ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿದತ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ 2017-18 ನೇ ಸಾಲಿಗೆ ಪ್ರಥಮ ಡಿಪ್ಲೊಮಾ ಪ್ರವೇಶಾತಿಯನ್ನು "ಆನ್-ಲೈನ್ ಇಂಟರಾಕ್ಟಿವ್ ಕೌನ್ಸಿಲಿಂಗ್" ಮೂಲಕ ನಡೆಸುವ ಕುರಿತಂತೆ ಪೂರ್ಣಾವಧಿಯ ಡಿಪ್ಲೊಮಾ ಇಂಜಿನಿಯರಿಂಗ್ ಮತ್ತು ನಾನ್ ಇಂಜಿನಿಯರಿಂಗ್ ಡಿಪ್ಲೊಮಾ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.
ಪ್ರಸಕ್ತ ಸಾಲಿನಿಂದ ಜಾರಿಗೆ ಬರುವಂತೆ ತಾಂತ್ರಿಕ ಶಿಕ್ಷಣ ಇಲಾಖೆಯ ವತಿಯಿಂದ ಇಂಟರಾಕ್ಟಿವ್ ಕೌನ್ಸಿಲಿಂಗ್ ಮುಖಾಂತರ ಅಭ್ಯರ್ಥಿಯು ಸ್ವ-ಇಚ್ಛೆಯಿಂದ ರಾಜ್ಯದ ಯಾವುದೇ ಸರ್ಕಾರಿ/ಅನುದಾನಿತ/ಖಾಸಗಿ ಪಾಲಿಟೆಕ್ನಿಕ್ ಮತ್ತು ಕೋರ್ಸನ್ನು ಆಯ್ಕೆ ಮಾಡಿಕೊಳ್ಳುಲು ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ

ಇಂಜಿನಿಯರಿಂಗ್ ಕೋರ್ಸುಗಳಿಗೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಒಟ್ಟಾರೆ ಶೇ.35 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ನಾನ್ ಇಂಜಿನಿಯರಿಂಗ್ ಕೋರ್ಸುಗಳಿಗೆ
ಕಮರ್ಷಿಯಲ್ ಪ್ರಾಕ್ಟಿಸ್ ಮತ್ತು ಅಪೇರಲ್ ಡಿಸೈನ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ ಕೋರ್ಸುಗಳಿಗೆ:
- ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಒಟ್ಟಾರೆ ಶೇ.35 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
- ದ್ವಿತೀಯ ಪಿಯುಸಿಗೆ ಸಮಾನವಾದ ಕೋರ್ಸುಗಳ ಪ್ರವೇಶಕ್ಕೆ ಇರಬೇಕಾದ ಕನಿಷ್ಠ ವಿದ್ಯಾರ್ಹತೆ
- ಕರ್ನಾಟಕ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಒಟ್ಟಾರೆ ಶೇ.35 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ಪ್ರವೇಶಕ್ಕೆ ಇರಬೇಕಾದ ಇತರೆ ಅರ್ಹತೆಗಳು
ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು ಹಾಗೂ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಕರ್ನಾಟಕದಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯನ್ನೊಳಗೊಂಡ ಕನಿಷ್ಠ ಐದು ವರ್ಷಗಳ ವ್ಯಾಸಂಗದ ಷರತ್ತಿನಿಂದ ಕೆಲವು ಗುಂಪಿನ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಅರ್ಜಿಯ ಜೊತೆ ನೀಡಲಾಗಿರುವ ಸೂಚನೆಗಳನ್ನು ಓದುವುದು ಅಥವಾ ಸಂಬಂಧಿಸಿದ ಪಾಲಿಟೆಕ್ನಿಕ್ ಪ್ರಾಚಾರ್ಯರಿಂದ ಮಾಹಿತಿ ಪಡೆಯುವುದು.
ಅರ್ಜಿ ಸಲ್ಲಿಕೆ
ಪ್ರಥಮ ಡಿಪ್ಲೊಮಾ ಪ್ರವೇಶ ಬಯಸುವ ಅಭ್ಯರ್ಥಿಗಳು ದಿನಾಂಕ 10-05-2017 ರಿಂದ 05-06-2017 ರವರೆಗೆ ಅರ್ಜಿ ನಮೂನೆ 3 ಹಾಗೂ ಮಾಹಿತಿ ಪುಸ್ತಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಭರ್ತಿ ಮಾಡುವುದು.
ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನಿಗದಿಪಡಿಸಿದ್ದ ವೇಳಾಪಟ್ಟಿಯನುಸಾರವಾಗಿ ಅರ್ಜಿ ನೋಂದಣಿ ಶುಲ್ಕವನ್ನು ಕರ್ನಾಟಕ ರಾಜ್ಯದ ಯಾವುದೇ ಎಸ್ ಬಿ ಐ ಶಾಖೆಗಳಲ್ಲಿ ಬ್ಯಾಂಕ್ ಚಲನ್ ಪಡೆದು ಸರ್ಕಾರಿ ಅಥವಾ ಅನುದಾನಿತ ಕಾಲೆಜುಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿಸಿ. ಆನ್-ಲೈನ್ ಅರ್ಜಿಯ ಮುದ್ರಿತ ಪ್ರತಿ ಮತ್ತು ಸ್ವೀಕೃತಿ ಚೀಟಿ ಪಡೆಯುವುದು.
ಅರ್ಜಿ ಶುಲ್ಕ ಪಾವತಿಸುವ ಬ್ಯಾಂಕ್ ಖಾತೆ ವಿವರ
ಖಾತೆಯ ಹೆಸರು: Ed-KEA-DCET-2017 Application Fee collection Account
ಖಾತೆ ಸಂಖ್ಯೆ: 36843662415
IFSC ಸಂಖ್ಯೆ: SBIN0007080
ಹೆಚ್ಚಿನ ಮಾಹಿತಿಗಾಗಿ dte.kar.nic.in ಗಮನಿಸಿ


Click it and Unblock the Notifications











