ಸೋಶಲ್ ವರ್ಕರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳುವುದು ಹೇಗೆ?

ಕ್ವಾಲಿಟಿ ಹಾಗೂ ಗೌರವ ಒಳಗೊಂಡಂತೆ ಕೆಲವೊಂದು ಪ್ರಾಮುಖ್ಯತೆಯಿಂದಾಗಿ ಸೋಶಲ್ ವರ್ಕರ್ ಅವರಿಗೆ ಸಾಮಾಜದಲ್ಲಿ ವಿಶೇಷವಾದ ಗೌರವ, ಸ್ಥಾನಮಾನವಿದೆ. ಮಾನವ ಹಕ್ಕು ಹಾಗೂ ಸಮಾಜಿಕ ನ್ಯಾಯ ಈ ಪ್ರೊಫೆಶನ್ ನ ಮುಖ್ಯ ತತ್ವವಾಗಿದೆ. ಈ ಹುದ್ದೆಯಿಂದ ಸಿಗುವ ಸಂತೃಪ್ತಿ ಹಾಗೂ ನೆಮ್ಮದಿಯಿಂದ ಹಲವಾರು ವರ್ಷಗಳಿಂದ ಹಲವಾರು ಮಂದಿ ಸೋಶಲ್ ವರ್ಕ್ ನ್ನೇ ತಮ್ಮ ಪ್ರೊಫೆಶನಲ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಸೋಶಲ್ ವರ್ಕರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳುವುದು ಹೇಗೆ?

 

ಸೋಶಲ್ ವರ್ಕರ್ ಆಗುವುದು ಹೇಗೆ?

ಈ ಪ್ರೊಫೆಶನ್ ಗೆ ವಿಶೇಷವಾಗಿ ಯಾವುದೇ ಸಬ್‌ಜೆಕ್ಟ್ ಆಯ್ಕೆಯ ಅಗತ್ಯವಿಲ್ಲ. ಸೋಶಲ್ ವರ್ಕ್ ವಿಷಯದಲ್ಲಿ ಬ್ಯಾಚುಲರ್ ಪದವಿ ಪಡೆದಿದ್ರೆ ಸಾಕು ಈ ಪ್ರೊಫೆಶನ್ ಗೆ ಹೆಚ್ಚು ಫೋಕಸ್ ಮಾಡಬಹುದು. 12ನೇ ತರಗತಿ ಬಳಿಕ ಯಾರಿಗೆ ಈ ಪ್ರೊಫೆಶನ್ ಆಯ್ಕೆ ಮಾಡಬೇಕೋ ಅಂದುಕೊಂಡಿರುತ್ತೀರೋ ಅವರು ಬಿಎಸ್ ಡಬ್ಲ್ಯು ಇಲ್ಲ ಬಿಎ ಕೋರ್ಸನ್ನ ಆಯ್ಕೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ ಈ ಸಬ್‌ಜೆಕ್ಟ್ ನಲ್ಲಿ ನಿವು ಸ್ನಾತಕೋತ್ತರ ಪದವಿ ಕೂಡಾ ಪಡೆಯಬಹುದು.

ಎಷ್ಟೇ ಡಿಗ್ರಿ ಇದ್ರೂ ನೋ ಯೂಸ್... ಈ ಅರ್ಹತೆ ನಿಮ್ಮಲ್ಲಿ ಇದೆಯಾ ಕೆಲಸ ಗ್ಯಾರಂಟಿ!

ಸೋಶಲ್ ವರ್ಕ್ ಮಾಡಲು ಇಚ್ಛಿಸುವವರು ಈ ಸಬ್‌ಜೆಕ್ಟ್ ನಲ್ಲಿ ಮಾಸ್ಟರ್ ಆಫ್ ಸೋಶಲ್ ವರ್ಕ್ ಪದವಿ ಕೂಡಾ ಪಡೆಯಬಹುದು ಈ ಎರಡು ವರ್ಷದ ಸ್ನಾತಕೋತ್ತರ ಪದವಿ ಬಳಿಕ ಎಂಫಿಲ್ ಅಥವಾ ಪಿಹೆಚ್ ಡಿ ಕೂಡಾ ಮಾಡಬಹುದು.

ಸರ್ಕಾರಿ ಸಂಸ್ಥೆಗಳಲ್ಲಿ ಸೋಶಲ್ ವರ್ಕ್ ಆಗಿ ದುಡಿಯುವುದು ಹೇಗೆ:

ಸರ್ಕಾರಿ ಸಂಸ್ಥೆಗಳಲ್ಲಿ ಸೋಶಲ್ ವರ್ಕ್ ಗೆ ಸಂಬಂಧಪಟ್ಟಂತೆ ಹಲವಾರು ಹುದ್ದೆಗಳಿವೆ. ಸರ್ಕಾರಿ ಸಂಸ್ಥೆಗಳಲ್ಲಿನ ಸೋಶಲ್ ವರ್ಕರ್ ಗಳು, ಜಾಗೃತಿ ಮೂಡಿಸುವ ಕಾರ್ಯ ಮೊದಲು ಮಾಡುತ್ತಾರೆ. ಮಕ್ಕಳ ಕಲ್ಯಾಣ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕೆಲಸಗಳನ್ನ ಇವರು ಮಾಡಬೇಕಾಗುತ್ತದೆ.

ಸಕ್ಸಸ್ ಫುಲ್ ಪ್ರೆಸಂಟೇಶನ್ ... ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದ ಹೇಗೆ ?

ಇನ್ನು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಪಡೆಯಬೇಕಾದ್ರೆ ಅಭ್ಯರ್ಥಿಗಳು ಅಧೀಕೃತ ವಿಶ್ವವಿದ್ಯಾನಿಲಯದಿಂದ ಸೋಶಲ್ ವರ್ಕ್ ಗೆ ಸಂಬಂಧಪಟ್ಟ ಸಬ್‌ಜೆಕ್ಟ್ ನಲ್ಲಿ ಪಾಸಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಷ್ಟೇ ಅಲ್ಲ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಅಭಿವೃದ್ಧಿ, ಪರಿಸರ ವಿಜ್ಞಾನ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಡಿಪ್ಲೋಮಾ ಕೋರ್ಸ್ ಪಡೆದಿರಬೇಕು.

 

ಸರ್ಕಾರಿ ಸಂಸ್ಥೆಗಳಲ್ಲಿ ಸೋಶಲ್ ವರ್ಕರ್ ಹುದ್ದೆ:

ಈ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಸ್ಟೇಟ್ ಹಾಗೂ ಸ್ಥಳೀಯ ಸರ್ಕಾರ ಏಜೆನ್ಸಿಗಳು ನೇಮಕಾತಿಯ ಪ್ರಕಟಣೆ ಹೊರಡಿಸುತ್ತವೆ. ಇನ್ನೂ ಎಂಎಸ್‌ಡಬ್ಲ್ಯೂ ಆದವರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

ವಿದ್ಯಾಭ್ಯಾಸ ಜತೆ ಜತೆಗೆ ಹಣ ಸಂಪಾದನೆ ಹೇಗೆ?

ಇನ್ನೂ ಸರ್ಕಾರ ಸಂಸ್ಥೆಯಲ್ಲಿನ ಉನ್ನತ ಹುದ್ದೆಗಳಾದ ಅಸಿಸ್ಟೆಂಟ್ ಡೈರೆಕ್ಟರ್, ಡಿಸ್ಟ್ರಿಕ್ಟ್ ಕಂಸಲ್ಟೆಂಟ್, ಪ್ರೋಗ್ರಾಂ ಕೋರ್ಡಿನೇಟರ್, ಪ್ರಾಜೆಕ್ಟ್ ಕೋರ್ಡಿನೇಟರ್ ಸೇರಿದಂತೆ ಇನ್ನಿತ್ತರ ಹುದ್ದೆಗಳಲ್ಲಿ ಕೆಲಸ ಪಡೆಯಬೇಕಾದ್ರೆ ನೀವು ಪರೀಕ್ಷೆಗೆ ಹಾಜರಾಗಬೇಕು ಬಳಿಕ ಸಂದರ್ಶನವನ್ನ ಕೂಡಾ ನೀವು ಎದುರಿಸಬೇಕು. ಸ್ಟಾಫ್ ಸೆಲಕ್ಷನ್ ಕಮಿಷನ್ ಈ ಪರೀಕ್ಷೆಯನ್ನ ಆಯೋಜಿಸುತ್ತದೆ. ಈ ಮೇಲೆ ಹೇಳಿದ ಹುದ್ದೆಗಳನ್ನ ಹೊರತು ಪಡಿಸಿದ್ರೆ ಸರ್ಕಾರದ ಅಡಿಯಲ್ಲಿ ಬರುವ ಅನೇಕ ಎನ್‌ಜಿಓ ಸಂಸ್ಥೆಗಳ ಜತೆಗೂಡಿ ನೀವು ಕೆಲಸ ಮಾಡಬಹುದಾಗಿದೆ.

ಬರೀ ಪುಸ್ತಕದ ಬದನೆಕಾಯಿ ಮಾತ್ರವಲ್ಲ ಈ ಬಗ್ಗೆಯೂ ಸ್ಟುಡೆಂಟ್ಸ್ ಗೆ ಕ್ಲಾಸ್ ಮಾಡಿ !

For Quick Alerts
ALLOW NOTIFICATIONS  
For Daily Alerts

English summary
Social workers will enjoy the highest degree of respect in our society because of their values, which are based on the equality and dignity for all. The major focus of social workers will be on developing human potential. Human rights and social justice are the two things that drive this profession. Over the years, many people have started opting for social work as a profession because it gives great job satisfaction and is a remunerative job.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more