ಅಮೆರಿಕಾದಲ್ಲಿ ಮ್ಯಾಥಮ್ಯಾಟಿಕ್ಸ್ ಕೋರ್ಸ್ ಮಾಡಬೇಕು ಅಂದುಕೊಂಡಿದ್ದೀರಾ...ಬೆಸ್ಟ್ ಕಾಲೇಜುಗಳ ಲಿಸ್ಟ್!

ಅಮೆರಿಕಾದಲ್ಲಿ ಗಣಿತ ವಿಷಯದಲ್ಲಿ ನೀವು ಕೋರ್ಸ್ ಮಾಡಬೇಕು ಎಂದು ಅಂದುಕೊಂಡಿದ್ದರೆ ನಿಮಗೆ ಇದೀಗ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ. ಮ್ಯಾಥಮ್ಯಾಟಿಕ್ಸ್ ಕೋರ್ಸ್ ನೀಡುವ ಅಮೆರಿಕಾದ ಟಾಪ್ 10 ಕಾಲೇಜುಗಳ ಲಿಸ್ಟ್ ಇಲ್ಲಿದೆ ಮುಂದಕ್ಕೆ ಓದಿ

ಗಣಿತ ಎಂಬ ಸಬ್‌ಜೆಕ್ಟ್ ಬಹಳ ಪುರಾತನವಾದ ಸಬ್‌ಜೆಕ್ಟ್. ಇದರ ಐತಿಹಾಸಿಕ ಬೇರು ತುಂಬಾ ಸ್ಟ್ರಾಂಗ್ ಕೂಡಾ ಆಗಿದೆ. ನೀವು ಈ ಸಬ್‌ಜೆಕ್ಟ್ ನಲ್ಲಿ ಕೆರಿಯರ್ ಕೂಡಾ ರೂಪಿಸಿಕೊಳ್ಳಬಹುದು. ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಈ ಸಬ್‌ಜೆಕ್ಟ್ ನಲ್ಲಿ ಕೋರ್ಸ್ ಗಳು ಲಭ್ಯವಿದೆ.

ಅಮೆರಿಕಾದಲ್ಲಿ ಮ್ಯಾಥಮ್ಯಾಟಿಕ್ಸ್ ಕೋರ್ಸ್ ಮಾಡಬೇಕು ಅಂದುಕೊಂಡಿದ್ದೀರಾ...ಬೆಸ್ಟ್ ಕಾಲೇಜುಗಳ ಲಿಸ್ಟ್!

ಅಮೆರಿಕಾದಲ್ಲಿ ಗಣಿತ ವಿಷಯದಲ್ಲಿ ನೀವು ಕೋರ್ಸ್ ಮಾಡಬೇಕು ಎಂದು ಅಂದುಕೊಂಡಿದ್ದರೆ ನಿಮಗೆ ಇದೀಗ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ. ಮ್ಯಾಥಮ್ಯಾಟಿಕ್ಸ್ ಕೋರ್ಸ್ ನೀಡುವ ಅಮೆರಿಕಾದ ಟಾಪ್ 10 ಕಾಲೇಜುಗಳ ಲಿಸ್ಟ್ ಇಲ್ಲಿದೆ ಮುಂದಕ್ಕೆ ಓದಿ.

<strong>ಈ ಕೋರ್ಸ್ ನೀವು ಮಾಡಿದ್ದಲ್ಲಿ ಕೆಲಸ ಗ್ಯಾರಂಟಿ...!?</strong>ಈ ಕೋರ್ಸ್ ನೀವು ಮಾಡಿದ್ದಲ್ಲಿ ಕೆಲಸ ಗ್ಯಾರಂಟಿ...!?

ಮ್ಯಾಥಮ್ಯಾಟಿಕ್ಸ್ ಕೋರ್ಸ್ ನೀಡುವ ಅಮೆರಿಕಾದ ಟಾಪ್ 10 ಕಾಲೇಜುಗಳ ಲಿಸ್ಟ್:

  • ಮ್ಯಾಸಚೂಸೆಟ್ಸ್ನ ತಂತ್ರಜ್ಞಾನ ಸಂಸ್ಥೆ (ಎಂಐಟಿ)
  • ಹಾರ್ವರ್ಡ್ ವಿಶ್ವವಿದ್ಯಾಲಯ
  • ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ
  • ಪ್ರಿಂಸ್ಟನ್ ವಿಶ್ವವಿದ್ಯಾನಿಲಯ
  • ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಬೆರ್ಕೆಲೇ (ಯುಸಿಬಿ)
  • ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ. ಲಾಸ್ ಏಂಜೆಲಸ್
  • ನ್ಯೂಯಾರ್ಕ್ ವಿಶ್ವವಿದ್ಯಾನಿಲಯ
  • ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ
  • ಕೊಲಂಬಿಯಾ ವಿಶ್ವವಿದ್ಯಾನಿಲಯ
  • ಯಾಲೆ ವಿಶ್ವವಿದ್ಯಾನಿಲಯ

ಹೊಮಿಯೋಪತಿ ಕೆರಿಯರ್... ಏನೆಲ್ಲಾ ಲಾಭವಿದೆ ಗೊತ್ತಾ?

ಕಾಲೇಜುಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ:

ಮ್ಯಾಸಚೂಸೆಟ್ಸ್ನ ತಂತ್ರಜ್ಞಾನ ಸಂಸ್ಥೆ (ಎಂಐಟಿ):

ಮ್ಯಾಸಚೂಸೆಟ್ಸ್ನ ತಂತ್ರಜ್ಞಾನ ಸಂಸ್ಥೆಯು 1861 ರಲ್ಲಿ ಸ್ಥಾಪನೆಗೊಂಡಿದೆ. ಮ್ಯಾಸಚೂಸೆಟ್ಸ್ ನ ಕ್ಯಾಂಬ್ರಿಡ್ಜ್ ನಲ್ಲಿ ಈ ಸಂಸ್ಥೆ ನಿರ್ಮಾಣಗೊಂಡಿದೆ. ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2018 ರಲ್ಲಿ ಈ ಕಾಲೇಜು 7 ಬಾರಿ ಬೆಸ್ಟ್ ಯೂನಿವರ್ಸಿಟಿ ಎಂಬ ಕಿರೀಟ ತನ್ನದಾಗಿಸಿಕೊಂಡಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯ:

ಈ ವಿಶ್ವವಿದ್ಯಾನಿಲಯ ಜಗತ್ತಿನ ಪುರಾನತ ವಿಶ್ವವಿದ್ಯಾನಿಯ ಮಾತ್ರವಲ್ಲ, ಇಲ್ಲಿನ ಶಿಕ್ಷಣ ಗುಣಮಟ್ಟದಿಂದ ಜನಪ್ರಿಯ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆ ಕೂಡಾ ಪಡೆದಿದೆ.

ಅಷ್ಟೇ ಅಲ್ಲ 1636 ರಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡಿದ್ದು, ಅತೀ ದೊಡ್ಡ ಕ್ಯಾಂಪಸ್ ಹೊಂದಿರುವ ಕಾಲೇಜು ಎಂಬ ಹೆಗ್ಗಳಿಕೆ ಕೂಡಾ ಪಡೆದಿದೆ.

ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ:

ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2018 ರಲ್ಲಿ ಈ ಕಾಲೇಜು ಎರಡನೇ ಬೆಸ್ಟ್ ಕಾಲೇಜು ಎಂಬ ಹೆಸರು ಪಡೆದುಕೊಂಡಿದೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು 1885 ರಲ್ಲಿ ಸ್ಥಾಪನೆಗೊಂಡಿದ್ದು, ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ನಿರ್ಮಾಣಗೊಂಡಿದೆ.

ಪ್ರಿಂಸ್ಟನ್ ವಿಶ್ವವಿದ್ಯಾನಿಲಯ:

ಪ್ರಿಂಸ್ಟನ್ ವಿಶ್ವವಿದ್ಯಾನಿಲಯ ಅಮೇರಿಕಾದ ಪುರಾತನ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. 1976 ರಲ್ಲಿ ಈ ಕಾಲೇಜು ನಿರ್ಮಾಣಗೊಂಡಿದ್ದು, ಈ ಶಿಕ್ಷಣ ಸಂಸ್ಥೆಯಲ್ಲಿ ಗಣಿತ ಸಬ್‌ಜೆಕ್ಟ್ ಜತೆ ಇನ್ನಿತ್ತರ ಫೇಮಸ್ ಕೋರ್ಸ್ ಗಳಾದ ಆರ್ಟ್ಸ್, ಹುಮಾನಿಟೀಸ್ ಸಬ್‌ಜೆಕ್ಟ್ ಗಳು ಕೂಡಾ ಇವೆ.

<strong>ಟೂರಿಸ್ಟ್ ಗೈಡ್ ಆಗಿ ಕೆರಿಯರ್ ಹೇಗೆ ರೂಪಿಸಿಕೊಳ್ಳಬಹುದು!</strong>ಟೂರಿಸ್ಟ್ ಗೈಡ್ ಆಗಿ ಕೆರಿಯರ್ ಹೇಗೆ ರೂಪಿಸಿಕೊಳ್ಳಬಹುದು!

ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಬೆರ್ಕೆಲೇ (ಯುಸಿಬಿ):

ಈ ಪಬ್ಲಿಕ್ ರಿಸರ್ಚ್ ವಿಶ್ವವಿದ್ಯಾನಿಲಯು 1868ರಲ್ಲಿ ಸ್ಥಾಪನೆಗೊಂಡಿದೆ. ಈ ಶಿಕ್ಷಣ ಸಂಸ್ಥೆಯಲ್ಲೂ ಕೂಡಾ ಗಣಿತ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.

ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ. ಲಾಸ್ ಏಂಜೆಲಸ್:

ಈ ಯೂನಿವರ್ಸಿಟಿ ಲಾಸ್ ಏಂಜೆಲಸ್ ನಲ್ಲಿ ನಿರ್ಮಾಣಗೊಂಡಿದ್ದು, ಗಣಿತ ಸೇರಿದಂತೆ ಹಲವಾರು ಪ್ರಮುಖ ಸಬ್‌ಜೆಕ್ಟ್ ಗಳ ಉತ್ತಮ ಗುಣಮಟ್ಟದ ಕೋರ್ಸ್ ಇಲ್ಲಿ ನೀಡಲಾಗುತ್ತದೆ. ಸದ್ಯ 40,000 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ನ್ಯೂಯಾರ್ಕ್ ವಿಶ್ವವಿದ್ಯಾನಿಲಯ:

ನ್ಯೂಯಾರ್ಕ್ ನಲ್ಲಿ ನಿರ್ಮಿಸಲಾಗಿರುವ ಈ ವಿಶ್ವವಿದ್ಯಾನಿಲಯದಲ್ಲಿ ಗಣಿತ ಸಬ್‌ಜೆಕ್ಟ್ ಜತೆ ಅಕೌಂಟಿಂಗ್ ಮತ್ತು ಫೈನಾನ್ಸ್, ಕಾನೂನು ಮತ್ತು ಕಾನೂನು ಅಧ್ಯಯನ, ಸೈಕಾಲಾಜಿ ಮತ್ತು ಫಿಲೋಸಫಿ ಕೋರ್ಸ್ ಗಳು ಕೂಡಾ ನೀಡಲಾಗುತ್ತದೆ.

ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ:

ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಶಿಕ್ಷಣ ಸಂಸ್ಥೆಯು ಅಮೇರಿಕಾದ ಅಷ್ಟೇ ಅಲ್ಲ ಜಗತ್ತಿನ ಅತೀ ಸಣ್ಣ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಗಣಿತ ಜತೆ ಈ ಶಿಕ್ಷಣ ಸಂಸ್ಥೆ ಟೆಕ್ನಾಲಾಜಿ ಕೋರ್ಸ್ ಗಳನ್ನ ನೀಡುವುತ್ತಿದೆ.

ಕೊಲಂಬಿಯಾ ವಿಶ್ವವಿದ್ಯಾನಿಲಯ:

1754 ರಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡಿದೆ. ನ್ಯೂಯಾರ್ಕ್ ಸಿಟಿಯಲ್ಲಿ ಈ ಶಿಕ್ಷಣ ಸಂಸ್ಥೆ ನಿರ್ಮಿಸಲಾಗಿದೆ. ಇಲ್ಲಿ ನೀಡುವ ಪದವಿ ಶಿಕ್ಷಣದ ಗುಣಮಟ್ಟವು ಜಗತ್ತಿನಾದ್ಯಂತ ಫೇಮಸ್ ಆಗಿದೆ.

ಯಾಲೆ ವಿಶ್ವವಿದ್ಯಾನಿಲಯ:

260 ಎಕರೆ ಪ್ರದೇಶದಲ್ಲಿ ಈ ಯಾಲೆ ವಿಶ್ವವಿದ್ಯಾನಿಲಯ ಸ್ಥಾಪನೆಗೊಂಡಿದ್ದು, ಯುನಿಟೈಡ್ ಸ್ಟೇಟ್‌ಗಳಲ್ಲಿ ಇರುವ ಫೇಮಸ್ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ.

<strong>ಬೆಂಗಳೂರು ನಗರದಲ್ಲಿ ಇರುವ ಫೇಮಸ್ ಇಂಜಿನೀಯರಿಂಗ್ ಕಾಲೇಜುಗಳು</strong>ಬೆಂಗಳೂರು ನಗರದಲ್ಲಿ ಇರುವ ಫೇಮಸ್ ಇಂಜಿನೀಯರಿಂಗ್ ಕಾಲೇಜುಗಳು

For Quick Alerts
ALLOW NOTIFICATIONS  
For Daily Alerts

English summary
Mathematics is one of the oldest subjects with strong historical roots. If you wish to pursue numbers for your graduate degree, the career options that follow will be lucrative. Mathematics is the most common subject offered in the world's best universities across the world including the United States. Most of the USA universities compete with the United Kingdom in rankings specifically in the mathematics subject.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X