ಟೂರಿಸ್ಟ್ ಗೈಡ್ ಆಗಿ ಕೆರಿಯರ್ ಹೇಗೆ ರೂಪಿಸಿಕೊಳ್ಳಬಹುದು!

ನಮ್ಮ ಭಾರತವು ಪಾರಂಪರಿಕ ಹಿನ್ನೆಲೆಯನ್ನ ಒಳಗೊಂಡಿದೆ. ನಮ್ಮ ಸಂಸ್ಕೃತಿ ಇಲ್ಲಿ ಆಳವಾಗಿ ನೆಲೆಯೂರಿದೆ. ಅಷ್ಟೇ ಅಲ್ಲ ನಮ್ಮ ನೆಲದಲ್ಲಿ ಅದೆಷ್ಟೋ ರಾಜಮನೆತನದವರು ಆಳಿರುವ ಕುರುಹುಗಳು ಇಂದಿಗೂ ಇವೆ. ಅದೆಷ್ಟೋ ಇತಿಹಾಸದ ಕತೆಯನ್ನ ನಮ್ಮ ದೇಶ ಒಳಗೊಂಡಿದೆ. ಈ ಸಂಸ್ಕೃತಿ, ಇತಿಹಾಸವನ್ನ ಮುಂದಿನ ಪೀಳಿಗೆಗೂ ಹೇಳುವ ಜವಬ್ದಾರಿ ನಮ್ಮದು.

ಟೂರಿಸ್ಟ್ ಗೈಡ್ ಆಗಿ ಕೆರಿಯರ್ ಹೇಗೆ ರೂಪಿಸಿಕೊಳ್ಳಬಹುದು!

 

ಈ ಜವಬ್ದಾರಿ ಟೂರಿಸ್ಟ್ ಗೈಡ್ ಗಳ ಮೇಲೆ ಹೆಚ್ಚಾಗಿಯೇ ಇರುತ್ತದೆ. ಪ್ರವಾಸಿಗರಿಗೆ ಭಾರತದ ಇತಿಹಾಸವನ್ನ ಹೇಳುವ ಜವಬ್ದಾರಿ ಇವರದು . ಅಷ್ಟೇ ಅಲ್ಲ ನಮ್ಮ ದೇಶಕ್ಕೆ ಹೆಚ್ಚಿನ ಆದಾಯ ಬರುವುದು ಕೂಡಾ ಪ್ರವಾಸೋದ್ಯಮ ಇಲಾಖೆಯಿಂದ. ಇನ್ನು ಈ ಫೀಲ್ಡ್‌ನಲ್ಲಿ ನೀವು ಕೂಡಾ ಕೆರಿಯರ್ ರೂಪಿಸಿಕೊಳ್ಳಬಹುದು.

ವಿಶ್ವ ಪರಿಸರ ದಿನ... ಪರಿಸರ ವಿಜ್ಞಾನ ಕೋರ್ಸ್ ಮಾಡಿ ಕೈ ತುಂಬಾ ಸಂಪಾದನೆ ಮಾಡಬಹುದು!

ಈ ಫೀಲ್ಡ್ ನಲ್ಲಿ ಕೆರಿಯರ್ ರೂಪಿಸಿಕೊಳ್ಳಲು ಭಯವೇ. ಚಿಂತೆ ಬಿಡಿ. ಟೂರಿಸ್ಟ್ ಗೈಡ್ ಕೂಡಾ ಬೆಸ್ಟ್ ಉದ್ಯಮ. ಈ ಕ್ಷೇತ್ರದಲ್ಲಿ ಕೆರಿಯರ್ ರೂಪಿಸಿಕೊಳ್ಳಬೇಕಾದ್ರೆ ಏನೆಲ್ಲಾ ಅಗತ್ಯವಿದೆ ಎಂಬ ಮಾಹಿತಿ ಇದೀಗ ನಿಮಗೆ ಕೆರಿಯರ್ ಇಂಡಿಯಾ ನೀಡುತ್ತಿದೆ.

ಎಜ್ಯುಕೇಶನ್ ಹಿನ್ನೆಲೆ:

ಈ ಫೀಲ್ಡ್‌ಗೆ ಹೈಯರ್ ಎಜ್ಯುಕೇಶನ್ ಅಗತ್ಯವಿಲ್ಲ. ಹೈಸ್ಕೂಲ್ ಸರ್ಟಿಫಿಕೆಟ್ ಈ ಫೀಲ್ಡ್‌ಗೆ ಸಾಕು. ಆದ್ರೆ ನಿಮಗೆ ಇತಿಹಾಸದ ಬಗ್ಗೆ ಆಸಕ್ತಿ ಇರಬೇಕು. ಹೆಚ್ಚಿನ ಜನರು ಮಕ್ಕಳಾ ರಜಾ ಟೈಂನಲ್ಲಿ ಟೂರಿಸ್ಟ್ ಗೈಡ್ ಆಗಿ ಕೆಲಸ ಮಾಡಿ ಸಖತ್ ಹಣ ಸಂಪಾದಿಸಿಕೊಳ್ಳುತ್ತಾರೆ.

ಭಾರತದಲ್ಲಿರುವ ಟಾಪ್ 10 BEd ಕಾಲೇಜ್‌ಗಳು

ನೀವು ಕೂಡಾ ಬೆಸ್ಟ್ ಟೂರಿಸ್ಟ್ ಗೈಡ್ ಆಗಬೇಕು ಎಂತಿದ್ದರೆ, ಸ್ವಲ್ಪ ಎಫರ್ಟ್ ಹಾಕಬೇಕು. ಕೆಲವೊಂದು ಟ್ರೈನಿಂಗ್ ಸೆಶನ್ ಗಳಲ್ಲಿ ಪಾಲ್ಗೊಳ್ಳಿ. ಇದರಿಂದ ನೀವು ಕೂಡಾ ಬೆಸ್ಟ್ ಗೈಡ್ ಎನಿಸಿಕೊಳ್ಳುವಿರಿ.

ಕೌಶಲ್ಯ ಅಗತ್ಯ:

 • ಡೈರೆಕ್ಷನ್ ಬಗ್ಗೆ ಟೂರಿಸ್ಟ್ ಗೈಡ್ ಸರಿಯಾಗಿ ತಿಳಿದುಕೊಂಡಿರಬೇಕು
 • ಅದೆಷ್ಟೋ ಜನರ ಮಧ್ಯೆ ಕಳೆದುಹೋದಾಗ ಭಯಪಡಬಾರದು
 • ಟೂರಿಸ್ಟ್ ಗೆ ಕಂಫರ್ಟೇಬಲ್ ವಾತಾವರಣ ಇವರು ಸೃಷ್ಟಿಸಿಕೊಡಬೇಕು
 • ನೆನಪಿನ ಶಕ್ತಿ ಚೆನ್ನಾಗಿ ಇರಬೇಕು
 • ಪ್ರವಾಸಿಗರು ಏನೇ ಕೇಳಿದ್ರೂ ಥಟ್ ಎಂದು ಉತ್ತರಿಸಬೇಕು
 • ಯಾವುದೇ ಪಾರಂಪರಿಕ ತಾಣದ ಬಗ್ಗೆ ಇವರಿಗೆ ಮಾಹಿತಿ ತಿಳಿದಿರಬೇಕು
 • ವಿದೇಶಿ ಟೂರಿಸ್ಟ್ ಗಳ ಜತೆ ವಿನಯತೆಯಿಂದ ನಡೆದುಕೊಳ್ಳಬೇಕು
 • ಇಂಗ್ಲೀಷ್, ಹಿಂದಿ ಭಾಷೆ ತಿಳಿದಿರಬೇಕು ಜತೆಗೆ ವಿದೇಶಿ ಭಾಷೆ ತಿಳಿದಿದ್ದರೂ ಕೂಡಾ ಬೆಸ್ಟ್

ಕೆರಿಯರ್ :

ಈ ಫೀಲ್ಡ್‌ನಲ್ಲಿ ಕೆರಿಯರ್ ಬಗ್ಗೆ ಮಾತನಾಡುದಾದ್ರೆ ಸರ್ಕಾರಿ ಹಾಗೂ ಖಾಸಾಗಿ ಎರಡೂ ಕ್ಷೇತ್ರಗಳಲ್ಲೂ ಈ ಟೂರಿಸ್ಟ್ ಗೈಡ್ ಗಳಿಗೆ ಬೇಡಿಕೆ ಇದೆ. ಹೆಚ್ಚಿನ ಐತಿಹಾಸಿಕ ಪಾರಂಪರಿಕ ತಾಣವನ್ನ ಸರ್ಕಾರ ತನ್ನ ಅಧೀನ ಪಡಿಸಿಕೊಂಡಿದೆ. ಹಾಗಾಗಿ ಇಲ್ಲಿ ಸರ್ಕಾರಿ ಹುದ್ದೆಗಳು ಕೂಡಾ ನಿಮಗೆ ಲಭ್ಯವಾಗಲಿದೆ.

 

ಇನ್ನು ಕ್ಲಬ್ ಮಹೇಂದರ ಅಥವಾ ಎಸ್‌ಒಟಿಸಿ ಸಂಸ್ಥೆ ಸೇರಿದಂತೆ ಅನೇಖ ಖಾಸಾಗಿ ಸಂಸ್ಥೆಗಳಲ್ಲಿಯೂ ನಿಮಗೆ ಆಕರ್ಷಕ ಸ್ಯಾಲರಿ ಜತೆ ಟೂರಿಸ್ಟ್ ಗೈಡ್ ಆಗಿ ದುಡಿಯಬಹುದು.

ವೇತನ:

ಇಲ್ಲಿ ಗಂಟೆಗಳ ಆಧಾರದ ಮೇಲೆ ನೀವು ಸ್ಯಾಲರಿ ಪಡೆಯಬಹುದಾಗಿದೆ. ಪ್ರವಾಸೋದ್ಯಮ ಇಲಾಖೆ ಪ್ರಕಾರ ಸರ್ಕಾರಿ ಟೂರಿಸ್ಟ್ ಗೈಡ್ ಗಳಿಗೆ ಸುಮಾರು 25,000 ರೂ ವೇತನ ಸಿಗುತ್ತದೆ. ಆದ್ರೆ ಪ್ರೈವೆಟ್ ಸೆಕ್ಟರ್ ಗಳಲ್ಲಿ ಈ ವೇತನ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ.

ಹುದ್ದೆಯ ಕಂಡೀಶನ್ಸ್ ಹಾಗೂ ಚ್ಯಾಲೆಂಜಸ್:

 • ಟೂರಿಸ್ಟ್ ಗೈಡ್ ಗಳ ವರ್ಕಿಂಗ್ ಟೈಂ ಹೆಚ್ಚಾಗಿ ಹೀಗಿರುತ್ತೆ. ಸಂಜೆ 6 ಗಂಟೆ ಹಾಗೂ ಬೆಳಗ್ಗೆ 9 ಗಂಟೆ ಮೊದಲು
 • ಯಾವುದೇ ಹವಮಾನ ಕಂಡೀಶನ್ ಇದ್ರೂ ಇವರು ಕೆಲಸ ಮಾಡಬೇಕಾಗುತ್ತದೆ
 • ಕೆಲವೊಮ್ಮೆ ತುಂಬಾ ನಡೆಯಬೇಕಾಗುತ್ತದೆ
 • ಪ್ರತೀ ದಿನ ಹೊಸ ಹೊಸ ವ್ಯಕ್ತಿಗಳ ಭೇಟಿ

ಬೆಂಗಳೂರು ನಗರದಲ್ಲಿ ಇರುವ ಫೇಮಸ್ ಇಂಜಿನೀಯರಿಂಗ್ ಕಾಲೇಜುಗಳು

For Quick Alerts
ALLOW NOTIFICATIONS  
For Daily Alerts

English summary
India is a land of heritage. Our culture is so deep-rooted that there are hundreds of relics to prove the same. Be it the valour of the kings and their kingdoms of the Rajputs of Rajasthan or the ruins of Nalanda in Bihar, Indian culture has never failed to keep us in awe. Considering the sheer number of stories and folklore of the land, it is our duty as a nation to preserve the same and ensure that the world gets to know of the same
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more