ಇಂಡಿಯನ್ ಏರ್‌ಪೋರ್ಸ್ ನಲ್ಲಿ ಏರ್‌ಮ್ಯಾನ್ ಆಗುವುದು ಹೇಗೆ?

ನೀವು ಕೂಡಾ ಏರ್‌ಪೋರ್ಸ್ ನಲ್ಲಿ ಹುದ್ದೆ ಅಲಂಕರಿಸಬೇಕು ಎಂದು ಅಂದುಕೊಂಡಿದ್ದರೆ ನಿಮಗೆ ಇಲ್ಲಿ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ದೇಶದ ಮೂರು ಡಿಫೆನ್ಸ್ ಸರ್ವೀಸ್ ಹುದ್ದೆಗಳಲ್ಲಿ ಇಂಡಿಯನ್ ಏರ್‌ಫೋರ್ಸ್ ಕೂಡಾ ಒಂದು. ದೇಶವನ್ನ ರಕ್ಷಿಸುವ ಕಾಯಕ ಇವರು ಮಾಡುತ್ತಾರೆ. ಪ್ರತೀ ವರ್ಷ ಐಎಎಫ್ ಏರ್‌ಮ್ಯಾನ್ ಸೇರಿದಂತೆ ನೂರಕ್ಕೂ ಅಧಿಕ ಅಭ್ಯರ್ಥಿಗಳನ್ನ ವಿವಿಧ ಹುದ್ದೆಗಳಿಗೆ ನೇಮಕಮಾಡುತ್ತದೆ. ನೀವು ಕೂಡಾ ಏರ್‌ಪೋರ್ಸ್ ನಲ್ಲಿ ಹುದ್ದೆ ಅಲಂಕರಿಸಬೇಕು ಎಂದು ಅಂದುಕೊಂಡಿದ್ದರೆ ನಿಮಗೆ ಇಲ್ಲಿ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಇಂಡಿಯನ್ ಏರ್‌ಪೋರ್ಸ್ ನಲ್ಲಿ ಏರ್‌ಮ್ಯಾನ್ ಆಗುವುದು ಹೇಗೆ?

ಈ ಕೋರ್ಸ್ ನೀವು ಮಾಡಿದ್ದಲ್ಲಿ ಕೆಲಸ ಗ್ಯಾರಂಟಿ...!?ಈ ಕೋರ್ಸ್ ನೀವು ಮಾಡಿದ್ದಲ್ಲಿ ಕೆಲಸ ಗ್ಯಾರಂಟಿ...!?

ಇಂಡಿಯನ್ ಏರ್‌ಪೋರ್ಸ್ ನಲ್ಲಿ ಏರ್‌ಮ್ಯಾನ್ ಆಗುವುದು ಹೇಗೆ?

ಸೆಂಟ್ರಲ್ ಏರ್‌ಮ್ಯಾನ್ ಸೆಲೆಕ್ಷನ್ ಬೋರ್ಡ್ ಆಯೋಜಿಸುವ ಪರೀಕ್ಷೆಯನ್ನ ಅಭ್ಯರ್ಥಿಗಳು ಎದುರಿಸಬೇಕು. ಹುದ್ದೆಗೆ ಅನುಸಾರವಾಗಿ ಏರ್‌ಮ್ಯಾನ್ ಆಯ್ಕೆ ಮಾಡಲಾಗುತ್ತದೆ. ಏರ್‌ಮ್ಯಾನ್ ಹುದ್ದೆ ವಿಭಾಗದ ಅಡಿಯಲ್ಲಿ 5 ಹುದ್ದೆಗಳು ಬರುತ್ತದೆ ಅವು ಯಾವುವುವೆಂದರೆ

ಗ್ರೂಪ್ ಎಕ್ಸ್ ಟ್ರೇಡ್ಸ್ :

ಮ್ಯಾಥಮ್ಯಾಟಿಕ್ಸ್, ಫಿಸಿಕ್ಸ್ ಹಾಗೂ ಇಂಗ್ಲೀಷ್‌ ವಿಷಯದಲ್ಲಿ 12 ನೇ ಪಾಸು ಮಾಡಿಬೇಕು. ಜತೆಗೆ ಇಂಜಿನೀಯರಿಂಗ್ ನ ಯಾವುದೇ ವಿಭಾಗದಲ್ಲಿ ಮೂರು ವರ್ಷ ಡಿಪ್ಲೋಮಾ ಕೋರ್ಸ್ ಮಾಡಿರಬೇಕು. ಇದಕ್ಕೆ ವಯೋಮಿತಿ 21 ನಿಗಧಿಗೊಳಿಸಲಾಗಿದೆ.

ಹೊಮಿಯೋಪತಿ ಕೆರಿಯರ್... ಏನೆಲ್ಲಾ ಲಾಭವಿದೆ ಗೊತ್ತಾ?ಹೊಮಿಯೋಪತಿ ಕೆರಿಯರ್... ಏನೆಲ್ಲಾ ಲಾಭವಿದೆ ಗೊತ್ತಾ?

ಗ್ರೂಪ್ ಎಕ್ಸ್ ಎಜ್ಯುಕೇಶನ್ ಇಂಸ್ಟ್ರಕ್ಟರ್ ಟ್ರೇಡ್ :

ಇಂಗ್ಲೀಷ್ ಸಬ್‌ಜೆಕ್ಟ್ ಜತೆ ಬಿಎ, ಅಥವಾ ಪಿಸಿಕ್ಸ್, ಸೈಕಾಲಾಜಿ, ಕೆಮೆಸ್ಟ್ರಿ, ಮ್ಯಾಥಮ್ಯಾಟಿಕ್ಸ್, ಐಟಿ, ಕಂಪ್ಯೂಟರ್ ಸೈನ್ಸ್, ಸ್ಟಾಟಿಸ್ಟಿಕ್ ಯಾವುದಾದ್ರೂ ಒಂದು ಸಬ್‌ಜೆಕ್ಟ್ ಜತೆ ಬಿಎಸ್ ಸಿ ಪದವಿ, ಅಥವಾ ಬಿಸಿಎ ಯಲ್ಲಿ ಕನಿಷ್ಟ ಶೇ. 50 ಅಂಕ ಗಳಿಸಿ ಪಾಸಾಗಿರಬೇಕು. ಬಿಎಡ್ ವಿದ್ಯಾರ್ಥಿಗಳು ಕೂಡಾ ಈ ಹುದ್ದೆಗೆ ಅರ್ಹರು. ಇದಕ್ಕೆ ವಯೋಮಿತಿ ೨೫ ನಿಗಧಿಗೊಳಿಸಲಾಗಿದೆ.

ಗ್ರೂಪ್ ವೈ ಟ್ರೇಡ್ಸ್ :

12ನೇ ತರಗತಿ ಪಾಸು ಮಾಡಿರಬೇಕು. ಇದಕ್ಕೆ ವಯೋಮಿತಿ 21 ನಿಗಧಿಗೊಳಿಸಲಾಗಿದೆ.ಗ್ರೂಪ್ ವೈ ಮೆಡ್ ಅಸಿಸ್ಟ್ ಟ್ರೇಡ್: ಫಿಸಿಕ್ಸ್, ಕೆಮೆಸ್ಟ್ರಿ, ಬಯಾಲಾಜಿ ಮತ್ತು ಇಂಗ್ಲೀಷ್ ಸಬ್‌ಜೆಕ್ಟ್ ಸೇರಿದಂತೆ 12ನೇ ತರಗತಿ ಪಾಸು ಮಾಡಿರಬೇಕು. ಇದಕ್ಕೆ ವಯೋಮಿತಿ 21 ನಿಗಧಿಗೊಳಿಸಲಾಗಿದೆ.

ಟೂರಿಸ್ಟ್ ಗೈಡ್ ಆಗಿ ಕೆರಿಯರ್ ಹೇಗೆ ರೂಪಿಸಿಕೊಳ್ಳಬಹುದು!ಟೂರಿಸ್ಟ್ ಗೈಡ್ ಆಗಿ ಕೆರಿಯರ್ ಹೇಗೆ ರೂಪಿಸಿಕೊಳ್ಳಬಹುದು!

ಗ್ರೂಪ್ ವೈ ಮ್ಯೂಜಿಷಿಯನ್ ಟ್ರೇಡ್ :

12ನೇ ತರಗತಿ ಪಾಸು ಮಾಡಿರಬೇಕು. ಟ್ರಂಪೆಟ್, ಬಾಸ್, ವಾಯಿಲಿನ್, ಸೆಕ್ಸಫೋನ್, ಗೀಟರ್, ಕೀಬೋರ್ಡ್ ಸೇರಿದಂತೆ ಮ್ಯೂಸಿಕ್ ಜಗತ್ತಿಗೆ ಸಂಬಂಧಪಟ್ಟ ಇನ್ನಿತ್ತರ ಇಂಸ್ಟ್ರುಮೆಂಟ್ ಗಳ ಬಗ್ಗೆ ತಿಳಿದಿರಬೇಕು.

ದೈಹಿಕ ಹಾಗೂ ಮೆಡಿಕಲ್ ಪರೀಕ್ಷೆಗಳು:

ಅಭ್ಯರ್ಥಿಗಳು 152.2 ಸೆ.ಮೀ ಉದ್ದವಿರಬೇಕು. ಉದ್ದಕ್ಕೆ ತಕ್ಕದಾದಷ್ಟೇ ತೂಕ ಹೊಂದಿರಬೇಕು. ಎದೆಯಳತೆ ಹಿಗ್ಗಿಸಿದಾದ ಕನಿಷ್ಟ 75 ಸೆಮೀ ಇರಬೇಕು ಹಾಗೂ ಕಣ್ಣು ದೃಷ್ಟಿ 6/12 ಇರಬೇಕು.

ಅಭ್ಯರ್ಥಿಗಳ ಆಯ್ಕೆ ಹೇಗೆ:

ಬೆಂಗಳೂರು ನಗರದಲ್ಲಿ ಇರುವ ಫೇಮಸ್ ಇಂಜಿನೀಯರಿಂಗ್ ಕಾಲೇಜುಗಳುಬೆಂಗಳೂರು ನಗರದಲ್ಲಿ ಇರುವ ಫೇಮಸ್ ಇಂಜಿನೀಯರಿಂಗ್ ಕಾಲೇಜುಗಳು

ಸಿಎಸ್ಎಬಿಯು ಅಭ್ಯರ್ಥಿಗಳನ್ನ ಲಿಖಿತ ಪರೀಕ್ಷೆ ಹಾಗೂ ಫಿಸಿಕಲ್ ಫಿಟ್ ನೆಸ್ ಮೂಲಕ ಆಯ್ಕೆ ಮಾಡುತ್ತದೆ. ಇಂಗ್ಲೀಷ್, ಮ್ಯಾಥಮ್ಯಾಟಿಕ್ಸ್, ಫಿಸಿಕ್ಸ್ ಹಾಗೂ ರೀಸನಿಂಗ್ ಸೆಕ್ಷನ್ ಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನ ಫಿಸಿಕಲ್ ಫಿಟ್ ನೆಸ್ ಟೆಸ್ಟ್ ಗೆ ಕರೆಸಲಾಗುತ್ತದೆ.

ಸೆಂಟ್ರಲ್ ಆರ್ಮ್ಡ್ ಸೆಲೆಕ್ಷನ್ ಬೋರ್ಡ್:

1980 ರಲ್ಲಿ ಸೆಂಟ್ರಲ್ ಆರ್ಮ್ಡ್ ಸೆಲೆಕ್ಷನ್ ಬೋರ್ಡ್ ಸಂಸ್ಥೆಯನ್ನ ಸ್ಥಾಪಿಸಲಾಯಿತು. ಐಎಎಫ್ ಗೆ ಏರ್‌ಮ್ಯಾನ್ ಮತ್ತು ಎನ್‌ಸಿಎಸ್ (ಇ) ಹುದ್ದೆಗೆ ಅಭ್ಯರ್ಥಿಗಳನ್ನ ನೇಮಕಗೊಳಿಸುವ ಜವಬ್ದಾರಿ ಈ ಸಂಸ್ಥೆ ನೋಡಿಕೊಳ್ಳುತ್ತದೆ. ಉತ್ತಮ ವಿಧಾನದ ಮೂಲಕ ಅಭ್ಯರ್ಥಿಗಳನ್ನ ನೇಮಕಮಾಡಿಕೊಳ್ಳುತ್ತದೆ. ಶೆಡ್ಯುಲ್ ಟೆಸ್ಟ್, ಆಲ್‌ ಇಂಡಿಯಾ ಸೆಲೆಕ್ಟ್ ಲಿಸ್ಟ್ ತಯಾರುಮಾಡುವುದು, ರಿಕ್ರ್ಯುಮೆಂಟ್ ರ್ಯಾಲಿಗಳು ಮುಂತಾದುದನ್ನ ಆಯೋಜಿಸುವ ಹೊಣೆ ಈ ಸಂಸ್ಥೆಯದು. 15 ಸೆಂಟರ್ ಗಳಲ್ಲಿ ಏರ್‌ಮ್ಯಾನ್ ನೇಮಕಾತಿಯನ್ನ ಈ ಸಂಸ್ಥೆ ನೋಡಿಕೊಂಡಿದೆ.

ನೀವು ಮಾದರಿ ಶಿಕ್ಷಕರಾಗಬೇಕೇ... ದೇಶದ ಟಾಪ್ 10 ಎಂಎಡ್ ಕಾಲೇಜುಗಳ ಲಿಸ್ಟ್!ನೀವು ಮಾದರಿ ಶಿಕ್ಷಕರಾಗಬೇಕೇ... ದೇಶದ ಟಾಪ್ 10 ಎಂಎಡ್ ಕಾಲೇಜುಗಳ ಲಿಸ್ಟ್!

For Quick Alerts
ALLOW NOTIFICATIONS
For Daily Alerts

English summary
Indian Air Force (IAF), one amongst the three defence services in India, has been involved in many wars to safeguard the country's airspace. Every year, the IAF recruit hundreds of candidates for various positions that include Airman. If you are an aspiring candidate and want to fly with glory, the post of an Airman is the best career option.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X