಯದಲ್ಲಿ ಗಣಿತ ಸಬ್ಜೆಕ್ಟ್ ಜತೆ ಅಕೌಂಟಿಂಗ್ ಮತ್ತು ಫೈನಾನ್ಸ್, ಕಾನೂನು ಮತ್ತು ಕಾನೂನು ಅಧ್ಯಯನ, ಸೈಕಾಲಾಜಿ ಮತ್ತು ಫಿಲೋಸಫಿ ಕೋರ್ಸ್ ಗಳು ಕೂಡಾ ನೀಡಲಾಗುತ್ತದೆ.
ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ:
ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಶಿಕ್ಷಣ ಸಂಸ್ಥೆಯು ಅಮೇರಿಕಾದ ಅಷ್ಟೇ ಅಲ್ಲ ಜಗತ್ತಿನ ಅತೀ ಸಣ್ಣ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಗಣಿತ ಜತೆ ಈ ಶಿಕ್ಷಣ ಸಂಸ್ಥೆ ಟೆಕ್ನಾಲಾಜಿ ಕೋರ್ಸ್ ಗಳನ್ನ ನೀಡುವುತ್ತಿದೆ.
ಕೊಲಂಬಿಯಾ ವಿಶ್ವವಿದ್ಯಾನಿಲಯ:
1754 ರಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡಿದೆ. ನ್ಯೂಯಾರ್ಕ್ ಸಿಟಿಯಲ್ಲಿ ಈ ಶಿಕ್ಷಣ ಸಂಸ್ಥೆ ನಿರ್ಮಿಸಲಾಗಿದೆ. ಇಲ್ಲಿ ನೀಡುವ ಪದವಿ ಶಿಕ್ಷಣದ ಗುಣಮಟ್ಟವು ಜಗತ್ತಿನಾದ್ಯಂತ ಫೇಮಸ್ ಆಗಿದೆ.
ಯಾಲೆ ವಿಶ್ವವಿದ್ಯಾನಿಲಯ:
260 ಎಕರೆ ಪ್ರದೇಶದಲ್ಲಿ ಈ ಯಾಲೆ ವಿಶ್ವವಿದ್ಯಾನಿಲಯ ಸ್ಥಾಪನೆಗೊಂಡಿದ್ದು, ಯುನಿಟೈಡ್ ಸ್ಟೇಟ್ಗಳಲ್ಲಿ ಇರುವ ಫೇಮಸ್ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ.