ಹೊಮಿಯೋಪತಿ ಕೆರಿಯರ್... ಏನೆಲ್ಲಾ ಲಾಭವಿದೆ ಗೊತ್ತಾ?

ಹೊಮಿಯೋಪತಿಯಲ್ಲಿಯೂ ಅಲೋಪತಿ ತರಹ ಉತ್ತಮ ಕೆರಿಯರ್ ಅವಕಾಶಗಳಿವೆ ಮಾತ್ರವಲ್ಲದೇ ಹಣಕಾಸು ವಿಚಾರದಲ್ಲೂ ಇದು ಸಕ್ಸಸ್ ಜಾಬ್ ಎನಿಸಿಕೊಂಡಿದೆ.

ಈ ಜಗತ್ತು ಔಷಧ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹಲವಾರು ಆಶ್ಚರ್ಯಕರ ಸಂಗತಿಗಳನ್ನ ಒಳಗೊಂಡಿದೆ. ಆರೋಗ್ಯ ಹಾಗೂ ಔಷಧ ವಿಷಯಕ್ಕೆ ಬಂದ್ರೆ ಅದೆಷ್ಟೋ ಟೆಕ್ನಿಕ್ಸ್ ಹಾಗೂ ವಿಧಾನಗಳನ್ನ ನೀವು ನೋಡಬಹುದು.

ಹೊಮಿಯೋಪತಿ ಕೆರಿಯರ್... ಏನೆಲ್ಲಾ ಲಾಭವಿದೆ ಗೊತ್ತಾ?

ಇನ್ನು ಹೊಮಿಯೋಪತಿ ಒಂದು ರೀತಿಯ ಮೆಡಿಸನ್ ಏರಿಯಾ. ಹೊಮಿಯೋಪತಿ ಆಲೋಪತಿಯಷ್ಟು ಏನೂ ಫೇಮಸ್ ಅಲ್ಲ. ಅಷ್ಟೇ ಅಲ್ಲ ಹೆಚ್ಚಿನ ಜನರಿಗೆ ಇದರ ಬಗ್ಗೆ ಅಷ್ಟೊಂದು ತಿಳಿದಿಲ್ಲ ಕೂಡಾ. ಇನ್ನು ಹೆಚ್ಚಿನ ಮಂದಿ ಈ ಕೆರಿಯರ್ ಬಗ್ಗೆ ಏನು ತಿಳಿದುಕೊಂಡಿದ್ದಾರೆ ಎಂದ್ರೆ ಇವರು ಇತರ ಡಾಕ್ಟರ್ ಗಳಿಗಿಂತ ಕಡಿಮೆ ಸಂಪಾದಿಸುತ್ತಾರೆ ಎಂದು.

ಆದ್ರೆ ಅವರ ಅನಿಸಿಕೆ ತಪ್ಪು. ಹೊಮಿಯೋಪತಿಯಲ್ಲಿಯೂ ಅಲೋಪತಿ ತರಹ ಉತ್ತಮ ಕೆರಿಯರ್ ಅವಕಾಶಗಳಿವೆ ಮಾತ್ರವಲ್ಲದೇ ಹಣಕಾಸು ವಿಚಾರದಲ್ಲೂ ಇದು ಸಕ್ಸಸ್ ಜಾಬ್ ಎನಿಸಿಕೊಂಡಿದೆ.

ಟೂರಿಸ್ಟ್ ಗೈಡ್ ಆಗಿ ಕೆರಿಯರ್ ಹೇಗೆ ರೂಪಿಸಿಕೊಳ್ಳಬಹುದು!ಟೂರಿಸ್ಟ್ ಗೈಡ್ ಆಗಿ ಕೆರಿಯರ್ ಹೇಗೆ ರೂಪಿಸಿಕೊಳ್ಳಬಹುದು!

ಹೊಮಿಯೋಪತಿ ಎಂದರೇನು?

ಹೊಮಿಯೋಪತಿ ಪದವು ಗ್ರೀಕ್ ಪದ ಹೊಮಿಯೋ ಮತ್ತು ಪಾಥೋಸ್ ಎಂಬ ಪದದಿಂದ ಬಂದಿದೆ. ಹೊಮಿಯೋ ಅಂದ್ರೆ ಹೋಲಿಕೆ ಮತ್ತು ಪಾಥೋಸ್ ಅಂದ್ರೆ ಒಂದೇ ರೀತಿಯ ಚಿಕಿತ್ಸೆ ಎಂದರ್ಥ. ಜರ್ಮನ್ ವಿಜ್ಞಾನಿ ಡಾ. ಕ್ರಿಸ್ಟಿಯಾನ್ ಸಾಮ್ಯುಲ್ ಹಾಹ್ನೆಮಾನ್ನ್ ಈ ಚಿಕಿತ್ಸಾ ವಿಧಾನವನ್ನ ಅಭಿವೃದ್ಧಿಗೊಳಿಸಿದ್ದಾರೆ.

ಹೊಮಿಯೋಪತಿ ಡಾಕ್ಟರ್ ಆಗುವುದು ಹೇಗೆ?

  • ನೀವು ಹೊಮಿಯೋಪತಿ ಡಾಕ್ಟರ್ ಆಗಬೇಕು ಎಂದು ಅಂದುಕೊಂಡಿದ್ದರೆ 12ನೇ ತರಗತಿಯಲ್ಲೇ ಈ ಸಬ್‌ಜೆಕ್ಟ್ ನತ್ತ ಹೆಚ್ಚು ಫೋಕಸ್ ಮಾಡಲು ಪ್ರಾರಂಭಿಸಿ. ಬೋರ್ಡ್ ಎಕ್ಸಾಂ ವೇಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಬಯಾಲಾಜಿ ಸಬ್‌ಜೆಕ್ಟ್ ಆಯ್ಕೆ ಮಾಡಿಕೊಳ್ಳಬೇಕು.
  • ಎಂಬಿಬಿಎಸ್ ಗೆ ಹೇಗೆ ವಿದ್ಯಾರ್ಥಿಗಳು ತಯಾರು ಮಾಡಿಕೊಳ್ಳುತ್ತಾರೋ ಅದೇ ರೀತಿ ಹೊಮಿಯೋಪತಿ ಡಾಕ್ಟರ್ ಆಗಲು ಸಹ ಅಷ್ಟೇ ತಯಾರಿ ಅಗತ್ಯ. 5 ವರ್ಷ ಮೆಡಿಸನ್ ಹಾಗೂ ಒಂದು ವರ್ಷ ಹೌಸ್ ಸರ್ಜೆನ್ಸಿ ಕಲಿಯುವ ಅಗತ್ಯವಿದೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಈ ಸಬ್‌ಜೆಕ್ಟ್ ನಲ್ಲಿ 4 ವರ್ಷದ ಡಿಪ್ಲೋಮಾ ಕೋರ್ಸ್ ಕೂಡಾ ಮಾಡಬಹುದು.
  • ಬ್ಯಾಚುಲರ್ ಆಫ್ ಹೊಮಿಯೋಪತಿ ಸೈನ್ಸ್ ಕೋರ್ಸ್ ನೀಡುವ ಹಲವಾರು ಕಾಲೇಜುಗಳು ದೇಶದಲ್ಲಿ ಇವೆ. ಈ ಸೀಟುಗಳಿಗೆ ನೀವು ಆಲ್ ಇಂಡಿಯಾ ಮೆಡಿಕಲ್ ಎಕ್ಸಾಂ ಬರೆಯಬೇಕು.
  • ಇನ್ನು ಈ ಫೀಲ್ಡ್‌ನಲ್ಲಿ ವಿದ್ಯಾರ್ಥಿಳು ಇನ್ನೂ ಹೆಚ್ಚಿನ ಅಭ್ಯಾಸ ಮಾಡಬೇಕು ಎಂದು ಅಂದುಕೊಂಡಿದ್ದರೆ, ಹೊಮಿಯೋಪತಿ ವಿಷಯದಲ್ಲಿ ಎಂಡಿ ಕೋರ್ಸ್ ಗಳು ಕೂಡಾ ಇವೆ. ಎಂಡಿ ಕೋರ್ಸ್ ಮೂರು ವರ್ಷದ ಕೋರ್ಸ್ ಆಗಿದೆ. ಈ ಕೋರ್ಸ್ ನೀವು ಮಾಡಬೇಕೆಂದಿದ್ದರೆ ಮೊದಲಿಗೆ ಬಿಹೆಚ್ಎಂಎಸ್ ಕೋರ್ಸ್ ಮಾಡಿರಬೇಕು.
  • ಮುಂದಿನ ಸ್ಟೆಪ್ ರಿಸರ್ಚ್. ಹೊಮಿಯೋಪತಿಯಲ್ಲಿ ವಿದ್ಯಾರ್ಥಿಗಳು ರಿಸರ್ಚ್ ಕೂಡಾ ಮಾಡಬಹುದು.

ಬೆಂಗಳೂರು ನಗರದಲ್ಲಿ ಇರುವ ಫೇಮಸ್ ಇಂಜಿನೀಯರಿಂಗ್ ಕಾಲೇಜುಗಳು

ಹೊಮಿಯೋಪತಿಯಾಗಿ ಕೆರಿಯರ್ ಲೈಫ್:

ಇತ್ತೀಚಿಗಿನ ದಿನಗಳಲ್ಲಿ ಹೊಮಿಯೋಪತಿ ಡಾಕ್ಟರ್ ಗಳಿಗೆ ತುಂಬಾ ಉದ್ಯೋಗವಕಾಶಗಳಿವೆ.ಅವುಗಳು ಯಾವುವೆಂದ್ರೆ

  • ಸರ್ಕಾರಿ ಹಾಗೂ ಖಾಸಾಗಿ ಹೊಮಿಯೋಪತಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಫೀಸರ್ ಆಗಿ ವೃತ್ತಿ ಜೀವನ ಆರಂಭಿಸಬಹುದು
  • ಹೋಮಿಯೋಪತಿ ಔಷಧಾಲಯ, ಪೀಡಿಯಾಟ್ರಿಕ್ಸ್, ಡರ್ಮಟಾಲಜಿ, ಮನೋವೈದ್ಯಶಾಸ್ತ್ರ ಅಥವಾ ಬಂಜೆತನ ಮುಂತಾದ ವಿಭಾಗಗಳಲ್ಲಿ ಸ್ಪೇಶಲಿಸ್ಟ್ ಆಗಿ ದುಡಿಯಬಹುದು
  • ಸ್ವಲ್ಪ ವರ್ಷ ಹೊಮಿಯೋಪತಿ ಡಾಕ್ಟರ್ ಆಗಿ ದುಡಿದ ಬಳಿಕ ಪ್ರಾಧ್ಯಾಪಕರಾಗಿಯೂ ಕೆರಿಯರ್ ಆರಂಭಿಸಬಹುದು. ಅಥವಾ ರಿಸರ್ಚ್ ಫೆಲೋ ಆಗಿಯೂ ಕೂಡಾ ದುಡಿಯಬಹುದು.
  • ಬಿಹೆಚ್ಎಂಎಸ್ ಪದವೀಧರರು ತಮ್ಮದೇ ಆದ ಫರ್ಮಾಸಿ ಕೂಡಾ ತೆರೆಯಬಹುದು

ಹೊಮಿಯೋಪತಿಗೆ ಸಂಬಂಧಪಟ್ಟಂತೆ ಶಿಕ್ಷಣ ನೀಡುವ ಟಾಪ್ ಸಂಸ್ಥೆಗಳು:

  • ಭಾರತೀಶ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು (ಬಿಎಚ್ಎಂಸಿಎಚ್)
  • ಬಿ.ವಿ.ಯು ಹೋಮಿಯೋಪತಿಕ್ ಮೆಡಿಕಲ್ ಕಾಲೇಜ್
  • ಸರ್ಕಾರ ಹೋಮಿಯೋಪತಿ ವೈದ್ಯಕೀಯ ಕಾಲೇಜು (ಜಿಹೆಚ್ಎಂಸಿ)
  • ನ್ಯಾಷನಲ್ ಹೋಮಿಯೋಪತಿ ಇನ್ಸ್ಟಿಟ್ಯೂಟ್, ಕೊಲ್ಕತ್ತಾ
  • ಭಾರತಿ ವಿದ್ಯಾಪೀಠ ಹೋಮಿಯೋಪತಿ ವೈದ್ಯಕೀಯ ಕಾಲೇಜು, ಪುಣೆ

ನೀವು ಮಾದರಿ ಶಿಕ್ಷಕರಾಗಬೇಕೇ... ದೇಶದ ಟಾಪ್ 10 ಎಂಎಡ್ ಕಾಲೇಜುಗಳ ಲಿಸ್ಟ್!

For Quick Alerts
ALLOW NOTIFICATIONS  
For Daily Alerts

English summary
Homeopathy is one such area of medicine, which is still not as famous as allopathy. Many people are not sure about how effective the techniques are, and many believe that in terms of career there is very less that a doctor of Homeopathy can earn
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X